ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೋಗಿ ವಿರುದ್ಧದ ಪೋಸ್ಟ್ ಗೆ ಬಂಧನ; ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪತ್ರಕರ್ತನ ಪತ್ನಿ

|
Google Oneindia Kannada News

ನವದೆಹಲಿ, ಜೂನ್ 10: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಗ್ಗೆ 'ಆಕ್ಷೇಪಾರ್ಹ' ಪೋಸ್ಟ್ ಷೇರ್ ಮಾಡಿದ್ದಕ್ಕಾಗಿ ಬಂಧನಕ್ಕೆ ಒಳಗಾಗಿರುವ ಪತ್ರಕರ್ತ ಪ್ರಶಾಂತ್ ಕನೋಜಿಯಾ ಅವರ ಪತ್ನಿ ಸೋಮವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಪ್ರಕರಣದ ವಿಚಾರಣೆಯನ್ನು ಮಂಗಳವಾರ ಸುಪ್ರೀಂ ಕೋರ್ಟ್ ಆಲಿಸಲಿದೆ.

ಕಾನ್ ಪುರ್ ಮೂಲದ ಮಹಿಳೆಯೊಬ್ಬರು ಆದಿತ್ಯನಾಥ್ ವಿರುದ್ಧ ಮಾಡಿದ ಆರೋಪದ ವಿಡಿಯೋವನ್ನು ಪ್ರಶಾಂತ್ ಕನೋಜಿಯಾ ಕಳೆದ ವಾರ ಷೇರ್ ಮಾಡಿದ್ದರು. ಕಳೆದ ಶನಿವಾರ ಬೆಳಗ್ಗೆ ದೆಹಲಿಯ ಮನೆಯಿಂದ ಪ್ರಶಾಂತ್ ರನ್ನು ಬಂಧಿಸಿದ ಪೊಲೀಸರು, ಸಂಜೆ ಜೈಲಿಗೆ ಕಳುಹಿಸಿದ್ದರು. ಯೋಗಿ ವಿರುದ್ಧ ಆರೋಪ ಮಾಡಿದ ಮಹಿಳೆಯನ್ನು ಸಹ ಬಂಧಿಸಲಾಗಿತ್ತು.

ಸಿಎಂ ಯೋಗಿ ವಿರುದ್ಧ 'ಆಕ್ಷೇಪಾರ್ಹ' ಪೋಸ್ಟ್ ಷೇರ್ ಮಾಡಿದ್ದಕ್ಕೆ ಪತ್ರಕರ್ತ ಬಂಧನ ಸಿಎಂ ಯೋಗಿ ವಿರುದ್ಧ 'ಆಕ್ಷೇಪಾರ್ಹ' ಪೋಸ್ಟ್ ಷೇರ್ ಮಾಡಿದ್ದಕ್ಕೆ ಪತ್ರಕರ್ತ ಬಂಧನ

ಲಖನೌನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕಲಾನಿಧಿ ನೈಥಾನಿ ಹೇಳಿರುವ ಪ್ರಕಾರ, ಸುಳ್ಳು ಮಾಹಿತಿ ಹರಡಿರುವ ಕನೋಜಿಯಾ ವಿರುದ್ಧ ಸಾಕ್ಷ್ಯಗಳಿವೆ. ಭಾನುವಾರದಂದು ಪೊಲೀಸರು ಪ್ರಶಾಂತ್ ಕನೋಜಿಯಾ ವಿರುದ್ಧ ಇನ್ನಷ್ಟು ಆರೋಪಗಳನ್ನು ಸೇರಿಸಲಾಗಿದೆ. ಲೈಸೆನ್ಸ್ ಇಲ್ಲದೆ ನಡೆಸುತ್ತಿರುವ ಆರೋಪದಲ್ಲಿ ನೋಯ್ಡಾದಲ್ಲಿ ಇರುವ ಖಾಸಗಿ ಟೀವಿ ಚಾನಲ್ ಗೆ ಬೀಗ ಹಾಕಲಾಗಿದೆ ಎನ್ನಲಾಗಿದೆ. ಆ ಚಾನಲ್ ವಿರುದ್ಧವೂ ಯೋಗಿ ಆದಿತ್ಯನಾಥ್ ವಿರುದ್ಧ ಆಕ್ಷೇಪಾರ್ಹ ಮಾಹಿತಿ ಪ್ರಸಾರ ಮಾಡಿದ ಆರೋಪವಿದೆ.

Journalist Prashanth Kanojia wife appeal for Supreme Court

ಮಾಧ್ಯಮ ವಲಯದಲ್ಲಿ ಈ ಕ್ರಮಗಳ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕಾನೂನು ದುರುಪಯೋಗ ಮಾಡಿಕೊಂಡು, ಪತ್ರಕರ್ತರ ಬಂಧನ ಮಾಡಲಾಗಿದೆ ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಟೀಕಿಸಿದೆ.

English summary
Journalist Prashanth Kanojia wife appeal for Supreme Court. Prashanth Kanojia booked under various section, alleged circulation of objectionable post against UP chief minister Yogi Adityanath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X