ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಯಾನ 2 ಮುಕ್ತಾಯವಾಗಿಲ್ಲ: ಹೊಸ ಭರವಸೆ ನೀಡಿದ ಕೆ.ಶಿವನ್

|
Google Oneindia Kannada News

ನವದೆಹಲಿ, ನವೆಂಬರ್ 02: ಇಸ್ರೋದ ಹೆಮ್ಮೆಯ ಚಂದ್ರಯಾನ 2 ಯೋಜನೆಯಲ್ಲಿ ಕೆಲವು ವೈಫಲ್ಯವಾಗಿರಬಹುದು. ಆದರೆ ಅದೇ ಮುಕ್ತಾಯವಾಗಿಲ್ಲ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಅಧ್ಯಕ್ಷ ಕೆ.ಶಿವನ್ ಹೇಳಿದ್ದಾರೆ.

ಭಾರತ ಈಗಾಗಲೇ ಹಲವು ಸುಧಾರಿತ ಉಪಗ್ರಹಗಳ ಉಡಾವಣೆಗೆ ಚಿಂತನೆ ನಡೆಸುತ್ತಿದೆ. ಚಂದ್ರಯಾನ 2 ರ ಬಗ್ಗೆ ನೀವೆಲ್ಲ ಕೇಳಿದ್ದೀರಿ. ಅದು ತಾಂತ್ರಿಕವಾಗಿ ಕೆಲವು ವೈಫಲ್ಯಗಳನ್ನು ಕಂಡಿರಬಹುದು. ಆದರೆ ಅದರ ಅಧ್ಯಾಯ ಇನ್ನೂ ಮುಕ್ತಾಯವಾಗಿಲ್ಲ. ನಮ್ಮಲ್ಲಿ ಭರವಸೆ ಉಳಿದಿದೆ ಎಂದು ಶಿವನ್ ಹೇಳಿದರು.

ಕೆ.ಶಿವನ್ ಗೆ ವಿಮಾನದಲ್ಲಿ ಹೃದಯಸ್ಪರ್ಶಿ ಸ್ವಾಗತ: ವಿಡಿಯೋ ವೈರಲ್ಕೆ.ಶಿವನ್ ಗೆ ವಿಮಾನದಲ್ಲಿ ಹೃದಯಸ್ಪರ್ಶಿ ಸ್ವಾಗತ: ವಿಡಿಯೋ ವೈರಲ್

ಸಾಫ್ಟ್ ಲ್ಯಾಂಡಿಂಗ್ ಬಗ್ಗೆ ಸಂಶೋಧನೆ ನಡೆಸಲು ಇಸ್ರೋ ತನ್ನೆಲ್ಲ ಅನುಭವ, ಜ್ಞಾನವನ್ನೂ ಉಪಯೋಗಿಸಲಿದೆ, ಜೊತೆಗೆ ಆ ವೈಫಲ್ಯ ಮುಂದೆಂದೂ ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಲಿದೆ ಎಂದು ಶಿವನ್ ಹೇಳಿದರು.

ದೆಹಲಿ ಐಐಟಿ ಯಲ್ಲಿ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಮಾತನಾಡುತ್ತಿದ್ದರು.

ಚಂದ್ರಯಾನ 2 ಕುರಿತೂ ಸಾಕಷ್ಟು ಮಾಹಿತಿ

ಚಂದ್ರಯಾನ 2 ಕುರಿತೂ ಸಾಕಷ್ಟು ಮಾಹಿತಿ

ಚಂದ್ರಯಾನ 2 ರ ನಮ್ಮ ಯೋಜನೆಯ ಉದ್ದೇಶ ಸಂಪೂರ್ಣ ಯಶಸ್ವಿಯಾಗದೆ ಇದ್ದರೂ 95 % ಅದು ಯಶಸ್ವಿಯಾಗಿದೆ. ಚಂದ್ರನ ದಕ್ಷಿಣ ಧ್ರುವದ ಉದ್ದಕ್ಕೂ ಸುತ್ತುತ್ತಿರುವ ಆರ್ಬಿಟರ್ ಈಗಲೂ ಚಂದ್ರನ ಅಧ್ಯಯನ ನಡೆಸುತ್ತಿದೆ. ಸಾಕಷ್ಟು ಅಗತ್ಯ ಮಾಹಿತಿಯನ್ನು ರವಾನಿಸುತ್ತಿದೆ ಎಂದು ಕೆ ಶಿವನ್ ಹೇಳಿದರು.

ಮಹತ್ವಾಕಾಂಕ್ಷಿ ಯೋಜನೆ

ಮಹತ್ವಾಕಾಂಕ್ಷಿ ಯೋಜನೆ

ಇಸ್ರೋದ ಮುಂದಿನ ಮಹತ್ವಾಕಾಂಕ್ಷಿ ಯೋಜನೆ ಎಂದರೆ ಚಂದ್ರನ ಸಮೀಪಕ್ಕೆ ಬಾಹ್ಯಾಕಾಶ ನೌಕೆಯನ್ನು ಕಳಿಸುವುದು, ಜೊತೆಗೆ ಮಾನವ ಸಹಿತ ನೌಕೆಯನ್ನು ಬಾಹ್ಯಾಕಾಶಕ್ಕೆ ಕಳಿಸುವುದು. ಸದ್ಯದಲ್ಲೇ ಈ ಎರಡು ಮಹತ್ವಾಕಾಂಕ್ಷಿ ಯೋಜನೆಯನ್ನು ಇಸ್ರೋ ಸಾಕಾರಗೊಳಿಸಲಿದೆ ಎಂದು ಅವರು ಹೇಳಿದರು.

ಸೋಲೊಪ್ಪಿಕೊಳ್ಳುವ ಮಾತೇ ಇಲ್ಲ: ಪ್ರಯತ್ನ ಮುಂದುವರಿಸಿದ ಇಸ್ರೋಸೋಲೊಪ್ಪಿಕೊಳ್ಳುವ ಮಾತೇ ಇಲ್ಲ: ಪ್ರಯತ್ನ ಮುಂದುವರಿಸಿದ ಇಸ್ರೋ

ಯಶಸ್ವಿಯಾಗಲು ಟಾಪರ್ ಆಗಬೇಕಿಲ್ಲ!

ಯಶಸ್ವಿಯಾಗಲು ಟಾಪರ್ ಆಗಬೇಕಿಲ್ಲ!

ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದ ಶಿವನ್, "ಜೀವನದಲ್ಲಿ ಯಶಸ್ವಿಯಾಗಲು ನೀವು ಅತೀ ಬುದ್ಧಿವಂತರಾಗಬೇಕಿಲ್ಲ, ಟಾಪರ್ ಆಗಬೇಕಿಲ್ಲ, ನೀವು ಅತ್ಯುತ್ತಮ ಗ್ರೇಡ್ ಪಡೆಯಬೇಕಿಲ್ಲ. ನಿಮ್ಮ ಮುಂದಿರುವ ಅಡೆತಡೆ, ವೃಥಾ ಕಾಲಹರಣದ ಕೆಲಸಗಳನ್ನು ಬದಿಗಿಟ್ಟು ಒಂದೇ ಕಡೆ ಗಮನವಿಡುವುದನ್ನು ಕಲಿಯಬೇಕು" ಎಂದು ಶಿವನ್ ಹೇಳಿದರು.

ನಾಸಾ ಸೆರೆ ಹಿಡಿದ 'ವಿಕ್ರಮ್ ಲ್ಯಾಂಡರ್' ಅಪ್ಪಳಿಸಿದ ಸ್ಥಳದ ಚಿತ್ರನಾಸಾ ಸೆರೆ ಹಿಡಿದ 'ವಿಕ್ರಮ್ ಲ್ಯಾಂಡರ್' ಅಪ್ಪಳಿಸಿದ ಸ್ಥಳದ ಚಿತ್ರ

ಮತ್ತೊಬ್ಬರನ್ನು ನಕಲು ಮಾಡಬೇಡಿ

ಮತ್ತೊಬ್ಬರನ್ನು ನಕಲು ಮಾಡಬೇಡಿ

"ನಿಮ್ಮ ಆಸಕ್ತಿ ಪ್ರತಿಭೆಯನ್ನು ಗುರುತಿಸಿ. ಮತ್ತೊಬ್ಬರನ್ನು ನಕಲು ಮಾಡಬೇಡಿ. ನಿಮಗೆ ಯಾವುದು ಆಸಕ್ತಿಯೋ ಅದನ್ನು ಮಾಡಿ, ಮತ್ತೊಬ್ಬರು ಮಾಡಿದ್ದನ್ನು ಮಾಡಿದರೆ ನೀವೂ ಕಾಮೆಡಿಯನ್ ಆಗುತ್ತೀರಿ ಅಷ್ಟೆ. ನಿಮಗೆ ಯಾವುದು ಇಷ್ಟ, ಮತ್ತು ನಿಮಗೆ ಯಾವುದು ಸೂಕ್ತ ಎಂಬುದನ್ನು ಅರ್ಥ ಮಾಡಿಕೊಂಡು ಆ ಹಾದಿ ಹಿಡಿಯಿರಿ" ಎಂದು ಸಹ ಶಿವನ್ ಈ ಸಂದರ್ಭದಲ್ಲಿ ಹೇಳಿದರು.

ಸಂವಹನ ಕಳೆದುಕೊಂಡ ಲ್ಯಾಂಡರ್

ಸಂವಹನ ಕಳೆದುಕೊಂಡ ಲ್ಯಾಂಡರ್

ಇಸ್ರೋದ ಮಹತ್ವದ ಯೋಜನೆ ಚಂದ್ರಯಾನ 2, ನೌಕೆ ಜುಲೈನಲ್ಲಿ ಉಡಾವಣೆಯಾಗಿತ್ತು. ಸೆಪ್ಟೆಂಬರ್ 7 ರ ಬೆಳಗ್ಗಿನ ಜಾವ 1:37 ರ ವೇಳೆಗೆ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಪ್ರಕ್ರಿಯೆಯನ್ನು ನಿರೀಕ್ಷೆಯಂತೆಯೇ ಆರಂಭಿಸಿತ್ತು. 1:49 ರ ವೇಳೆಗೆ ರಫ್ ಬ್ರೇಕಿಂಗ್ ಫೇಸ್ ಅನ್ನು ಯಶಸ್ವಿಯಾಗಿ ಪೂರೈಸಿದ ನಂತರ 2.05 ರ ಹೊತ್ತಿಗೆ ಆರ್ಬಿಟರ್ ನಿಂದ ಬೇರ್ಪಟ್ಟಿದ್ದ ವಿಕ್ರಂ ಲ್ಯಾಂಡರ್ ನಿಂದ ಡೇಟಾಗಳನ್ನುಸ್ವೀಕರಿಸುವುದನ್ನು ಆರಂಭಿಸಿದ ನೌಕೆ, ಇದ್ದಕ್ಕಿದ್ದಂತೆ ಸಂವಹನ ಕಳೆದುಕೊಂಡಿತ್ತು.

ಚಂದ್ರಯಾನ 2- ಆರ್ಬಿಟರ್ ಬಗ್ಗೆ ಸಿಹಿಸುದ್ದಿ ನೀಡಿದ ಕೆ.ಶಿವನ್ಚಂದ್ರಯಾನ 2- ಆರ್ಬಿಟರ್ ಬಗ್ಗೆ ಸಿಹಿಸುದ್ದಿ ನೀಡಿದ ಕೆ.ಶಿವನ್

English summary
ISRO Chief K Sivan Said, Chandrayaan 2 mission is not end Story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X