ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಗಾವಣೆ ಕುರಿತು ಸಂಪೂರ್ಣ ವಿವರ ಬಿಚ್ಚಿಟ್ಟ ನ್ಯಾ. ಮುರಳೀಧರ್

|
Google Oneindia Kannada News

ನವದೆಹಲಿ, ಮಾರ್ಚ್ 5: ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ನ್ಯಾಯಾಧೀಶರನ್ನಾಗಿ ವರ್ಗಾವಣೆ ಮಾಡಿರುವ ಕುರಿತು ಸಂಪೂರ್ಣ ವಿವರವನ್ನು ಮರಳೀಧರ್ ಬಿಚ್ಚಿಟ್ಟಿದ್ದಾರೆ.

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನ್ಯಾಯಾಧೀಶರನ್ನಾಗಿ ದೆಹಲಿಯಿಂದ ವರ್ಗಾಯಿಸುವ ಮೊದಲು ತಮ್ಮಗೆ ಮಾಹಿತಿ ನೀಡಲಾಗಿತ್ತು ಎಂಬ ವಿಷಯವನ್ನು ನ್ಯಾಯಾಧೀಶ ಮುರಳೀಧರ್ ತಿಳಿಸಿದ್ದಾರೆ.

ದೆಹಲಿ ಹೈಕೋರ್ಟ್ ನಲ್ಲಿ ಇಂದು ನಡೆದ ಬೀಳ್ಗೊಡುಗೆ ಸಮಾರಂಭದಲ್ಲಿ ಮಾತನಾಡಿದ ನ್ಯಾ. ಮುರಳೀಧರ್ ವರ್ಗಾವಣೆಗೆ ಕೊಲಿಜಿಯಂ ಶಿಫಾರಸ್ಸು ಮಾಡಿರುವ ವಿಷಯವನ್ನು ಮುಖ್ಯ ನ್ಯಾಯಾಧೀಶ ಎಸ್ . ಎ. ಬೊಬ್ಡೆ ಫೆಬ್ರವರಿ 17ರಂದೇ ತಮ್ಮಗೆ ತಿಳಿಸಲಾಗಿತ್ತು. ಇದರಿಂದ ಯಾವುದೇ ತೊಂದರೆಯಾಗಲಿಲ್ಲ ಎಂದು ಹೇಳಿದರು.

Justice S Muralidharan Reveals Sequence Of Transfer

ಎಸ್. ಮುರಳಿಧರ್ ಅವರನ್ನು ಪಂಜಾಬ್ ಹಾಗೂ ಹೈಕೋರ್ಟ್ ನ್ಯಾಯಾಧೀಶರನ್ನಾಗಿ ರಾತ್ರೋರಾತ್ರಿ ವರ್ಗಾವಣೆ ಮಾಡಿದದ್ದು ಬಿಜೆಪಿ ಹಾಗೂ ಕಾಂಗ್ರೆಸ್ ನಡುವಣ ತೀವ್ರ ವಾಕ್ಸಮರಕ್ಕೆ ಕಾರಣವಾಗಿತ್ತು.

ದೆಹಲಿ ಹೈಕೋರ್ಟ್ ನಿಂದ ಒಂದು ವೇಳೆ ವರ್ಗಾವಣೆಯಾದಲ್ಲಿ ಪಂಜಾಬ್ ಮತ್ತು ಹೈಕೋರ್ಟ್ ಗೆ ಹೋಗಲು ತಮ್ಮಗೆ ಯಾವುದೇ ಅಭ್ಯಂತರ ಇಲ್ಲ ಎಂದು ಹೇಳಿದ್ದಾಗಿ ಅವರು ತಿಳಿಸಿದರು.

ಫೆಬ್ರವರಿ 26 ರ ರಾತ್ರಿ ಮುರಳೀಧರ್ ಅವರ ವರ್ಗಾವಣೆಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ ಬಳಿಕ ವಿವಾದ ತಲೆದೋರಿತ್ತು.

English summary
Justice S Muralidhar, whose transfer after his sharp criticism of the police at a hearing on the Delhi violence sparked a political controversy, was compared to the "Kohinoor" in a moving farewell at the High Court today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X