ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನರ್ಹ ಶಾಸಕರ ತೀರ್ಪು: ಸ್ಪೀಕರ್ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

|
Google Oneindia Kannada News

Recommended Video

Supreme Court Pronounces It's Verdict of disqualified MLAs | Oneindia Kannada

ಬೆಂಗಳೂರು, ನವೆಂಬರ್ 13: ರಾಜ್ಯಾದ್ಯಂತ ಕುತೂಹಲ ಕೆರಳಿಸಿದ್ದ ಕರ್ನಾಟಕದ 17 ಶಾಸಕರ ಅನರ್ಹತೆಯ ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್ ಬುಧವಾರ ಪ್ರಕಟಿಸಿದೆ.

ಕಾಂಗ್ರೆಸ್ 14, ಜೆಡಿಎಸ್ ನ 3 ಶಾಸಕರನ್ನು ಕಳೆದ ಜುಲೈ ತಿಂಗಳಿನಲ್ಲಿ ಆಗಿನ ಸ್ಪೀಕರ್ ಆಗಿದ್ದ ಕೆ.ಆರ್.ರಮೇಶ್ ಕುಮಾರ್ ಅವರು ಅನರ್ಹಗೊಳಿಸಿದ್ದರು.

"ಸಂಸದೀಯ ವ್ಯವಸ್ಥೆಯಲ್ಲಿ ನೈತಿಕತೆ ಮುಖ್ಯ. ಈ ನೈತಿಕತೆ ಆಡಳಿತ ಪಕ್ಷ, ವಿರೋಧ ಪಕ್ಷಕ್ಕೂ ಇರಬೇಕು" ಎಂದು ನ್ಯಾಯಮೂರ್ತಿ ಎನ್.ವಿ. ರಮಣ ಅಭಿಪ್ರಾಯಪಟ್ಟರು.

Live Updates : ಸುಪ್ರೀಂತೀರ್ಪು : ಅನರ್ಹರು ಚುನಾವಣಾ ಕಣಕ್ಕೆLive Updates : ಸುಪ್ರೀಂತೀರ್ಪು : ಅನರ್ಹರು ಚುನಾವಣಾ ಕಣಕ್ಕೆ

"ಶಾಸಕರ ನಡೆಯನ್ನು ಪ್ರೋತ್ಸಾಹಿಸುವುದಕ್ಕೆ ಸಾಧ್ಯವಿಲ್ಲ. ಹೈಕೋರ್ಟ್ ಗೆ ಹೋಗದೆ, ನೇರ ಸುಪ್ರೀಂ ಕೋರ್ಟಿಗೆ ಬರುವ ಅಗತ್ಯ ಏನಿತ್ತು?" ಎಂದು ಸುಪ್ರೀಂ ಕೋರ್ಟ್ ಅನರ್ಹ ಶಾಸಕರನ್ನು ಪ್ರಶ್ನಿಸಿದೆ.

ಸಚಿವ ಸ್ಥಾನವಿಲ್ಲ

ಸಚಿವ ಸ್ಥಾನವಿಲ್ಲ

ಶಾಸಕರ ಅನರ್ಹತೆಯನ್ನು ಎತ್ತಿಹಿಡಿಯುವುದರಿಂದ ಅವರ ಶಾಸಕ ಸ್ಥಾನ ತೆರವಾಗುತ್ತದೆ. ಆಗ ಅವರ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುವುದು ಅನಿವಾರ್ಯವಾಗುತ್ತದೆ. ಅನರ್ಹ ಶಾಸಕರಿಗೆ ಚುನಾವಣೆಗೆ ಸ್ಪರ್ಧಿಸಲು ಯಾವುದೇ ಅಡ್ಡಿಯಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಮರು ಆಯ್ಕೆಯಾಗುವವರೆಗೂ ಸಚಿವ ಸ್ಥಾನ, ಅಥವಾ ಯಾವುದೇ ಸಾಂವಿಧಾನಕ ಹುದ್ದೆ ಪಡೆಯುವಂತಿಲ್ಲ ಎಂಬ ಆದೇಶವನ್ನೂ ನೀಡಿದೆ.

ಸ್ಪೀಕರ್ ನಿರ್ಧರಿಸುವುದಕ್ಕೆ ಬರುವುದಿಲ್ಲ

ಸ್ಪೀಕರ್ ನಿರ್ಧರಿಸುವುದಕ್ಕೆ ಬರುವುದಿಲ್ಲ

ಅನರ್ಹತೆಯ ಕಾಲಾವಧಿಯನ್ನು ಸ್ಪೀಕರ್ ನಿರ್ಧರಿಸುವುದಕ್ಕೆ ಬರುವುದಿಲ್ಲ. ಶಾಸಕರು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದರೆ ಅದನ್ನು ಸ್ಪೀಕರ್ ಸ್ವೀಕರಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪಕ್ಷಾಂತರ ನಿಷೇಧ ಕಾಯ್ದೆಯಡಿಯಲ್ಲಿ ರಮೇಶ್ ಕುಮಾರ್ ಅವರು ಈ ಶಾಸಕರನ್ನು ಅನರ್ಹಗೊಳಿಸಿದ್ದರು. ಅನರ್ಹತೆಯನ್ನು ಪ್ರಶ್ನಿಸಿ ಶಾಸಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮುಕ್ತಾಯವಾಗಿದ್ದು, ಇಂದು ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದಿದೆ.

17 ಅನರ್ಹ ಶಾಸಕರ ಅರ್ಜಿ; ಸುಪ್ರೀಂ ತೀರ್ಪಿಗೆ ದಿನಾಂಕ ನಿಗದಿ17 ಅನರ್ಹ ಶಾಸಕರ ಅರ್ಜಿ; ಸುಪ್ರೀಂ ತೀರ್ಪಿಗೆ ದಿನಾಂಕ ನಿಗದಿ

ಚುನಾವಣೆಗೆ ಸ್ಪರ್ಧೆಸಬಹುದು

ಚುನಾವಣೆಗೆ ಸ್ಪರ್ಧೆಸಬಹುದು

17 ಅನರ್ಹ ಶಾಸಕರ ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ಉಪಚುನಾವಣೆ ನಡೆಯಲಿದೆ. ನಾಮಪತ್ರಗಳನ್ನು ಸಲ್ಲಿಸಲು ನವೆಂಬರ್ 18 ಕೊನೆಯ ದಿನವಾಗಿದಗ್ದು, ಅದಕ್ಕೂ ಮುನ್ನ ಸುಪ್ರೀಂ ಕೋರ್ಟ್ ನಿಂದ ಹೊರಬಿದ್ದ ತೀರ್ಪು, ಶಾಸಕರು ಚುನಾವಣೆಗೆ ಸ್ಪರ್ಧಿಸಬಹುದೇ, ಇಲ್ಲವೇ ಎಂಬುದನ್ನು ನಿರ್ಧರಿಸಿದೆ.

ಅನರ್ಹರು ಯಾರ್ಯಾರು?

ಅನರ್ಹರು ಯಾರ್ಯಾರು?

ಕಾಂಗ್ರೆಸ್ ನಿಂದ ಬೈರತಿ ಬಸವರಾಜ (ಕೆ. ಆರ್.ಪುರ), ಎಸ್. ಟಿ. ಸೋಮಶೇಖರ್ (ಯಶವಂತಪುರ), ರೋಷನ್ ಬೇಗ್ (ಶಿವಾಜಿನಗರ), ಎಂಟಿಬಿ ನಾಗರಾಜ್ (ಹೊಸಕೋಟೆ), ಡಾ. ಸುಧಾಕರ್ (ಚಿಕ್ಕಬಳ್ಳಾಪುರ), ಮುನಿರತ್ನ (ರಾಜರಾಜೇಶ್ವರಿ ನಗರ), ರಮೇಶ್ ಜಾರಕಿಹೊಳಿ (ಗೋಕಾಕ್), ಮಹೇಶ್ ಕುಮಟಳ್ಳಿ (ಅಥಣಿ), ಮಸ್ಕಿ (ಪ್ರತಾಪ್ ಗೌಡ ಪಾಟೀಲ್), ಶ್ರೀಮಂತ ಪಾಟೀಲ್ (ಕಾಗವಾಡ), ಬಿ. ಸಿ. ಪಾಟೀಲ್ (ಹಿರೇಕೆರೂರು), ಶಿವರಾಂ ಹೆಬ್ಬಾರ್ (ಯಲ್ಲಾಪುರ), ಆನಂದ್ ಸಿಂಗ್ (ವಿಜಯನಗರ), ಆರ್. ಶಂಕರ್ (ರಾಣೆಬೆನ್ನೂರು) ಅನರ್ಹಗೊಂಡರೆ, ಜೆಡಿಎಸ್ ನಿಂದ ಎಚ್. ವಿಶ್ವನಾಥ್ (ಹುಣಸೂರು), ಕೆ. ಗೋಪಾಲಯ್ಯ (ಮಹಾಲಕ್ಷ್ಮೀ ಲೇಔಟ್), ನಾರಾಯಣ ಗೌಡ (ಕೆ. ಆರ್. ಪೇಟೆ) ಅನರ್ಹರ ಪಟ್ಟಿ ಸೇರಿದ್ದರು.

English summary
Karnataka 17 MLAs Disqualification Case: Supreme Court Pronounces It's Verdict
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X