ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಅನುಭವ ಮಂಟಪ ಅನಾವರಣ

|
Google Oneindia Kannada News

ನವದೆಹಲಿ, ಜನವರಿ 26: ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಬವಸಣ್ಣನ ಅನುಭವ ಮಂಪಟ ಕಣ್ಮನ ಸೆಳೆಯಿತು.

ಚಿತ್ರದುರ್ಗದ ಹೊಸದುರ್ಗ ತಾಲೂಕಿನ ಸಾಣೆಹಳ್ಳಿ ತರಳುಬಾಳು ಶಾಖಾ ಮಠದ ಶಿವಕುಮಾರ ರಂಗಪ್ರಯೋಗ ಶಾಲೆಯ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ಮೊದಲ ಬಾರಿಗೆ ಕೇರಳದ ಎಲ್ಲಾ ಮಸೀದಿಗಳಲ್ಲಿ ತ್ರಿವರ್ಣ ಧ್ವಜಾರೋಹಣ ಮೊದಲ ಬಾರಿಗೆ ಕೇರಳದ ಎಲ್ಲಾ ಮಸೀದಿಗಳಲ್ಲಿ ತ್ರಿವರ್ಣ ಧ್ವಜಾರೋಹಣ

ಸಾಣೇಹಳ್ಳಿಯ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ 28 ಜನ ಕಲಾವಿದರು, ವಿದ್ಯಾರ್ಥಿಗಳು ಹಾಗೂ ಈ ಹಿಂದೆ ಶಾಲೆಯಲ್ಲಿ ತರಬೇತಿ ಪಡೆದವರು ಗಣರಾಜ್ಯೋತ್ಸವದ ಪರೇಡ್‍ನಲ್ಲಿ ಪಾಲ್ಗೊಂಡಿದ್ದರು.

Karnatakas Sanehalli Theatre Artists Showcase Anubhava Mantapa

ಜಗತ್ತಿನ ಮೊದಲ ಸಂಸತ್ ಎನಿಸಿದ್ದ 12ನೇ ಶತಮಾನದ ಅನುಭವ ಮಂಟಪ ಸ್ತಬ್ಧ ಚಿತ್ರ ಪ್ರದರ್ಶನಗೊಂಡಿದ್ದು, ಸಾಣೆಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ನಡೆದ 'ಮತ್ತೆ ಕಲ್ಯಾಣ' ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ ಸಂಚಾರ ಮಾಡಿದ್ದ ಈ ಸ್ತಬ್ಧಚಿತ್ರದ ಪ್ರತಿರೂಪ ಇಂದು ರಾಷ್ಟ್ರ ರಾಜಧಾನಿಯಲ್ಲಿ ಪ್ರದರ್ಶನಗೊಂಡಿದೆ.

ಅವರೊಂದಿಗೆ ತಂಡದ ಮುಖ್ಯಸ್ಥರಾಗಿ ರಂಗಶಾಲೆಯ ಪ್ರಾಚಾರ್ಯ ಜಗದೀಶ್ ಆರ್ ನೇತೃತ್ವ ವಹಿಸಿದ್ದರು.ರಾಜಪಥ ಪರೇಡ್‍ನಲ್ಲಿ ಕರ್ನಾಟಕವು ಈವರೆಗೂ ಒಮ್ಮೆ ಪ್ರಥಮ, ಎರಡು ಬಾರಿ ದ್ವಿತೀಯ ಹಾಗೂ ಎರಡು ತೃತೀಯ ಬಹುಮಾನ ಗೆದ್ದುಕೊಂಡಿತ್ತು.

ಕಳೆದ ಹನ್ನೊಂದು ವರ್ಷಗಳಿಂದ ರಾಜಪಥ್ ಪರೇಡ್‍ನಲ್ಲಿ ಕರ್ನಾಟಕದ ಸ್ತಬ್ಧ ಚಿತ್ರ ಭಾಗಿಯಾಗುತ್ತಿದ್ದು, ಈ ಬಾರಿ ಅನುಭವ ಮಂಟಪ ವಿಷಯ ವಸ್ತುವಿಗೆ ಕೇಂದ್ರ ರಕ್ಷಣಾ ಇಲಾಖೆ ಒಪ್ಪಿಗೆ ಸೂಚಿಸಿತ್ತು.

English summary
Theatre village artistes from Sanehalli performed on the national platform on Republic Day In Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X