ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪಾಟ್ ಫಿಕ್ಸಿಂಗ್ ಹಗರಣ : ಮೇಯಪ್ಪನ್ ಗೆ ಮತ್ತಷ್ಟು ಸಂಕಷ್ಟ

|
Google Oneindia Kannada News

Gurunath Meiyappan
ನವದೆಹಲಿ, ಫೆ.10 : ಐಪಿಎಲ್​​ ಆರನೇ ಆವೃತ್ತಿಯ ಸ್ಪಾಟ್​​ ಫಿಕ್ಸಿಂಗ್​​ ಪ್ರಕರಣದ ಕುರಿತು ತನಿಖೆ ನಡೆಸಿರುವ ನ್ಯಾ. ಮುಕುಲ್​​ ಮದ್ಗಲ್​ ನೇತೃತ್ವದ ಸಮಿತಿ ಸೋಮವಾರ ಸುಪ್ರೀಂಕೋರ್ಟ್ ಗೆ ವರದಿ ಸಲ್ಲಿಸಿದೆ. ವರದಿಯಲ್ಲಿ ಚೆನ್ನೈ ಸೂಪರ್​​ ಕಿಂಗ್ಸ್ ಮಾಲೀಕ ಗುರುನಾಥ್​​ ಮೇಯಪ್ಪನ್​​ ಮೇಲಿನ ಆರೋಪ ಸತ್ಯವಾಗಿದ್ದು ಎಂದು ತಿಳಿಸಲಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್ ಹಗರಣದ ಕುರಿತು ತನಿಖೆ ನಡೆಸಲು, ನ್ಯಾಯಾಮೂರ್ತಿ ಮುಕುಲ್ ಮುಗ್ದಲ್ ಅವರನ್ನೊಳಗೊಂಡ ಸಮಿತಿ ರಚಿಸಲಾಗಿತ್ತು. ಸಮಿತಿ ಸೋಮವಾರ ಸುಪ್ರೀಂಕೋರ್ಟ್ ಗೆ ತನ್ನ ವರದಿ ನೀಡಿದ್ದು, ಹಗರಣದಲ್ಲಿ ಗುರುನಾಥ್ ಮೇಯಪ್ಪನ್ ಭಾಗಿಯಾಗಿರುವುದಾಗಿ ಹೇಳಿದೆ. [ಗುರು ಸಿಎಸ್ ಕೆ ಬಾಸ್ ಅಲ್ವಂತೆ]

ಹಾಗೆಯೇ ಹಗರಣದಲ್ಲಿ ರಾಜ್‌ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ಅವರ ಮೇಲಿನ ಆರೋಪದ ಬಗ್ಗೆ ಮುಂದಿನ ತನಿಖೆ ನಂತರ ತಿಳಿಸಲಾಗುತ್ತದೆ ಎಂದು ಸಮಿತಿ ವರದಿಯಲ್ಲಿ ಹೇಳಿದೆ. ವರದಿ ಸ್ವೀಕರಿಸಿರುವ ಸುಪ್ರೀಂಕೋರ್ಟ್​​​ ಪ್ರಕರಣದ ವಿಚಾರಣೆಯನ್ನು ಮಾರ್ಚ್​​ 7ಕ್ಕೆ ಮುಂದೂಡಿದೆ. ಅಲ್ಲದೇ, ಐಪಿಎಲ್​ 7ನೇ ಆವೃತ್ತಿಯ ಹರಾಜು ಪ್ರಕ್ರಿಯೆಗೆ ಯಾವುದೇ ತಡೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

170 ಪುಟಗಳ ವರದಿಗೆ ಅಡಿ ಟಿಪ್ಪಣಿಗಳನ್ನು ಸೇರಿಸಿದಂತೆ ಸುಮಾರು 4000 ಪುಟಗಳ ವರದಿಯನ್ನು ನ್ಯಾಯಲಯಕ್ಕೆ ಸಲ್ಲಿಸಲಾಗಿದೆ. ತಂಡದ ಆಟಗಾರರು, ಪರ್ತಕರ್ತರು ಸೇರಿದಂತೆ ಹಲವರ ಹೇಳಿಕೆಗಳನ್ನು ವರದಿಯಲ್ಲಿ ಸೇರಿಸಲಾಗಿದೆ.

ಗುರುನಾಥ್​​ ಮೇಯಪ್ಪನ್​​ ಹಾಗೂ ರಾಜ್ ಕುಂದ್ರಾ ವಿರುದ್ಧ ಬೆಟ್ಟಿಂಗ್​ ಹಾಗೂ ಸ್ಪಾಟ್​ ಫಿಕ್ಸಿಂಗ್​ ಆರೋಪ ಕೇಳಿಬಂದ ಬಳಿಕ ಬಿಸಿಸಿಐ ಆಂತರಿಕ ತನಿಖೆ ನಡೆದಿತ್ತು. ಅದರಲ್ಲಿ ಇಬ್ಬರಿಗೂ ಕ್ಲೀನ್ ಚಿಟ್ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ, ಬಿಹಾರ್​​ ಕ್ರಿಕೆಟ್​​ ಸಂಸ್ಥೆಯ ಕಾರ್ಯದರ್ಶಿ ಅದಿತ್ಯ ಮೆಹತಾ ಸುಪ್ರೀಂಕೋರ್ಟ್ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ನ್ಯಾಯಾಲಯ ನ್ಯಾ.ಮುಕುಲ್​​ ಮದಗಲ್​ ನೇತೃತ್ವದಲ್ಲಿ ಮೂರು ಸದಸ್ಯರ ತನಿಖಾ ತಂಡವನ್ನ ರಚಿಸಿ ವರದಿ ನೀಡುವಂತೆ ಸೂಚನೆ ನೀಡಿತ್ತು.

English summary
Justice Mukul Mudgal-led committee, probing corruption charges against team owners of Chennai Super Kings and Rajasthan Royals, has submitted its report to the Supreme Court on Monday, Feb 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X