ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಪಿಲ್ ಮಿಶ್ರಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ಗೌತಮ್ ಗಂಭೀರ್ ಆಗ್ರಹ

|
Google Oneindia Kannada News

ನವದೆಹಲಿ, ಫೆಬ್ರವರಿ 25: 'ಕಪಿಲ್ ಮಿಶ್ರಾ ಅವರ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ' ಎಂದು ಬಿಜೆಪಿ ಸಂಸದ ಗೌತಮ್ ಗಂಭೀರ್ ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೌರತ್ವ ನಿಷೇಧ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ, ಹಿಂಸಾಚಾರಕ್ಕೆ ಕಾರಣವಾದ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಅವರ ಹೇಳಿಕೆಯನ್ನು ಎಂದಿಗೂ ಒಪ್ಪುವುದಿಲ್ಲ.

ದೆಹಲಿಯಲ್ಲಿ ಫೈರಿಂಗ್ ನಡೆಸಿದ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರುದೆಹಲಿಯಲ್ಲಿ ಫೈರಿಂಗ್ ನಡೆಸಿದ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು

ಹಿಂಸಾಚಾರಕ್ಕೆ ಕಾರಣರಾದವರು ಕಾಂಗ್ರೆಸ್‌ನವರೇ ಆಗಿರಲಿ, ಬಿಜೆಪಿಯವರೇ ಆಗಿರಲಿ, ಆಮ್‌ ಆದ್ಮಿ ಪಕ್ಷದವರೇ ಆಗಿರಲಿ, ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.

ಶಾಹಿನ್‌ಬಾಗ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಯುತ್ತಿತ್ತು

ಶಾಹಿನ್‌ಬಾಗ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಯುತ್ತಿತ್ತು

ಶಾಹಿನ್‌ಬಾಗ್‌ನಲ್ಲಿ ಇಷ್ಟು ದಿನ ಶಾಂತಿಯುತ ಪ್ರತಿಭಟನೆ ನಡೆಯುತ್ತಿತ್ತು.ಆದರೆ ಟ್ರಂಪ್ ದೆಹಲಿಗೆ ಬಂದ ಬಳಿಕ ಹಿಂಸಾಚಾರ, ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಇದು ಒಳ್ಳೆಯ ಪ್ರತಿಭಟನೆಯಲ್ಲ. ಶಾಂತಿಯುತ ಪ್ರತಿಭಟನೆ ಮಾಡಿ ಆದರೆ ಕಲ್ಲುತೂರಾಟ, ಹಿಂಸಾಚಾರ ಬೇಡ. ಪೊಲೀಸರ ಮುಂದೆ ಅದ್ಹೇಗೆ ಗನ್ ಹಿಡಿಯುತ್ತೀರಾ? ನಾಚಿಕೆಯಾಗಬೇಕು ಎಂದರು.

ಕಪಿಲ್ ಮಿಶ್ರಾ ಏನು ಹೇಳಿದ್ದರು?

ಕಪಿಲ್ ಮಿಶ್ರಾ ಏನು ಹೇಳಿದ್ದರು?

ಪೌರತ್ವ ವಿರೋಧಿ ತಿದ್ದುಪಡಿ ಕಾಯ್ದೆ ಪ್ರತಿಭಟನಾಕಾರು ರಸ್ತೆ ತೆರವುಗೊಳಿಸಲು ಆಗ್ರಹಿಸಿ ಮಿಶ್ರಾ ಭಾನುವಾರ ದೆಹಲಿ ಪೊಲೀಸರಿಗೆ ಎಚ್ಚರಿಕೆ ರವಾನಿಸಿದ್ದರು.ಮಿಶ್ರಾ ಟ್ವೀಟ್ ಮಾಡಿ"ಜಾಫ್ರಾಬಾದ್ ಮತ್ತುಚಾಂದ್ ಬಾಗ್ ರಸ್ತೆಗಳನ್ನು ತೆರವುಗೊಳಿಸಲು ದೆಹಲಿ ಪೊಲೀಸರಿಗೆ ಮೂರು ದಿನಗಳ ಗಡುವು ನೀಡುತ್ತೇನೆ.ಇದರ ನಂತರ ನಮ್ಮೊಂದಿಗೆಯಾವ ಚರ್ಚೆಗೆ ಆಸ್ಪದವಿರುವುದಿಲ್ಲ ಏಕೆಂದರೆ ನಾನು ಅದರ ಬಗೆಗೆ ಗಮನಿಸುವುದಿಲ್ಲ" ಎಂದಿದ್ದರು.

ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭೇಟಿ

ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭೇಟಿ

ದೆಹಲಿಯ ಹಿಂಸಾಚಾರದಲ್ಲಿ ಗಾಯಗೊಂಡ ಪೊಲೀಸರು ಹಾಗೂ ಇತರೆ ರೋಗಿಗಳಿರುವ ಆಸ್ಪತ್ರೆಗೆ ಗಂಭೀರ್ ಇಂದು ಭೇಟಿ ನೀಡಿದರು. ಬಳಿಕ ಮಾತನಾಡಿದರು.

ವ್ಯಕ್ತಿ ಯಾರೆಂಬುದು ಮುಖ್ಯವಲ್ಲ

ವ್ಯಕ್ತಿ ಯಾರೆಂಬುದು ಮುಖ್ಯವಲ್ಲ

"ವ್ಯಕ್ತಿ ಯಾರೆಂಬುದು ಮುಖ್ಯವಲ್ಲ, ಅವರು ಕಪಿಲ್ ಮಿಶ್ರಾ ಆಗಿರಲಿಅಥವಾ ಬೇರೆ ಯಾರೇ ಆಗಿರಲಿ, ಯಾವುದೇ ಪಕ್ಷಕ್ಕೆ ಸೇರಿದವನಿರಲಿಅವರು ಯಾವುದೇ ಪ್ರಚೋದನಕಾರಿ ಭಾಷಣ ನೀಡಿದ್ದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. " ಎಎನ್‌ಐ ಜೊತೆ ಮಾತನಾಡಿದ ಗಂಬೀರ್ ಹೇಳಿದ್ದಾರೆ.

English summary
This is unfortunate. Whoever has done this, strict action must be taken - whether from BJP, Congress or AAP. Kapil Mishra's speech is not acceptable Says BJP MP Gautam Gambhir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X