ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಡನ್‌ಗೆ ಹಾರುತ್ತಿದ್ದ ಪತ್ರಕರ್ತೆ ರಾಣಾರನ್ನು ತಡೆಹಿಡಿದ ಇಡಿ

|
Google Oneindia Kannada News

ನವದೆಹಲಿ ಮಾರ್ಚ್ 30: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪತ್ರಕರ್ತೆ ರಾಣಾ ಅಯ್ಯೂಬ್ ಆರೋಪಿಯಾಗಿರುವ ಕಾರಣ ಅವರನ್ನು ಮಂಗಳವಾರ ಲಂಡನ್‌ಗೆ ಪ್ರಯಾಣಿಸುವುದನ್ನು ತಡೆಹಿಡಿಯಲಾಗಿದೆ. ಅಯ್ಯೂಬ್ ಅವರು ಲಂಡನ್‌ ಪ್ರಯಾಣಿಸುವ ಮುನ್ನ ಮುಂಬೈ ವಿಮಾನ ನಿಲ್ದಾಣದಲ್ಲಿ ಅವರನ್ನು ತಡೆಹಿಡಿಯಲಾಗಿದೆ.

ಕೋವಿಡ್-19 ಪರಿಹಾರಕ್ಕಾಗಿ ದೇಣಿಗೆ ಸಂಗ್ರಹಿಸುವಾಗ ಎಂಎಸ್ ಅಯ್ಯೂಬ್ ಅವರು ವಿದೇಶಿ ಧನಸಹಾಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ರಾಣಾ ಅವರು ಲಂಡನ್​​ನಲ್ಲಿ ನಡೆಯಲಿರುವ ಇಂಟರ್​ನ್ಯಾಶನಲ್​ ಸೆಂಟರ್​ ಫಾರ್​ ಜರ್ನಲಿಸ್ಟ್ಸ್​ (ICJ) ಕಾರ್ಯಕ್ರಮದಲ್ಲಿ ಭಾಷಣ ಮಾಡಲು ತೆರಳುವವರಿದ್ದರು. ಹೀಗಾಗಿ ಮಾರ್ಚ್​ 29ರಂದು ಮುಂಬೈ ಏರ್​ಪೋರ್ಟ್​ಗೆ ಬಂದಿದ್ದರು. ಈ ವೇಳೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅವರನ್ನು ತಡೆಹಿಡಿದಿದ್ದಾರೆ. ಜಾರಿ ನಿರ್ದೇಶನಾಲಯದಿಂದ ತನಿಖೆ ನಡೆಸುತ್ತಿರುವ ಆಪಾದಿತ ಅಯ್ಯೂಬ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

'ದಿ ಕಾಶ್ಮೀರ್ ಫೈಲ್ಸ್': ಅರವಿಂದ್ ಕೇಜ್ರಿವಾಲ್ ಹೇಳಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ 'ದಿ ಕಾಶ್ಮೀರ್ ಫೈಲ್ಸ್': ಅರವಿಂದ್ ಕೇಜ್ರಿವಾಲ್ ಹೇಳಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ

"ಭಾರತೀಯ ಪ್ರಜಾಪ್ರಭುತ್ವದ ಕುರಿತು ಮುಖ್ಯ ಭಾಷಣ ಮಾಡಲು ಮತ್ತು ಅಂತರಾಷ್ಟ್ರೀಯ ಪತ್ರಿಕೋದ್ಯಮ ಉತ್ಸವದಲ್ಲಿ ಭಾಗವಹಿಸಲು ಪ್ರಯಾಣಿಸುತ್ತಿದ್ದ ನನ್ನನ್ನು ಮುಂಬೈ ಇಮಿಗ್ರೇಷನ್‌ನಲ್ಲಿ ಇಂದು ತಡೆಹಿಡಿಯಲಾಯಿತು. ನಾನು ಈ ಬಗ್ಗೆ ವಾರದಿಂದಲೇ ಸಾರ್ವಜನಿಕವಾಗಿ ಪ್ರಕಟಿಸುತ್ತಿದ್ದೇನೆ. ಆದರೆ ಇಡಿ (ಜಾರಿ ನಿರ್ದೇಶನಾಲಯ) ಸಮನ್ಸ್ ಬಹಳ ಕುತೂಹಲಕಾರಿಯಾಗಿದೆ" ಎಂಎಸ್ ಅಯ್ಯೂಬ್ ಟ್ವೀಟ್ ಮಾಡಿದ್ದಾರೆ.

"https://twitter.com/journalismfest?ref_src=twsrc%5Etfw">@journalismfest to deliver d keynote speech on Indian democracy. I had made this announcement public over weeks, yet the ED summon very curiously arrived in my inbox after i was stopped https://t.co/BGNm8pcjlD

— Rana Ayyub (@RanaAyyub) March 29, 2022

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತೆ ರಾಣಾ ಅಯ್ಯುಬ್ ಅವರಿಗೆ ಸೇರಿದ 1.77 ಕೋಟಿ ರೂಪಾಯಿ ಮೊತ್ತದ ಬ್ಯಾಂಕ್ ಠೇವಣಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ.

Journalist Rana Ayyub Stopped At Mumbai Airport From Flying To London

'ಕೆಟ್ಟೋ' ಎಂಬ ಆನ್‌ಲೈನ್ ಕ್ರೌಡ್ ಫಂಡಿಂಗ್ ಪ್ಲಾಟ್‌ಫಾರ್ಮ್ ಮೂಲಕ ಕೋವಿಡ್ ಸಾಂಕ್ರಾಮಿಕದಿಂದ ಸಂಕಷ್ಟಕ್ಕೆ ಸಿಲುಕಿದ ಜನರಿಗೆ ಸಹಾಯ ಮಾಡುವುದು ಸೇರಿದಂತೆ, 2.7 ಕೋಟಿ ರೂ ದೇಣಿಗೆದಾರರ ನಿಧಿಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಗಾಜಿಯಾಬಾದ್ ಪೊಲೀಸರು 2021ರ ಸೆಪ್ಟೆಂಬರ್‌ನಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಅದರ ಆಧಾರದಲ್ಲಿ ಜಾರಿ ನಿರ್ದೇಶನಾಲಯ ರಾಣಾ ವಿರುದ್ಧ ಪ್ರಕರಣ ದಾಖಲಿಸಿದೆ.

Journalist Rana Ayyub Stopped At Mumbai Airport From Flying To London

ಗಾಜಿಯಾಬಾದ್‌ನ ಇಂದಿರಾಪುರಂ ನಿವಾಸಿ ಮತ್ತು 'ಹಿಂದು ಐಟಿ ಸೆಲ್' ಎಂಬ ಎನ್‌ಜಿಒ ಸಂಸ್ಥಾಪಕ ವಿಕಾಸ್ ಸಾಂಕೃತ್ಯಾಯನ ಎಂಬುವವರು ರಾಣಾ ಅಯ್ಯುಬ್ ವಿರುದ್ಧ ದೂರು ಸಲ್ಲಿಸಿದ್ದರು. ಸಂಪೂರ್ಣ ಪೂರ್ವ ಯೋಜಿತ ಮತ್ತು ವ್ಯವಸ್ಥಿತ ರೀತಿಯಲ್ಲಿ ಚಾರಿಟಿ ಹೆಸರಿನಲ್ಲಿ ಹಣವನ್ನು ಸಂಗ್ರಹಿಸಲಾಗಿದೆ ಮತ್ತು ಹಣವನ್ನು ಸಂಗ್ರಹಿಸುವ ಉದ್ದೇಶಕ್ಕಾಗಿ ಹಣವನ್ನು ಸಂಪೂರ್ಣವಾಗಿ ಬಳಸಲಾಗಿಲ್ಲ ಎಂದು ತನಿಖೆಯು ಸ್ಪಷ್ಟಪಡಿಸುತ್ತದೆ ಎಂದು ಇಡಿ ಆರೋಪಿಸಿದೆ. ಏಪ್ರಿಲ್ 1 ರಂದು ಜಾರಿ ನಿರ್ದೇಶನಾಲಯ ಆಕೆಯನ್ನು ವಿಚಾರಣೆಗೆ ಕರೆದಿದೆ.

English summary
Journalist Rana Ayyub was stopped from flying to London on Tuesday as she is an accused in an alleged money laundering case, which is being investigated by the Enforcement Directorate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X