ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಗುಸಾರಾಯ್‌ನಲ್ಲಿ ಯಾವುದೇ ಕಾರಣಕ್ಕೂ ಮತ ವಿಭಜನೆ ಇಲ್ಲ : ಕನ್ಹಯ್ಯ ಕುಮಾರ್

|
Google Oneindia Kannada News

ನವದೆಹಲಿ, ಏಪ್ರಿಲ್ 29: ಬೇಗುಸಾರಾಯ್‌ನಲ್ಲಿ ಮತ ವಿಭಜನೆ ಇಲ್ಲ ಪ್ರಶ್ನೆಯೇ ಇಲ್ಲ, ನಾವು ಒಂದಾಗಿರುತ್ತೇವೆ, ಬಿಜೆಪಿಯನ್ನು ಸೋಲಿಸುತ್ತೇವೆ ಎನ್ನುವ ಭರವಸೆ ಇದೆ ಎಂದು ಸಿಪಿಐ ಅಭ್ಯರ್ಥಿ ಕನ್ಹಯ್ಯ ಕುಮಾರ್ ಭರವಸೆ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಚುನಾವಣೆಯಲ್ಲಿ ಎಲ್ಲರಿಗಿಂತ ಕನ್ಹಯ್ಯ ಕುಮಾರ್ ಮೇಲೆಯೇ ಎಲ್ಲರ ಚಿತ್ತವಿತ್ತು. ಇಂದು ಬಿಹಾರದ ಬೇಗುಸಾರಾಯ್‌ನಲ್ಲಿ ಚುನಾವಣಾ ಪರೀಕ್ಷೆ ಎದುರಿಸುತ್ತಿದ್ದಾರೆ.

ಕ್ರೌಡ್ ಫಂಡಿಂಗ್ ಮೂಲಕ ದಾಖಲೆ ದೇಣಿಗೆ ಪಡೆದ ಕನ್ಹಯ್ಯ ಕುಮಾರ್ ಕ್ರೌಡ್ ಫಂಡಿಂಗ್ ಮೂಲಕ ದಾಖಲೆ ದೇಣಿಗೆ ಪಡೆದ ಕನ್ಹಯ್ಯ ಕುಮಾರ್

ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನದಲ್ಲಿ 72 ಕ್ಷೇತ್ರಗಳಲ್ಲಿ ಜನರು ತಮ್ಮ ಪ್ರತಿನಿಧಿಗಳನ್ನ ಇವತ್ತು ಆರಿಸಲಿದ್ದಾರೆ. 900ಕ್ಕೂ ಹೆಚ್ಚು ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ.

Kanhaiya Kumar Says No Division Of Votes In Begusarai

72 ಕ್ಷೇತ್ರಗಳಲ್ಲಿ ಹತ್ತಾರು ಘಟಾನುಘಟಿ ಸ್ಪರ್ಧಾಳುಗಳು ಕಣದಲ್ಲಿದ್ದಾರೆ. ಕೆಲವರು ಪಳಗಿದ ಹಳೆಯ ಹುಲಿಗಳೆನಿಸಿದರೆ, ಮತ್ತೆ ಕೆಲವರು ಹೊಸ ಭರವಸೆ ಮೂಡಿಸಿರುವ ಉದಯೋನ್ಮುಖ ರಾಜಕಾರಣಿಗಳಾಗಿದ್ದಾರೆ. ಮತ್ತೆ ಕೆಲವರು ವಂಶಪಾರಂಪರ್ಯವಾಗಿ ಸೀಟು ಗಿಟ್ಟಿಸಿಕೊಂಡವರಾಗಿದ್ದಾರೆ.

ಕನ್ಹಯ್ಯ ಕುಮಾರ್ ಅವರ ವಿರುದ್ಧ ಬಿಜೆಪಿಯ ಗಿರಿರಾಜ್ ಸಿಂಗ್, ಆರ್‌ಜೆಡಿಯ ತನ್ವೀರ್ ಹಸನ್ ಕಣದಲ್ಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಬಿಹಾರದಲ್ಲಿ ಬಿಜೆಪಿಯೇ ಬಲಿಷ್ಠವಾಗಿದೆ.

ಆದರೆ ಆ ದಾಖಲೆಯನ್ನು ಮುರಿದು ತಮ್ಮ ಅಸ್ತಿತ್ವವನ್ನು ಸ್ಥಾಪಿಸಲು 32 ವರ್ಷದ ಕನ್ಹಯ್ಯ ಕುಮಾರ್ ಹೊರಟಿದ್ದಾರೆ. ಬಿಜೆಪಿ ಹೊರತುಪಡಿಸಿ ಇನ್ನೂ ಎರಡು ಪಕ್ಷಗಳಿವೆ, ಆದರೆ ನಾವು ಒಂದಾಗಿರುತ್ತೇವೆ ಮತಗಳು ಯಾವುದೇ ಕಾರಣಕ್ಕೂ ಮತವಿಭಜನೆಯಾಗುವುದಿಲ್ಲ ಎಂದಿದ್ದಾರೆ.

ಏಪ್ರಿಲ್ 29ರ ಚುನಾವಣೆಯಲ್ಲಿ ಕಣದಲ್ಲಿರುವ ಪ್ರಮುಖರು:
-ಕನ್ಹಯ್ಯ ಕುಮಾರ್(ಸಿಪಿಐ), ಬೇಗುಸರೈ, ಬಿಹಾರ
-ಉಪೇಂದ್ರ ಕುಶ್ವಾಹ(ಆರ್​ಎಲ್​ಎಸ್​ಪಿ), ಉಜಿಯಾರ್​ಪುರ್, ಬಿಹಾರ
-ರಾಮಚಂದ್ರ ಪಾಸ್ವಾನ್(ಎಲ್​ಜೆಎಸ್​ಪಿ), ಸಮಷ್ಟಿಪುರ್, ಬಿಹಾರ
-ಊರ್ಮಿಳಾ ಮಟೋಂಡ್ಕರ್(ಕಾಂಗ್ರೆಸ್), ಮುಂಬೈ ನಾರ್ಥ್, ಮಹಾರಾಷ್ಟ್ರ
- ಗಿರಿರಾಜ್ ಸಿಂಗ್(ಬಿಜೆಪಿ), ಬೇಗುಸರೈ, ಬಿಹಾರ
-ಪೂನಂ ಮಹಾಜನ್(ಬಿಜೆಪಿ), ಮುಂಬೈ ನಾರ್ಥ್-ಸೆಂಟ್ರಲ್, ಮಹಾರಾಷ್ಟ್ರ
-ಮಿಲಿಂದ್ ದೇವೋರಾ(ಕಾಂಗ್ರೆಸ್), ಮುಂಬೈ ಸೌಥ್, ಮಹಾರಾಷ್ಟ್ರ
-ಸಾಕ್ಷಿ ಮಹಾರಾಜ್(ಬಿಜೆಪಿ), ಉನ್ನಾವೋ, ಉ.ಪ್ರ.
-ಡಿಂಪಲ್ ಯಾದವ್(ಎಸ್​ಪಿ), ಕನ್ನೋಜ್, ಉ.ಪ್ರ.
-ಯೋಗೇಂದ್ರ ಯಾದವ್(ಪಕ್ಷೇತರ), ಛಾತ್ರ, ಜಾರ್ಖಂಡ್

English summary
Kanhaiya Kumar, one of the most watched candidates in the national election, faces his test today in Bihar's Begusarai, where he is debuting as a CPI contestant against the BJP's Giriraj Singh, a Union Minister known for his controversial pronouncements. The RJD has fielded Tanveer Hassan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X