ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೋಪಿಗಳ ಚುನಾವಣೆ ಸ್ಪರ್ಧೆ ನಿರ್ಬಂಧ ಅಸಾಧ್ಯ : ಸುಪ್ರೀಂ

By Kiran B Hegde
|
Google Oneindia Kannada News

ನವದೆಹಲಿ, ಫೆ. 19: ಗಂಭೀರ ಅಪರಾಧಗಳ ಆರೋಪ ಹೊತ್ತಿರುವ ವ್ಯಕ್ತಿಗಳನ್ನು ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧ ಹೇರುವುದು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಮುಖ್ಯ ನ್ಯಾಯಮೂರ್ತಿ ಎಚ್.ಎಲ್. ದತ್ತು ಅವರಿದ್ದ ಪೀಠ, ಕುರಿತು ಸ್ಪಷ್ಟಪಡಿಸಿದೆ. ಅಪರಾಧ ಆರೋಪಿಗಳು ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧ ಹೇರುವುದು ಆಕರ್ಷಕವಾಗಿರುತ್ತದೆ, ಉತ್ತಮ ನಿರ್ಧಾರವೂ ಹೌದು. ಆದರೆ, ನ್ಯಾಯಾಲಯಕ್ಕೆ ತನ್ನದೇ ಮಿತಿ ಇದೆ. ಇಂತಹ ಆದೇಶವನ್ನು ನ್ಯಾಯಾಲಯ ಹೊರಡಿಸುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. [ಭಾರತದ ಜಾತ್ಯತೀತವಾಗಿರುತ್ತಾ]

supreme

"ನ್ಯಾಯಾಂಗ ಚಟುವಟಿಕೆಯ ಹೆಸರಿನಲ್ಲಿ ನಾವು ಸಂಸತ್ತಿಗೆ ಸಂಬಂಧಪಟ್ಟ ವಿಷಯದಲ್ಲಿ ತಲೆಹಾಕುವುದು ಸಾಧ್ಯವಿಲ್ಲ. ಅಧಿಕಾರದ ಪ್ರತ್ಯೇಕತೆಯು ಸಂವಿಧಾನದ ಪ್ರಾಥಮಿಕ ನೀತಿಯಾಗಿದೆ. ಅದನ್ನು ನಾವು ಗೌರವಿಸಬೇಕು" ಎಂದು ಎಚ್.ಎಲ್. ದತ್ತು ಅವರು ತಿಳಿಸಿದ್ದಾರೆ. [ಫೇಸ್ ಬುಕ್, ಟ್ವಿಟ್ಟರ್ ಕಾಮೆಂಟ್ ನಲ್ಲಿ ಕಾಮೆಂಟ್]

"ಈ ಕುರಿತು ನಿರ್ಧರಿಸುವುದು ಸಂಸತ್ತಿಗೆ ಬಿಟ್ಟಿದ್ದು. ದೇಶವನ್ನು ಹೇಗೆ ಮುನ್ನಡೆಸಬೇಕು ಹಾಗೂ ಚುನಾವಣೆಗೆ ಯಾರು ಸ್ಪರ್ಧಿಸಬೇಕು ಎಂಬುದನ್ನು ಸಂಸತ್ತು ನಿರ್ಧರಿಸುತ್ತದೆ. ನ್ಯಾಯಾಂಗ ಈ ಕುರಿತು ಕ್ರಮ ಕೈಗೊಳ್ಳುವುದು ಸಾಧ್ಯವಿಲ್ಲ" ಎಂದು ತಿಳಿಸಿದ್ದಾರೆ. [ಗಂಗಾ ಶುದ್ಧೀಕರಣ ಯಾವಾಗ?]

ಆರೋಪ ಹೊತ್ತ ವ್ಯಕ್ತಿಗಳು ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧ ಹೇರಬೇಕು ಎಂದು ಹಿರಿಯ ನ್ಯಾಯವಾದಿ ದಿನೇಶ್ ದ್ವಿವೇದಿ ಸ್ವಯಂ ಸೇವಾ ಸಂಸ್ಥೆಯೊಂದರ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅಲ್ಲದೆ, ಹೆಚ್ಚುತ್ತಿರುವ ರಾಜಕೀಯದ ಅಪರಾಧೀಕರಣ ತಡೆಯಲು ಮಾರ್ಗದರ್ಶಿ ಸೂತ್ರಗಳನ್ನು ವಿಧಿಸಬೇಕೆಂದು ಕೋರಿದ್ದರು. [ಮದುವೆಗಾಗಿ ಮತಾಂತರ ಅಸಿಂಧು]

English summary
Apex Court said that the judiciary could not restrain tainted people from contesting elections. Judiciary could not enter the domain of the legislature.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X