ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಮಲಾ ಗೆಲುವಿಗೆ ಹರ್ಷ ವ್ಯಕ್ತಪಡಿಸಿದ ಅಂಕಲ್ ಗೋಪಾಲನ್

|
Google Oneindia Kannada News

ಭಾರಿ ಕುತೂಹಲ ಕೆರಳಿಸಿದ್ದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಉಪಾಧ್ಯಕ್ಷೆ ಸ್ಥಾನಕ್ಕೆ ಸ್ಪರ್ಧಿಸಿದ್ದ ಇಂಡೋ-ಜಮೈಕನ್ ಕಮಲಾ ಹ್ಯಾರೀಸ್ ಅವರ ಯಶಸ್ಸಿನ ಬಗ್ಗೆ ಅವರ ಅಂಕಲ್ ಗೋಪಾಲನ್ ಬಾಲಚಂದ್ರನ್ ಅವರು ಸುದ್ದಿಸಂಸ್ಥೆಯೊಂದಿಗೆ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.

ಕಮಲಾ ಹ್ಯಾರೀಸ್ ಅವರು ಅಮೆರಿಕದ ಉಪಾಧ್ಯಕ್ಷೆಯಾಗಿ ಆಯ್ಕೆಯಾಗುವ ಮೂಲಕ ಈ ಹುದ್ದೆಗೆ ಏರಿದ ಮೊದಲ ಮಹಿಳೆ, ಮೊದಲ ಭಾರತೀಯ ಮೂಲದ ಮಹಿಳೆ, ಮೊದಲ ಕಪ್ಪು ವರ್ಣೀಯ ಮಹಿಳೆ, ಮೊದಲ ದಕ್ಷಿಣ ಏಷ್ಯಾ ಮೂಲದ ಮಹಿಳೆ ಎನಿಸಿಕೊಂಡಿದ್ದಾರೆ. ಈ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಕಮಲಾ ಅವರ ತಾಯಿ ಶ್ಯಾಮಲಾ ಗೋಪಾಲನ್ ಚೆನ್ನೈ ಮೂಲದವರು, ಅವರ ತಂದೆ ಡೊನಾಲ್ಡ್ ಹ್ಯಾರಿಸ್ ಜಮೈಕಾದವರು. ಕಮಲಾ ಗೆಲುವಿನ ಬಗ್ಗೆ ದೆಹಲಿಯಲ್ಲಿ ನೆಲೆಸಿರುವ ಅವರ ಅಂಕಲ್ ಗೋಪಾಲನ್ ಅವರು ಸಿಎನ್ಎನ್ ಸಂಸ್ಥೆಗೆ ನೀಡಿದ ಸಂದರ್ಶನದ ಸಾರಾಂಶ ಇಲ್ಲಿದೆ:

ನಿಮ್ಮ ಸೋದರ ಸೊಸೆ ಉಪಾಧ್ಯಕ್ಷೆಯಾಗಿದ್ದಾರೆ? ನಿಮ್ಮ ಪ್ರತಿಕ್ರಿಯೆ?

ನಿಮ್ಮ ಸೋದರ ಸೊಸೆ ಉಪಾಧ್ಯಕ್ಷೆಯಾಗಿದ್ದಾರೆ? ನಿಮ್ಮ ಪ್ರತಿಕ್ರಿಯೆ?

ನನಗೆ ಈ ಬಗ್ಗೆ ನಿರೀಕ್ಷೆಯಿತ್ತು. ಎರಡು ದಿನಗಳ ಮುಂಚೆ ಗೆಲುವು ನಿನ್ನದಾಗುತ್ತೆ ಎಂದು ಕಮಲಾಗೆ ನಾನು ಹೇಳಿದ್ದೆ, 10 -15 ನಿಮಿಷ ಮಾತನಾಡಿದೆ. ಆಕೆ ಉತ್ತಮ ಉಪಾಧ್ಯಕ್ಷೆಯಾಗುತ್ತಾಳೆ ಎಂಬ ನಂಬಿಕೆ ನನಗಿದೆ. ಅವಳು ನಂಬಿರುವ ಮೌಲ್ಯಗಳಿಗೆ ಬದ್ಧಳಾಗಿರುತ್ತಾಳೆ.

ಅಮೆರಿಕದ ಉಪಾಧ್ಯಕ್ಷೆಯಾಗಿ ಕಮಲಾ, ಹೊಸ ಇತಿಹಾಸ ನಿರ್ಮಾಣಅಮೆರಿಕದ ಉಪಾಧ್ಯಕ್ಷೆಯಾಗಿ ಕಮಲಾ, ಹೊಸ ಇತಿಹಾಸ ನಿರ್ಮಾಣ

ಉತ್ತಮ ಕೆಲಸಗಳ ಆರಂಭದ ನಿರೀಕ್ಷೆಗಳಿವೆ

ಉತ್ತಮ ಕೆಲಸಗಳ ಆರಂಭದ ನಿರೀಕ್ಷೆಗಳಿವೆ

ಯುಎಸ್ ಇತಿಹಾಸದಲ್ಲೇ ಕಮಲಾ ಗೆಲುವು ಹೊಸ ಮೈಲಿಗಲ್ಲು. ನಾಗರಿಕ ಹಕ್ಕು, ಕಪ್ಪು ವರ್ಣೀಯರ ಹಕ್ಕು, ಆರ್ಥಿಕ ಸಬಲೀಕರಣ ಮುಂತಾದ ವಿಷಯಗಳು ಅಮೆರಿಕವನ್ನು ಬಾಧಿಸುತ್ತಿದೆ. ಬೈಡನ್ ಹಾಗೂ ಕಮಲಾ ಹೆಗಲ ಮೇಲೆ ಬಹು ದೊಡ್ಡ ಜವಾಬ್ದಾರಿಯಿದೆ. ಇನ್ನು ಕೆಲವು ತಿಂಗಳು ವಾಷಿಂಗ್ಟನ್ ನಲ್ಲಿ ದೊಡ್ಡ ಬದಲಾವಣೆ, ಸಂಭ್ರಮ, ಉತ್ತಮ ಕೆಲಸಗಳ ಆರಂಭದ ನಿರೀಕ್ಷೆಗಳಿವೆ.

ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಅಂಕ

ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಅಂಕ

ಖಂಡಿತವಾಗಿ ನಾನು ವಾಷಿಂಗ್ಟನ್ ಸಮಾರಂಭಕ್ಕೆ ತೆರಳುತ್ತೇನೆ. ಆಕೆ ಸೆನೆಟರ್ ಆಗಿ ಪ್ರತಿಜ್ಞಾವಿಧಿ ಸ್ವೀಕರಿಸಿದಾಗಲೂ ನಾನು ಹೋಗಿದ್ದೆ. ಸಾಧ್ಯವಾದರೆ ಕುಟುಂಬಸ್ಥರೆಲ್ಲರೂ ಹೋಗಿ ಹರಸಿ ಬರುತ್ತೇವೆ. ಬೈಡನ್ ಅವರ ಭೇಟಿಗೆ ಉತ್ಸುಕನಾಗಿದ್ದೇನೆ ಎಂದು ಗೋಪಾಲನ್ ಹೇಳಿದರು.

ವಿಡಿಯೋ: We Did It, ಜೋ ಎಂದು ಸಂಭ್ರಮಿಸಿದ ಕಮಲಾವಿಡಿಯೋ: We Did It, ಜೋ ಎಂದು ಸಂಭ್ರಮಿಸಿದ ಕಮಲಾ

ನಿಮ್ಮ ಸೋದರಿ(ಕಮಲಾ ತಾಯಿ) ಪ್ರಭಾವದ ಬಗ್ಗೆ

ನಿಮ್ಮ ಸೋದರಿ(ಕಮಲಾ ತಾಯಿ) ಪ್ರಭಾವದ ಬಗ್ಗೆ

ಕಮಲಾ ಹಾಗೂ ಅವಳ ತಂಗಿ ಮಾಯಾ ಇಬ್ಬರೂ ತಾಯಿ ಶ್ಯಾಮಲಾರನ್ನೇ ಅನುಸರಿಸುತ್ತಿದ್ದಾರೆ. ಇಬ್ಬರು ತಾಯಿಯಿಂದ ಕಲಿತ ಉತ್ತಮ ಮೌಲ್ಯಗಳನ್ನು ಉಳಿಸಿಕೊಂಡಿದ್ದಾರೆ. ತಾಯಿಯ ಪ್ರಭಾವದ ಬಗ್ಗೆ ಕಮಲಾ ಈಗಾಗಲೇ ಅನೇಕ ವೇದಿಕೆಗಳಲ್ಲಿ ಹೇಳಿಕೊಂಡಿದ್ದಾಳೆ. ಕಮಲಾ ಏಳಿಗೆಗೆ ಆಕೆ ನಂಬಿಕೊಂಡು ಬಂದಿರುವ ಸಮಾಜಮುಖಿ ಚಿಂತನೆ, ಮಾನವೀಯ ಮೌಲ್ಯಗಳೆ ಕಾರಣ ಎನ್ನಬಹುದು ಎಂದು ಗೋಪಾಲನ್ ಹೇಳಿದರು.

ಶ್ವೇತ ಭವನಕ್ಕೆ ನಾನು ಮೊದಲ ಮಹಿಳೆ, ಕೊನೆಯಲ್ಲ; ಕಮಲಾ ಹ್ಯಾರೀಸ್ಶ್ವೇತ ಭವನಕ್ಕೆ ನಾನು ಮೊದಲ ಮಹಿಳೆ, ಕೊನೆಯಲ್ಲ; ಕಮಲಾ ಹ್ಯಾರೀಸ್

English summary
Kamala Harris' uncle in India: "I think she is going to be one of the most active VPs in US history" reacted after Kamala harris elected as USA Vice President
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X