ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಜಪೇಯಿ ಮಾತನ್ನೇ ನೀವು ಕೇಳಿಲ್ಲ, ಇನ್ನು ನಮ್ಮ ಮಾತು ಕೇಳ್ತೀರಾ: ಕಪಿಲ್ ಸಿಬಲ್

|
Google Oneindia Kannada News

ನವದೆಹಲಿ, ಫೆಬ್ರವರಿ 29: ರಾಜಧರ್ಮದ ಕುರಿತು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಮಾತನಾಡಿದ್ದಾರೆ.

ಕಾನೂನು ಸಚಿವರು ರಾಜಧರ್ಮವನ್ನು ನಮಗೆ ಭೋದಿಸಬೇಡಿ ಎಂದು ಹೇಳಿದ್ದಾರೆ. ನಾವು ಹೇಗೆ ಭೋದಿಸಲು ಸಾಧ್ಯ ಸಚಿವರೇ? ಗುಜರಾತ್​ನಲ್ಲಿ ವಾಜಪೇಯಿ ಅವರ ಮಾತನ್ನೇ ಕೇಳದೇ ಇದ್ದವರು ನೀವು ನಮ್ಮ ಮಾತನ್ನು ಹೇಗೆ ಕೇಳುತ್ತೀರಿ ಅಲ್ಲವೇ ಎಂದು ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ.

ದೆಹಲಿ ಗಲಭೆ; ವರದಿ ನೀಡಲು ಕಾಂಗ್ರೆಸ್‌ನಿಂದ ಸಮಿತಿ ರಚನೆದೆಹಲಿ ಗಲಭೆ; ವರದಿ ನೀಡಲು ಕಾಂಗ್ರೆಸ್‌ನಿಂದ ಸಮಿತಿ ರಚನೆ

ರಾಷ್ಟ್ರ ರಾಜಕಾರಣದಲ್ಲಿ ರಾಜಧರ್ಮದ ವಿಚಾರ ಹೆಚ್ಚಾಗುತ್ತಿದೆ. ಬಿಜೆಪಿ ಸರ್ಕಾರ ರಾಜಧರ್ಮ ಪಾಲಿಸುತ್ತಿಲ್ಲ ಎಂದು ಕಾಂಗ್ರೆಸ್​ ದೂಷಿಸಿದ್ದರೆ, ನಿಮ್ಮಿಂದ ರಾಜಧರ್ಮ ಭೋದಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಬಿಜೆಪಿ ಕಾಂಗ್ರೆಸ್​ನ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದೆ. ಇದೀಗ ರಾಜಧರ್ಮದ ಬಗ್ಗೆ ಕಾಂಗ್ರೆಸ್​ ನಾಯಕ ಕಪಿಲ್​ ಸಿಬಲ್​ ಮಾತನಾಡಿದ್ದಾರೆ.

Kapil Sibal Remembers Vajpayees Advice To Narendra Modi

ದೆಹಲಿ ಹಿಂಸಾಚಾರದ ಕುರಿತಾಗಿ ರಾಷ್ಟ್ರಪತಿಯನ್ನು ಭೇಟಿ ಮಾಡಿದ ಕಾಂಗ್ರೆಸ್ ನಿಯೋಗವು, ಬಿಜೆಪಿ ರಾಜಧರ್ಮವನ್ನು ಪಾಲಿಸುತ್ತಿಲ್ಲ. ರಾಜಧರ್ಮದ ಪರಿಪಾಲನೆ ರಾಷ್ಟ್ರಪತಿಗಳು ಅವರ ಅಧಿಕಾರವನ್ನು ಬಳಸಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿತ್ತು.

ನಿನ್ನೆ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್​ಗೆ ಉತ್ತರಿಸಿದ ಬಿಜೆಪಿಯ ಕೇಂದ್ರ ಕಾನೂನು ಸಚಿವ ರವಿ ಶಂಕರ್​ ಪ್ರಸಾದ್​, ಮತಕ್ಕಾಗಿ ಹಿಂಸಾಚಾರ ನಡೆಸಿದ, ಕಾನೂನು ಉಲ್ಲಂಘನೆ ಮಾಡಿದ ಪಕ್ಷದಿಂದ ನಮಗೆ ರಾಜಧರ್ಮವನ್ನು ಕಲಿಯುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದರು.

ರಾಜಧರ್ಮವನ್ನು ಆಲಿಸುವುದು, ಕಲಿಯುವುದು ಮತ್ತು ಪರಿಪಾಲಿಸುವುದು ನಿಮ್ಮ ಸರ್ಕಾರದ ಬಲವಾದ ಅಂಶವೇ ಅಲ್ಲ ಎಂದು ಅಣುಕಿಸಿದ್ದಾರೆ.

English summary
Kapil Sibal Says In the wake of the 2002 Gujarat riots where former Prime Minister Atal Bihari Vajpayee told Narendra Modi to follow "rajdharma".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X