ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

46ನೇ ಮುಖ್ಯ ನ್ಯಾಯಾಧೀಶರಾಗಿ ರಂಜನ್ ಗೊಗೊಯ್ ಪ್ರಮಾಣವಚನ ಸ್ವೀಕಾರ

|
Google Oneindia Kannada News

ನವದೆಹಲಿ, ಅಕ್ಟೋಬರ್ 03: ಸುಪ್ರೀಂಕೋರ್ಟ್‌ನ 46ನೇ ಮುಖ್ಯ ನ್ಯಾಯಾಧೀಶರಾಗಿ ರಂಜನ್ ಗೊಗೊಯ್ ಅವರು ಇಂದು ಪ್ರಮಾಣವಚನ ಸ್ವೀಕರಿಸಿದರು.

ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ರಂಜನ್ ಗೋಗೊಯ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವು ರಾಷ್ಟ್ರಪತಿ ಭವನದಲ್ಲಿ ನಡೆಯಿತು.

ನ್ಯಾ. ರಂಜನ್ ನೇಮಕ ಪ್ರಶ್ನಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ನ್ಯಾ. ರಂಜನ್ ನೇಮಕ ಪ್ರಶ್ನಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ

ರಂಜನ್ ಗೊಗೊಯ್ ಅವರು ಅಸ್ಸಾಂ ರಾಜ್ಯದವರಾಗಿದ್ದು, ಮುಖ್ಯ ನ್ಯಾಯಾಧೀಶ ಹುದ್ದೆಗೇರಿದ ಮೊದಲ ನೈರುತ್ಯ ರಾಜ್ಯಗಳ ವ್ಯಕ್ತಿಯಾಗಿದ್ದಾರೆ. ದೀಪಕ್ ಮಿಶ್ರಾ ಅವರು ಅಕ್ಟೋಬರ್ 2ರಂದು ನಿವೃತ್ತರಾದ ಕಾರಣ ರಂಜನ್ ಗೊಗೊಯ್ ಅವರು ಹೊಸ ಮುಖ್ಯ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

Justice Ranjan Gogoi sworn-in as the Chief Justice of India

ಸೇವೆಯ ಕೊನೆಯ ದಿನ ಭಾವುಕ ಮಾತುಗಳನ್ನಾಡಿದ ನ್ಯಾಯಮೂರ್ತಿ ದೀಪಕ್ ಮಿಶ್ರಾ ಸೇವೆಯ ಕೊನೆಯ ದಿನ ಭಾವುಕ ಮಾತುಗಳನ್ನಾಡಿದ ನ್ಯಾಯಮೂರ್ತಿ ದೀಪಕ್ ಮಿಶ್ರಾ

ರಂಜನ್ ಗೊಗೊಯ್ ಅವರು 2019 ರ ನವೆಂಬರ್ ವರೆಗೂ ಈ ಹುದ್ದೆಯನ್ನು ನಿರ್ವಹಿಸಲಿದ್ದಾರೆ. ಈ ಹಿಂದಿನ ಮುಖ್ಯ ನ್ಯಾಯಮೂರ್ತಿ ಆಗಿದ್ದ ದೀಪಕ್ ಮಿಶ್ರಾ ಅವರು 13 ತಿಂಗಳುಗಳ ಕಾಲ ಕಾರ್ಯ ನಿರ್ವಹಿಸಿದ್ದರು.

Justice Ranjan Gogoi sworn-in as the Chief Justice of India

2018ರಲ್ಲಿ ಸುಪ್ರೀಂಕೋರ್ಟ್ ನೀಡಿದ ಟಾಪ್ 10 ತೀರ್ಪುಗಳು2018ರಲ್ಲಿ ಸುಪ್ರೀಂಕೋರ್ಟ್ ನೀಡಿದ ಟಾಪ್ 10 ತೀರ್ಪುಗಳು

ಸುಪ್ರಿಂಕೋರ್ಟ್‌ನ ಐವರು ನ್ಯಾಯಮೂರ್ತಿಗಳಲ್ಲಿ ರಂಜನ್‌ ಗೊಗೊಯ್ ಅವರೇ ಹಿರಿಯರಾಗಿದ್ದರು ಹಾಗಾಗಿ ದೀಪಕ್‌ ಮಿಶ್ರಾ ಅವರು ರಂಜನ್‌ ಗೊಗೊಯ್ ಅವರನ್ನು ಮುಖ್ಯ ನ್ಯಾಯಾಧೀಶ ಸ್ಥಾನಕ್ಕೆ ಶಿಫಾರಸ್ಸು ಮಾಡಿದ್ದರು.

English summary
Justice Ranjan Gogoi sworn-in as the Chief Justice of India (CJI) at Rashtrapati Bhavan. Ranjan Gogoi was administered the oath by President Ram Nath Kovind. He is the first judge from Assam to become the Chief Justice of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X