ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರ್ ಗಾಂವ್ ನಲ್ಲಿ 'ಕನ್ನಡ ಹಬ್ಬ'ದ ಸಂಭ್ರಮಾಚರಣೆ

By ಸತೀಶ್ ಬಸವಾರಾಧ್ಯ, ಗುರ್ ಗಾಂವ್
|
Google Oneindia Kannada News

ಗುರ್ ಗಾಂವ್ ಇತ್ತೀಚೆಗೆ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಮೈಸೂರು ರಂಗಾಯಣ ತಂಡ, ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆಯ ಸಹಯೋಗದಲ್ಲಿ ಗುರ್ ಗಾಂವ್ ಕನ್ನಡ ಸಂಘ ಕನ್ನಡ ಹಬ್ಬ ಆಚರಿಸಿದರು.

ಮೈಸೂರಿನ ರಂಗಾಯಣದ ನಿರ್ದೇಶಕರಾದ ಜರ್ನಾದನ(ಜನ್ನಿ) ಮತ್ತು ಅವರ ತಂಡ, ರಂಗ ಸಂಗೀತ ಮತ್ತು ಯಶಸ್ವಿ ನಾಟಕವಾದ ಶೂದ್ರ ತಪಸ್ವಿ ನಾಟಕವನ್ನು ಪ್ರದರ್ಶಿಸುವ ಮೂಲಕ ಕನ್ನಡಿಗರಿಗೆ ರಂಗಾಯಣದ ಸವಿಯುಣಿಸಿದರು.

ರಂಗ ಸಂಗೀತದಲ್ಲಿ "ಮೈಮ್ ರಮೇಶ್"ರವರ ಮೂಕಾಭಿನಯ ಅತ್ತ್ಯುತ್ತಮವಾಗಿದ್ದರೆ, ಜನ್ನಿಯವರ ಹಾಡುಗಳಲ್ಲಿ ದಿವಂಗತ ಶ್ರೀ ಸಿ. ಅಶ್ವಥ್‍ರವರ ಭಾವವಿತ್ತು, ಪ್ರೇಕ್ಷಕನ ಮನಸೂರೆಗೊಂಡ ಹಾಡುಗಳಲ್ಲಿ ಕೋಡಗಾನ ಕೋಳಿ ನುಂಗಿತ್ತಾ, ಎಲ್ಲೋ ಜೋಗಯ್ಯ ನಿನ್ನ ಅರಮಾನೆ ಪ್ರಮುಖವಾಗಿದ್ದವು, ಇವುಗಳನ್ನು ಎರಡು ಬಾರಿ ಕೇಳಲಿಚ್ಚಿಸಿದರು ಪ್ರೇಕ್ಷಕರು.

ನಮ್ಮದೇ ಪ್ರತಿಭೆಯಾದ ಕುಮಾರಿ ನವನೀಶರ ಭರತನಾಟ್ಯ ಪ್ರೇಕ್ಷಕರಿಗೆ ಮುದ ನೀಡಿತು. ಸರಿ ಸುಮಾರು 300 ಜನ ಕನ್ನಡಿಗರು ಸಂತಸದಿಂದ ಭಾವಪರವಶರಾಗಿ ನರ್ತಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಜನಪದ ಸಂಶೋಧಕರಾದ ಡಾ.ಪುರುಶೋತ್ತಮ ಬಿಳಿಮಲೆ, ಮತ್ತು ಅತಿಥಿಗಳಾಗಿ ರಂಗಾಯಣದ ನಿರ್ದೇಶಕರಾದ ಜರ್ನಾದನ(ಜನ್ನಿ), ವಾರ್ತಾ ಮತ್ತು ಪ್ರಸಾರ ಇಲಾಖೆ ನವದೆಹಲಿಯ ನಿರ್ದೇಶಕರಾದ ಗಿರೀಶ್, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ವಸಂತಶೆಟ್ಟಿ ಬೆಳ್ಳಾರೆ ಮತ್ತು ಕಾರ್ಯದರ್ಶಿಯಾದ ನಾಗರಾಜುರವರು ಉಪಸ್ಥಿತರಿದ್ದರು. ವೇದಿಕೆಯ ಅಧ್ಯಕ್ಷರಾಗಿ ವಸಂತರಾವ್‍ರವರು ನಮ್ಮೊಂದಿಗಿದ್ದರು. ಕಾರ್ಯಕ್ರಮದ ರಸನಿಮಿಷಗಳನ್ನು ನಿಮ್ಮ ಮುಂದಿದೆ...

ಕಾರ್ಯಕ್ರಮದ ಉದ್ಘಾಟನೆ

ಕಾರ್ಯಕ್ರಮದ ಉದ್ಘಾಟನೆ

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಜನಪದ ಸಂಶೋಧಕರಾದ ಡಾ.ಪುರುಶೋತ್ತಮ ಬಿಳಿಮಲೆ, ಮತ್ತು ಅತಿಥಿಗಳಾಗಿ ರಂಗಾಯಣದ ನಿರ್ದೇಶಕರಾದ ಜರ್ನಾದನ(ಜನ್ನಿ), ವಾರ್ತಾ ಮತ್ತು ಪ್ರಸಾರ ಇಲಾಖೆ ನವದೆಹಲಿಯ ನಿರ್ದೇಶಕ ಗಿರೀಶ್, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ವಸಂತಶೆಟ್ಟಿ ಬೆಳ್ಳಾರೆ ಮತ್ತು ಕಾರ್ಯದರ್ಶಿಯಾದ ನಾಗರಾಜುರವರು ಉಪಸ್ಥಿತರಿದ್ದರು

ಗಣ್ಯರ ಉಪಸ್ಥಿತಿ

ಗಣ್ಯರ ಉಪಸ್ಥಿತಿ

ಕನ್ನಡ ಸಂಘದ ಹಿರಿಯರಾದ ಪ್ರಸನ್ನ ಬಂಟ್ವಾಳ್, ಸಾಯಿಪ್ರಸಾದ್, ನಾಗೇಶ ಮೈಸೂರು, ಡಿ.ವಿ.ಎಸ್.ಮೂರ್ತಿ, ನಾಗಭೂಷಣ್, ಸುರೇಶ್.ಎನ್.ಆರ್, ರಾಜೇಶ್ ಮತ್ತಿತರರು ಅಗಮಿಸಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮ

ಸಾಂಸ್ಕೃತಿಕ ಕಾರ್ಯಕ್ರಮ

ಪ್ರಸಕ್ತ ಅಧ್ಯಕ್ಷರಾದ ಆನಂದ್, ಕಾರ್ಯದರ್ಶಿ ಈಶ್ವರಲಿಂಗ ಅರೇರಾ, ಮತ್ತು ಖಜಾಂಚಿ ವೆಂಕಟೇಶ್ ಆಚಾರ್ಯರವರು ನಮ್ಮೊಂದಿಗಿದ್ದರು. ಶ್ರೀಮತಿ ರೇಖಾ ರಾಘವೇಂದ್ರರವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

ರಂಗಾಯಣ ತಂಡ

ರಂಗಾಯಣ ತಂಡ

HSSIDC ಸಭಾಂಗಣದಲ್ಲಿ ಸಂಜೆ 5:30ರಿಂದ ಪ್ರಾರಂಭವಾದ ಕಾರ್ಯಕ್ರಮ ರಾತ್ರಿ 9:30ರವರೆಗೂ ಜರುಗಿತು, ನಂತರ ಕರ್ನಾಟಕ ಶೈಲಿಯ ಭೋಜನದ ವ್ಯವಸ್ಥೆ ಮಾಡಲಾಗಿತ್ತು

ಗುರ್ ಗಾಂವ್ ಸಂಘದವರು

ಗುರ್ ಗಾಂವ್ ಸಂಘದವರು

ಕನ್ನಡ ಹಬ್ಬದ ಸಂಭ್ರಮದಲ್ಲಿ ಗುರ್ ಗಾಂವ್ ಕನ್ನಡ ಸಂಘದ ಸದಸ್ಯರು

ಕನ್ನಡ ಹಬ್ಬ ಆಚರಣೆ

ಗುರ್ ಗಾಂವ್ ಕನ್ನಡ ಸಂಘದ ರಾಜ್ಯೋತ್ಸವ ಸಂಭ್ರಮದ ವಿಡಿಯೋ ತುಣುಕು ನೋಡಿ

English summary
Gurgaon Kannada Sangha recently celebrated Kannada Rajyotsava in association with Rangayana, Mysore and Information and broadcasting department of Karnataka. Here is brief report by Satish Basavaradhya
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X