ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಅದ್ದೂರಿಯಾಗಿ ಜರುಗಿದ ಕನಕದಾಸ ರಾಷ್ಟ್ರೀಯ ಜಯಂತ್ಯುತ್ಸವ

|
Google Oneindia Kannada News

ನವದೆಹಲಿ, ಡಿಸಂಬರ್ ೦3: ದಾಸ ಶ್ರೇಷ್ಠ ಸಂತ ಕನಕದಾಸರ ರಾಷ್ಟ್ರೀಯ ಜಯಂತೋತ್ಸವ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಡಿ.2 ರಂದು ಭಾನುವಾರ ಅದ್ದೂರಿಯಾಗಿ ಜರುಗಿತು.

ದೆಹಲಿಯ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಸಂಘ ದೆಹಲಿ ಕನ್ನಡ ಸಂಘದಲ್ಲಿ ಆಯೋಜಿಸಿದ ಸಮಾರಂಭವನ್ನು ಉದ್ಘಾಟಿಸಿದ ಮಾಜಿ ಸಚಿವರಾದ ಎಚ್‌.ಎಂ.ರೇವಣ್ಣ ಅವರು ಮಾತನಾಡಿ ಕನಕದಾಸರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದ್ದು, ಅವರು ತೋರಿದ ಹಾದಿಯಲ್ಲಿ ನಾವೆಲ್ಲರೂ ನಡೆಯೋಣ ಎಂದರು.

ರಾಜ್ಯದ ರಾಜಧಾನಿ ಬೆಂಗಳೂರಿನ ವಿಧಾನಸೌಧ ಆವರಣದಲ್ಲಿ ಕನಕದಾಸರ ಪ್ರತಿಮೆಯನ್ನು ಕಳೆದ ವರ್ಷ ಉದ್ಘಾಟಿಸಲಾಗಿದ್ದು ರಾಜ್ಯದ ಎಲ್ಲರ ಗಮನ ಸೆಳೆದಿದೆ. ಕನಕದಾಸರ ಕೃತಿಗಳನ್ನು ಸಂರಕ್ಷಿಸುವ ಕಾರ್ಯವಾಗುತ್ತಿದೆ ಎಂದು ಹೇಳಿದರು.

Kanakadasa birth anniversary program happened in New Delhi

ಇದೇ ಸಂದರ್ಭದಲ್ಲಿ ಅರಣ್ಯ ಸಚಿವ ಆರ್. ಶಂಕರ್ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರನ್ನು ಸನ್ಮಾನಿಸಲಾಯಿತು.

ದೆಹಲಿಯಲ್ಲಿ ಕನಕ ರಾಷ್ಟೀಯ ಜಯಂತಿ ಆಚರಿಸುತ್ತಿರುವುದು ಕನಕದಾಸರ ತತ್ವಗಳು ಇಡೀ ವಿಶ್ವಕ್ಕೆ ವ್ಯಾಪಿಸಿದೆ ಎಂಬುದಕ್ಕೆ ನಿದರ್ಶನ. ಪ್ರತಿ ವರ್ಷ ರಾಷ್ಟ್ರ ಮಟ್ಟದಲ್ಲಿ ಕನಕ ಜಯಂತಿಯನ್ನು ಆಚರಿಸಲಾಗುವುದು. ಎಲ್ಲಾ ರಾಜ್ಯಗಳಿಂದ ಕನಕದಾಸರ ಅನುಯಾಯಿಗಳು ಆಗಮಿಸಿ ಈ ಸಮಾರಂಭವನ್ನು ಸಾಕ್ಷೀಕರಿಸಲಿದ್ದಾರೆ ಎಂದರು.

ದೆಹಲಿಯ ಇಂಡಿಯಾ ಗೇಟ್‌ನಿಂದ ಸುಮಾರು 2 ಸಾವಿರಕ್ಕೂ ಹೆಚ್ಚು ಕನಕದಾಸರ ಅನುಯಾಯಿಗಳು ಡೊಳ್ಳು, ವೀರಗಾಸೆ, ಪಟಕುಣಿತದೊಂದಿಗೆ ಬೃಹತ್ ಸಾಂಸ್ಕೃತಿಕ ಮೆರವಣಿಗೆ ನಡೆಸಿದರು. ಕನಕ ಜಯಂತಿ ಸಮಾರಂಭದಲ್ಲಿ ಸಚಿವರಾದ ಬಂಡೆಪ್ಪ ಖಾಶೆಂಪೂರ, ಜೆ.ಡಿ.ಎಸ್. ರಾಜ್ಯಾಧ್ಯಕ್ಷರಾದ ಹೆಚ್. ವಿಶ್ವನಾಥ, ಸಿ.ಎಸ್. ಶಿವಳ್ಳಿ, ಸೂರಜ್ ಹೆಗಡೆ, ಕಾಂತರಾಜ್ ಸೇರಿದಂತೆ ವಿವಿಧ ರಾಜ್ಯಗಳ ಕುರುಬ ಸಮದಾಯದ ಮುಖಂಡರು ಭಾಗವಹಿಸಿದ್ದರು.

English summary
Kanakadasa birth anniversary program organized in New Delhi. More than 2000 Kanakadasa followers participated in the program.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X