ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮಿತ್ ಶಾ ಜಾಗಕ್ಕೆ ಇಂದು ನಡ್ಡಾ ಆಯ್ಕೆ

|
Google Oneindia Kannada News

ನವದೆಹಲಿ,ಜನವರಿ 20: ಕೇಂದ್ರ ಗೃಹ ಸಚಿವರೂ ಆಗಿರುವ ಅಮಿತ್ ಶಾ ಅವರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ ಜೆ.ಪಿ ನಡ್ಡಾ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಲೋಕಸಭಾ ಚುನಾವಣೆ ಬಳಿಕ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ನಡ್ಡಾ ಇಂದು ಅಧಿಕೃತವಾಗಿ ಬಿಜೆಪಿಯಲ್ಲಿ ಉನ್ನತ ಸ್ಥಾನಕ್ಕೇರಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಹಾಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಪ್ರಥಮ ಆಯ್ಕೆಯಾಗಿರುವ ನಡ್ಡಾ ಮುಂದಿನ ಮೂರು ವರ್ಷದ ವರೆಗೆ ಪಕ್ಷದ ಉನ್ನತ ಜವಾಬ್ದಾರಿಯನ್ನು ಹೊರಲಿದ್ದಾರೆ.

JP Nadda

ಪಕ್ಷದ ಚುನಾವಣಾ ವೇಳಾಪಟ್ಟಿ ಪ್ರಕಾರ ಅಧ್ಯಕ್ಷ ಹುದ್ದೆಗೆ ಇಂದು ನಾಮಪತ್ರ ಪ್ರಕ್ರಿಯೆ ನಡೆಯಲಿದೆ. ಒಂದೊಮ್ಮೆ ಅಗತ್ಯವಿದ್ದರೆ ನಾಳೆ ಚುನಾವಣೆ ಪ್ರಕ್ರಿಯೆ ನಡೆಯಲಿದೆ.

ಟ್ವಿಟ್ಟರ್‌ನಲ್ಲಿ ಅಮಿತ್ ಶಾ ಭಾಷಣ ಬದಲು ಸಿನಿಮಾ ಹಾಡು ಕೇಳಿಸಿದ ಬಿಜೆಪಿ!ಟ್ವಿಟ್ಟರ್‌ನಲ್ಲಿ ಅಮಿತ್ ಶಾ ಭಾಷಣ ಬದಲು ಸಿನಿಮಾ ಹಾಡು ಕೇಳಿಸಿದ ಬಿಜೆಪಿ!

ಆದರೆ ಮೂಲಗಳ ಪ್ರಕಾರ ಹಾಲಿ ಅಧ್ಯಕ್ಷ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ,ಬಿಜೆಪಿ ಸಂಸದೀಯ ಮಂಡಳಿ ಎಲ್ಲಾ ರಾಜ್ಯ ಘಟಕದ ಅಧ್ಯಕ್ಷರು ನಡ್ಡಾ ಹೆಸರನ್ನು ಸೂಚಿಸುವ ಸಾಧ್ಯತೆ ಇದೆ. ಹೀಗಾಗಿ ಸರ್ವಾನುಮತದಿಂದ ನಡ್ಡಾ ಅವರ ಅವಿರೋಧ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಆರ್‌ಎಸ್‌ಎಸ್‌ನ ವಿದ್ಯಾರ್ಥಿ ಸಂಘಟನೆಯಾಗಿರುವ ಎಬಿವಿಪಿಯಿಂದ ಸಾರ್ವಜನಿಕ ಬದುಕುಆರಂಭಿಸಿರುವ ಜೆಪಿ ನಡ್ಡಾ ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಂಘಟನೆಯಲ್ಲಿ ಮೊದಲಿನಿಂದಲೂ ತೊಡಗಿಕೊಂಡಿದ್ದವರು.

ನರೇಂದ್ರ ಮೋದಿಯವರ ಮೊದಲ ಅವಧಿಯ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದ ನಡ್ಡಾ ಬಿಜೆಪಿಯ ಸಂಸದೀಯ ಮಂಡಳಿಯ ಸದಸ್ಯರೂ ಆಗಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ಪ್ರಭಾರಿಯಾಗಿ ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಮೋದಿ, ಶಾ ತಂಡದ 'ಗೋ ಮ್ಯಾನ್' ಎಂದೇ ಖ್ಯಾತರಾಗಿರುವ ಮೃದು ಸ್ವಭಾವಿ ನಡ್ಡಾ ಸಂಘಟನೆ ಹಾಗೂ ಚುನಾವಣಾ ರಣತಂತ್ರದಲ್ಲಿ ಚತುರರೂ ಎನಿಸಿಕೊಂಡಿದ್ದಾರೆ.

ಆದರೆ ಕಾರ್ಯಾಧ್ಯಕ್ಷ ಅವಧಿಯಲ್ಲಿ ಮಹಾರಾಷ್ಟ್ರ, ಹರ್ಯಾಣ, ಜಾರ್ಖಂಡ್‌ನಲ್ಲಿ ಬಿಜೆಪಿಗೆ ಹಿನ್ನಡೆಯಾಗಿರುವುದು ಜೆಪಿ ನಡ್ಡಾ ಅವರಿಗೂ ಹಿನ್ನಡೆಯಾದಂತಾಗಿದೆ.
ಈ ವರ್ಷ ನಡೆಯಲಿರುವ ದೆಹಲಿ ಹಾಗೂ ಬಿಹಾರ ವಿಧಾನಸಭಾ ಚುನಾವಣೆಯು ನಡ್ಡಾ ಅವರಿಗೆ ಅತಿ ಮುಖ್ಯವಾಗಿರಲಿದೆ.

English summary
JP Nadda is likely to be appointed BJP's national president on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X