ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿನಲ್ಲಿ ಇಂದು ಸ್ಟಾಲಿನ್ ಭೇಟಿ ಮಾಡಲಿರುವ ಕೆಸಿಆರ್

|
Google Oneindia Kannada News

ಹೈದರಾಬಾದ್, ಮೇ 13: ಡಿಎಂಕೆ ನಾಯಕ ಎಂ ಕೆ ಸ್ಟಾಲಿನ್ ಅವರನ್ನು ಇತ್ತೀಚೆಗಷ್ಟೇ ಭೇಟಿ ಮಾಡಲು ನಿರ್ಧರಿಸಿ, ನಂತರ ಮುಖಭಂಗ ಅನುಭವಿಸಿದ್ದ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಮತ್ತೊಂದು ಪ್ರಯತ್ನ ಮಾಡಲಿದ್ದಾರೆ.

ಕಾಂಗ್ರೆಸ್ ಜೊತೆ ಮೈತ್ರಿಗೆ ತೆರೆಮರೆಯ ಪ್ರಯತ್ನ ನಡೆಸಿದ್ದರೇ ಕೆಸಿಆರ್?ಕಾಂಗ್ರೆಸ್ ಜೊತೆ ಮೈತ್ರಿಗೆ ತೆರೆಮರೆಯ ಪ್ರಯತ್ನ ನಡೆಸಿದ್ದರೇ ಕೆಸಿಆರ್?

ಐದು ದಿನಗಳ ತಮಿಳುನಾಡು ಪ್ರವಾಸದಲ್ಲಿರುವ ಕೆಸಿಆರ್ ಅವರು ಮೇ 13 ರಂದು ಸೋಮವಾರ ಸ್ಟಾಲಿನ್ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಕೆಸಿಆರ್ ಭೇಟಿಗೆ ಸ್ಟಾಲಿನ್ ಒಲ್ಲೆ ಎಂದಿದ್ದೇಕೆ? ಕಾರಣ ಹಲವು!ಕೆಸಿಆರ್ ಭೇಟಿಗೆ ಸ್ಟಾಲಿನ್ ಒಲ್ಲೆ ಎಂದಿದ್ದೇಕೆ? ಕಾರಣ ಹಲವು!

ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳನ್ನು ಹೊರಗಿಟ್ಟು ಮಹಾಮೈತ್ರಿಕೂಟ ರಚಿಸುವ ಯೋಚನೆಯಲ್ಲಿರುವ ಕೆಸಿಆರ್, ಈಗಾಗಲೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಬಳಿ ಮಾತುಕತೆ ನಡೆಸಿದ್ದರು. ಆದರೆ ಎಂಕೆ ಸ್ಟಾಲಿನ್ ಮಾತ್ರ ಕೆಸಿಆರ್ ಭೇಟಿಗೆ ಒಲ್ಲೆ ಎಂದಿದ್ದರು. ಇದರಿಂದ ಇರಿಸುಮುರಿಸುಂಟಾದರೂ, ಪ್ರಯತ್ನ ಬಿಡದ ಕೆಸಿಆರ್ ಮತ್ತೆ ಎಂಕೆ ಸ್ಟಾಲಿನ್ ಭೇಟಿಗೆ ನಿರ್ಧರಿಸಿದ್ದಾರೆ.

 K Chandrashekhar Rao likely to meet MK Stalin on May 13

ತೃತೀಯ ರಂಗಕ್ಕೆ ಸ್ಟಾಲಿನ್ ಒಪ್ಪದೆ ಇದ್ದರೆ, ತಾವೇ ಮಹಾಘಟಬಂಧನ ಸೇರುವ ಬಗ್ಗೆಯೂ ಕೆ ಚಂದ್ರಶೇಖರ್ ಮಾತುಕತೆ ನಡೆಸುವ ಸಾಧ್ಯತೆ ಇದೆ.

English summary
Telangana chief minister K Chandrashekhar Rao who is in 5 day tour to Tamil Nadu, may meet DMK leader MK Stalin on Monday and both leader likely to discuss about third front.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X