ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಪರೇಷನ್ ಕಮಲ ಭೀತಿ: ದೆಹಲಿಯಲ್ಲಿ ದೋಸ್ತಿ ಸಂಸದರಿಂದ ದಿಢೀರ್ ಸುದ್ದಿಗೋಷ್ಠಿ

|
Google Oneindia Kannada News

Recommended Video

ಬಿಜೆಪಿಗೆ ಚಾಲೆಂಜ್ ಮಾಡಿದ ಎಚ್ ಡಿ ದೇವೇಗೌಡ | Oneindia Kannada

ನವದೆಹಲಿ, ಫೆಬ್ರವರಿ 07: ರಾಜ್ಯದಲ್ಲಿ ಆಪರೇಶನ್ ಕಮಲದ ವದಂತಿ ಹಬ್ಬಿದ್ದು, ಅದು ಕಾಂಗ್ರೆಸ್ ಸಂಸದರಿಗೂ ಭೀತಿ ಮೂಡಿಸಿದಂತಿದೆ.

ಆಪರೇಷನ್ ಕಮಲ ಭೀತಿ: ದೆಹಲಿಯಲ್ಲಿ ದೋಸ್ತಿ ಸಂಸದರಿಂದ ದಿಢೀರ್ ಸುದ್ದಿಗೋಷ್ಠಿಆಪರೇಷನ್ ಕಮಲ ಭೀತಿ: ದೆಹಲಿಯಲ್ಲಿ ದೋಸ್ತಿ ಸಂಸದರಿಂದ ದಿಢೀರ್ ಸುದ್ದಿಗೋಷ್ಠಿ

ಅದೇ ಕಾರಣಕ್ಕೆ ದೆಹಲಿಯಲ್ಲಿ ಇಂದು ರಾಜ್ಯದ ಕಾಂಗ್ರೆಸ್ ಸಂಸದರು ದಿಢೀರ್ ಸುದ್ದಿಗೋಷ್ಟಿ ಕರೆದಿದ್ದು, ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮತ್ತು ರಾಜ್ಯದ ಬಿಜೆಪಿ ನಾಯಕರ ನಡೆಯನ್ನು ಟೀಕಿಸಿದ್ದಾರೆ.

<span class=ಕರ್ನಾಟಕ ಬಜೆಟ್ ಅಧಿವೇಶನ LIVE: 2ನೇ ದಿನವೂ ಬಿಜೆಪಿಯಿಂದ ಪ್ರತಿಭಟನೆ?" title="ಕರ್ನಾಟಕ ಬಜೆಟ್ ಅಧಿವೇಶನ LIVE: 2ನೇ ದಿನವೂ ಬಿಜೆಪಿಯಿಂದ ಪ್ರತಿಭಟನೆ?" />ಕರ್ನಾಟಕ ಬಜೆಟ್ ಅಧಿವೇಶನ LIVE: 2ನೇ ದಿನವೂ ಬಿಜೆಪಿಯಿಂದ ಪ್ರತಿಭಟನೆ?

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿಕೆ ಸುರೇಶ್ ಮಾತನಾಡಿ, 'ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರನ್ನು ಮುಂಬೈಯ ಹೊಟೇಲ್ ನಲ್ಲಿ ಕೂಡಿಟ್ಟಿದ್ದಾರೆ. ಅವರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಅದಕ್ಕೆ ಮಹಾರಾಷ್ಟ್ರ ಸರ್ಕಾರವೂ ಸಾಥ್ ನೀಡಿದೆ' ಎಂದು ದೂರಿದರು.

Karnataka Congress MPs addressing pressmeet in New Delhi

"ದೇಶದಲ್ಲಿ ಸಿಬಿಐ, ಇಡಿ ಮುಂತಾದ ಎಲ್ಲಾ ಸಂಸ್ಥೆಗಳನ್ನೂ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಆಪರೇಶನ್ ಕಮಲ ಎಂಬ ಪರಿಕಲ್ಪನೆಯನ್ನು ತಂದು ದೇಶದ ರಾಜಕೀಯ ಇತಿಹಾಸಕ್ಕೇ ಕಪ್ಪುಚುಕ್ಕೆಯನ್ನು ಇಟ್ಟ ಕೀರ್ತಿ ರಾಜ್ಯದ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ. ಅದರಲ್ಲೂ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಆಪರೇಶನ್ ಕಮಲದ ರೂವಾರಿ" ಎಂದು ಡಿಕೆ ಸುರೀಶ್ ಆರೋಪಿಸಿದರು.

ತಾಕತ್ತಿದ್ದರೆ ಅವಿಶ್ವಾಸ ಗೊತ್ತುವಳಿ ಮಂಡಿಸಿ: ಬಿಜೆಪಿಗೆ ದೇವೇಗೌಡ ಸವಾಲು ತಾಕತ್ತಿದ್ದರೆ ಅವಿಶ್ವಾಸ ಗೊತ್ತುವಳಿ ಮಂಡಿಸಿ: ಬಿಜೆಪಿಗೆ ದೇವೇಗೌಡ ಸವಾಲು

ಇದೇ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ನ ರಾಜ್ಯಸಭಾ ಸಂಸದ ಕುಪೇಂದ್ರ ರೆಡ್ಡಿ, 'ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಇದೆ. ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ' ಎಂದು ದೂರಿದರು.

Karnataka Congress MPs addressing pressmeet in New Delhi

ರಾಜ್ಯದಲ್ಲಿ ಬುಧವಾರದಿಂದ ಬಜೆಟ್ ಅಧಿವೇಶನ ಆರಂಭವಾಗಿದ್ದು, ಹಲವು ಕಾಂಗ್ರೆಸ್ ಶಾಸಕರು ಸದನಕ್ಕೆ ಗೈರಾಗಿರುವುದು ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರದಲ್ಲಿ ಭೀತಿ ಹುಟ್ಟಿಸಿದೆ.

English summary
Karnataka Congress MPs addressing a pressmeet in New Delhi reagrding BJP's operation Lotus,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X