ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಳಿ ಬಾಯಲ್ಲಿ ಸಿಗರೇಟು: ನಿರ್ಮಾಪಕಿ ಲೀನಾ ಮಣಿಮೇಕಲೈಗೆ ಕೋರ್ಟ್ ಸಮನ್ಸ್!

|
Google Oneindia Kannada News

ನವದೆಹಲಿ, ಜುಲೈ 11: ಕಾಳಿ ಪೋಸ್ಟರ್‌ಗೆ ಸಂಬಂಧಿಸಿದಂತೆ ಕೆನಡಾ ಮೂಲದ ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಮತ್ತು ಇತರರಿಗೆ ದೆಹಲಿ ನ್ಯಾಯಾಲಯವು ಸಮನ್ಸ್ ಜಾರಿಗೊಳಿಸಿದೆ. ಆಗಸ್ಟ್ 6ರಂದು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದೆ.

ಸಾಕ್ಷ್ಯಚಿತ್ರದಲ್ಲಿ ಕಾಳಿ ದೇವಿಯನ್ನು ಪೋಸ್ಟರ್ ಮತ್ತು ವಿಡಿಯೋದಲ್ಲಿ ಚಿತ್ರಿಸಿರುವ ರೀತಿಯಲ್ಲಿ ಪ್ರಸಾರ ಮಾಡದಂತೆ ಮಧ್ಯಂತರ ತಡೆಯಾಜ್ಞೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ದೆಹಲಿಯ ತೀಸ್ ಹಜಾರಿ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶ ಅಭಿಷೇಕ್ ಕುಮಾರ್ ಜುಲೈ 8, 2022ರಂದು ಲೀನಾ ಮಣಿಮೇಕಲೈ ಮತ್ತು ಟೂರಿಂಗ್ ಟಾಕೀಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ವಿರುದ್ಧ 39ರ ನಿಯಮ 1 ಮತ್ತು 2 CPC ಅಡಿಯಲ್ಲಿ "ದಾವೆ ಮತ್ತು ತಡೆಯಾಜ್ಞೆ ಅರ್ಜಿಯ ಸೂಚನೆ"ಯನ್ನು ಹೊರಡಿಸಿದ್ದಾರೆ.

ಕಾಳಿ ವಿವಾದ: ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಎಫ್ಐಆರ್ಕಾಳಿ ವಿವಾದ: ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಎಫ್ಐಆರ್

ಪ್ರತಿವಾದಿ ವಿಚಾರಣೆ ತೀರಾ ಅಗತ್ಯವೆಂದ ಕೋರ್ಟ್

ಪ್ರತಿವಾದಿ ವಿಚಾರಣೆ ತೀರಾ ಅಗತ್ಯವೆಂದ ಕೋರ್ಟ್

ಮಧ್ಯಂತರ ತಡೆಯಾಜ್ಞೆಯು ವಿವೇಚನೆಯ ಪರಿಹಾರವಾಗಿದೆ ಎಂದು ನ್ಯಾಯಾಧೀಶರು ಹೇಳಿದರು. ಇದಲ್ಲದೆ, ಹಲವಾರು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನಡೆಸಿರುವಂತೆ, ಅಸಾಧಾರಣ ಸಂದರ್ಭಗಳಲ್ಲಿ ಎಕ್ಸ್-ಪಾರ್ಟೆ ಆಡ್-ಮಧ್ಯಂತರ ತಡೆಯಾಜ್ಞೆಯನ್ನು ನೀಡಬೇಕಾಗುತ್ತದೆ. ಯಾವುದೇ ಆದೇಶವನ್ನು ನೀಡುವ ಮೊದಲು ಪ್ರತಿವಾದಿಯ ವಿಚಾರಣೆಯ ಅಗತ್ಯವಿದೆ ಎಂದು ನ್ಯಾಯಾಧೀಶರು ಹೇಳಿದರು.

ಕಡ್ಡಾಯ ತಡೆಯಾಜ್ಞೆಗೆ ಮನವಿ ಸಲ್ಲಿಕೆ

ಕಡ್ಡಾಯ ತಡೆಯಾಜ್ಞೆಗೆ ಮನವಿ ಸಲ್ಲಿಕೆ

ಪ್ರತಿವಾದಿಗಳ ವಿರುದ್ಧ ಶಾಶ್ವತ ಮತ್ತು ಕಡ್ಡಾಯ ತಡೆಯಾಜ್ಞೆ ಕೋರಿ ವಕೀಲ ರಾಜ್ ಗೌರವ್ ಮೊಕದ್ದಮೆ ಹೂಡಿದರು. ಪ್ರತಿವಾದಿಗಳು ತಮ್ಮ ಮುಂಬರುವ ಚಲನಚಿತ್ರ "ಕಾಳಿ" ಗಾಗಿ ಪೋಸ್ಟರ್‌ಗಳು ಮತ್ತು ಪ್ರೋಮೋ ವೀಡಿಯೊಗಳಲ್ಲಿ ಹಿಂದೂ ದೇವತೆ ಕಾಳಿಯನ್ನು ಬಹಳ ಅಸ್ಪಷ್ಟ ರೀತಿಯಲ್ಲಿ ಚಿತ್ರಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಇಡೀ ಚಿತ್ರದ ಪೋಸ್ಟರ್‌ನಲ್ಲಿ ಕಾಳಿ ದೇವಿ ಸಿಗರೇಟ್ ಸೇದುತ್ತಿರುವುದನ್ನು ಬಿಂಬಿಸಲಾಗಿದೆ, ಇದು ಸಾಮಾನ್ಯ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವುದಲ್ಲದೆ ನೈತಿಕತೆ ಮತ್ತು ಸಭ್ಯತೆಯ ಮೂಲಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ಲೀನಾ ಮಣಿಮೇಕಲೈ ಟ್ವೀಟ್ ಬಗ್ಗೆ ಉಲ್ಲೇಖ

ಲೀನಾ ಮಣಿಮೇಕಲೈ ಟ್ವೀಟ್ ಬಗ್ಗೆ ಉಲ್ಲೇಖ

ಪೋಸ್ಟರ್ ಅನ್ನು ಲೀನಾ ಮಣಿಮೇಕಲೈ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಪ್ರತಿವಾದಿಗಳು ಪೋಸ್ಟರ್ ಮತ್ತು ವಿಡಿಯೋ ಮತ್ತು ಟ್ವೀಟ್‌ನಲ್ಲಿ ಚಿತ್ರಿಸಿದ ರೀತಿಯಲ್ಲಿ ಕಾಳಿ ದೇವಿಯನ್ನು ಚಿತ್ರಿಸದಂತೆ ತಾತ್ಕಾಲಿಕವಾಗಿ ತಡೆಯಲು ಮಧ್ಯಂತರ ತಡೆಯಾಜ್ಞೆಯನ್ನು ಅರ್ಜಿದಾರರು ತಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ನಿರ್ಮಾಪಕಿ ಲೀನಾ ಮಣಿಮೇಕಲೈ ವಿರುದ್ಧ ಕೇಸ್

ನಿರ್ಮಾಪಕಿ ಲೀನಾ ಮಣಿಮೇಕಲೈ ವಿರುದ್ಧ ಕೇಸ್

ಕಾಳಿ ಸಾಕ್ಷ್ಯಚಿತ್ರದ ವಿವಾದಾತ್ಮಕ ಪೋಸ್ಟರ್‌ಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಲೀನಾ ಮಣಿಮೇಕಲೈ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಟೊರೊಂಟೊದ ಅಗಾ ಖಾನ್ ಮ್ಯೂಸಿಯಂನಲ್ಲಿ ಪ್ರದರ್ಶಿಸಲಾದ "ಹಿಂದೂ ದೇವರುಗಳ ಅಗೌರವದ ಚಿತ್ರಣ" ವನ್ನು ಹಿಂಪಡೆಯುವಂತೆ ಕೆನಡಾದಲ್ಲಿ ಇರುವ ಭಾರತೀಯ ಹೈಕಮಿಷನ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಸಾಕ್ಷ್ಯಚಿತ್ರದ ವಿವಾದಾತ್ಮಕ ಪೋಸ್ಟರ್‌ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಕ್ರಮವನ್ನು ತೆಗೆದುಕೊಂಡಿದ್ದರು.

English summary
Kaali poster Controversy: Delhi court summons Film Producer Leena Manimekalai. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X