ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಪಿ ನಡ್ಡಾ ಆರೋಪದಲ್ಲಿರುವುದು ಅರ್ಧ ಸತ್ಯ : ಚಿದಂಬರಂ

|
Google Oneindia Kannada News

ನವದೆಹಲಿ, ಜೂನ್ 27: ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದಲ್ಲಿ ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ರಾಜೀವ್‌ಗಾಂಧಿ ಪೌಂಡೇಶನ್‌ಗೆ ಹಣ ವರ್ಗಾವಣೆಯಾಗಿತ್ತು ಎಂಬ ಬಿಜೆಪಿ ಆರೋಪದಲ್ಲಿ ಅರ್ಧ ಮಾತ್ರ ಸತ್ಯ ಇದೆ ಎಂದು ಕಾಂಗ್ರೆಸ್ ನಾಯಕ ಪಿ ಚಿದಂಬರಂ ಆರೋಪಿಸಿದ್ದಾರೆ.

Recommended Video

Community spreading started in India ? The stats are scary | Oneindia Kannada

2005ರಲ್ಲಿ 20 ಲಕ್ಷ ರೂಪಾಯಿಗಳನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ರಾಜೀವ್ ಗಾಂಧಿ ಫೌಂಡೇಶನ್ ಗೆ ವರ್ಗಾವಣೆ ಮಾಡಲಾಗಿತ್ತು ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಪಿ ಚಿದಂಬರಂ, ಬಿಜೆಪಿ ಆರೋಪದಲ್ಲಿ ಅರ್ಧ ಸತ್ಯವಿದೆ ಎಂದಿದ್ದಾರೆ.

2015ರಿಂದ ಚೀನಾ ನಡೆಸಿರುವ ಆಕ್ರಮಣದ ಕುರಿತು ಪ್ರಶ್ನೆ ಕೇಳಲಿ: ಚಿದಂಬರಂ2015ರಿಂದ ಚೀನಾ ನಡೆಸಿರುವ ಆಕ್ರಮಣದ ಕುರಿತು ಪ್ರಶ್ನೆ ಕೇಳಲಿ: ಚಿದಂಬರಂ

ಯಾವುದೇ ಫೌಂಡೇಶನ್ ಗಳು, ಚಿಂತಕರ ವೇದಿಕೆಗಳು ಧನ ಸಹಾಯ, ಪ್ರಚಾರಗಳಿಂದ ನಡೆಯುತ್ತವೆ ಎಂಬುದು ಎಲ್ಲರಿಗೂ ತಿಳಿದಿದೆ. ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ ವಿಚಾರದಲ್ಲಿ ರಾಜೀವ್ ಗಾಂಧಿ ಫೌಂಡೇಶನ್ ಹಣದ ಲೆಕ್ಕಪತ್ರಗಳನ್ನು ಸರಿಯಾಗಿ ತೋರಿಸಿದೆ.

JP Nadda Specialises In Speaking Half-Truths, Should Come To Terms With Reality

ಅಂದಿನ ಯುಪಿಎ ಸರ್ಕಾರ ಹಣ ಸ್ವೀಕರಿಸಿದ ಬಗ್ಗೆ ದಾಖಲೆಗಳಲ್ಲಿ ತೋರಿಸಿದ್ದು ಅದರಲ್ಲಿ ಯಾವುದೇ ರಹಸ್ಯಗಳಿಲ್ಲ, ಅದು ಮುಗಿದ ಅಧ್ಯಾಯ, ಅದನ್ನು ಈಗ ಬಿಜೆಪಿ ನಾಯಕರು ಕೆದಕುವುದರಲ್ಲಿ ಅರ್ಥವೇನಿದೆ ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

ಬಿಜೆಪಿ ನಾಯಕರು ಕ್ಷುಲ್ಲಕ ಪ್ರಶ್ನೆ ಕೇಳುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಒಂದು ವೇಳೆ ರಾಜೀವ್ ಗಾಂಧಿ ಫೌಂಡೇಶನ್ 20 ಲಕ್ಷ ರೂಪಾಯಿಗಳನ್ನು ಹಿಂತಿರುಗಿಸಿದರೆ ಅತಿಕ್ರಮಣವನ್ನು ಚೀನಾ ನಿಲ್ಲಿಸಿ ಸೇನೆಯನ್ನು ಲಡಾಖ್ ಗಡಿಭಾಗದಿಂದ ಹಿಂತೆಗೆದುಕೊಳ್ಳುತ್ತದೆ ಎಂದು ಪ್ರಧಾನಿ ಮೋದಿ ದೇಶಕ್ಕೆ ಭರವಸೆ ನೀಡಬಹುದೇ ಎಂದು ಪ್ರಶ್ನಿಸಿದರು.

ಯುಪಿಎ ಸರ್ಕಾರ ಪಡೆದಿದ್ದ ಹಣವನ್ನು ಅಂಡಮಾನ್ ಮತ್ತು ನಿಕೊಬಾರ್ ನಲ್ಲಿ ಸುನಾಮಿ ಪರಿಹಾರ ಕೆಲಸಗಳಿಗೆ ಬಳಸಿಕೊಳ್ಳಲಾಗಿತ್ತು. ಆರೋಪ ಮಾಡುವ ಮೊದಲು ವಾಸ್ತವ ಸತ್ಯಗಳನ್ನು ತಿಳಿದುಕೊಳ್ಳಬೇಕು ಎಂದು ಕಿಡಿಕಾರಿದ್ದಾರೆ.

English summary
Congress leader P Chidambaram on Saturday launched an attack on BJP chief JP Nadda, accusing him of being an expert in "speaking half-truths" and said that Rs 20 lakhs deposited in the Rajiv Gandhi Foundation "from PM National Relief Fund in 2005 was for tsunami relief work in Andaman and Nicobar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X