ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾರ್ವರ್ಡ್ ವಿವಿ ಹೆಸರಲ್ಲಿ ವಂಚನೆ: ಪತ್ರಕರ್ತೆ ನಿಧಿ ರಾಜ್ದಾನ್ ದೂರು

|
Google Oneindia Kannada News

ನವದೆಹಲಿ, ಜನವರಿ 19: ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಹುದ್ದೆಯ ಆಫರ್ ಪಡೆದು ವಂಚನೆಗೆ ಒಳಗಾದ ಹಿರಿಯ ಪತ್ರಕರ್ತೆ ನಿಧಿ ರಾಜ್ದಾನ್ ದೆಹಲಿ ಪೊಲೀಸ್‌ನ ಸೈಬರ್ ಅಪರಾಧ ಘಟಕಕ್ಕೆ ದೂರು ನೀಡಿದ್ದಾರೆ.

ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗೆ ನಿಧಿ ರಾಜ್ದಾನ್ ಅವರಿಗೆ ಇ-ಮೇಲ್ ಮೂಲಕ ಆಫರ್ ಬಂದಿತ್ತು. ಅದನ್ನು ನಿಜವೆಂದು ನಂಬಿದ್ದ ನಿಧಿ, ಟ್ವಿಟ್ಟರ್ ಖಾತೆಯಲ್ಲಿ ಖುಷಿಯನ್ನು ಹಂಚಿಕೊಂಡಿದ್ದರು. ಆದರೆ ತಾವು ಫಿಶಿಂಗ್ (ಆನ್‌ಲೈನ್ ವಂಚನೆ) ಜಾಲಕ್ಕೆ ಬಿದ್ದಿರುವುದು ಅವರಿಗೆ ತಡವಾಗಿ ಅರಿವಿಗೆ ಬಂದಿತ್ತು.

251 ರೂಗೆ ಸ್ಮಾರ್ಟ್ ಫೋನ್ ಆಯ್ತು, ಈಗ ಡ್ರೈಫ್ರೂಟ್ ಮಾರಾಟದಲ್ಲಿ ಕೋಟ್ಯಂತರ ರೂಪಾಯಿ ವಂಚನೆ251 ರೂಗೆ ಸ್ಮಾರ್ಟ್ ಫೋನ್ ಆಯ್ತು, ಈಗ ಡ್ರೈಫ್ರೂಟ್ ಮಾರಾಟದಲ್ಲಿ ಕೋಟ್ಯಂತರ ರೂಪಾಯಿ ವಂಚನೆ

ಫೋರ್ಜರಿ, ಗುರುತಿನ ವಂಚನೆ ಮತ್ತು ಅನಾಮಧೇಯ ವ್ಯಕ್ತಿಯ ನಟನೆಯಿಂದ ಮೋಸ ಹೋದ ಆರೋಪಗಳನ್ನು ದೆಹಲಿ ಪೊಲೀಸರು ಸೋಮವಾರ ದಾಖಲಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ನಿಧಿ ಅವರು ಜನವರಿ 16ರಂದು ಶ್ರೀನಗರದಲ್ಲಿದ್ದಾಗ ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಇದೇ ರೀತಿಯ ದೂರು ಸಲ್ಲಿಸಿದ್ದರು.

 Journalist Nidhi Razdan Complaint To Cyber Crime Cell On Alleged Phishing Scam

ಆಗ್ನೇಯ ಜಿಲ್ಲೆಯ ಪೊಲೀಸ್ ಠಾಣೆಯೊಂದರಲ್ಲಿ ದಾಖಲಿಸಿರುವ ದೂರಿನ ಆಧಾರದಲ್ಲಿ ತನಿಖೆ ನಡೆಸಲಾಗುವುದು. ಈ ಹಗರಣದ ಹಿಂದೆ ಇರುವವರು ರವಾನಿಸಿದ ಇ-ಮೇಲ್ ಸರಣಿಗಳನ್ನು ಹಾಗೂ ಈ ವಿಚಾರಕ್ಕೆ ಸಂಬಂಧಿಸಿದ ಇತರೆ ದಾಖಲೆಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

2019ರ ಡಿಸೆಂಬರ್‌ನಲ್ಲಿ ನಿಧಿ ರಾಜ್ದಾನ್ ಅವರಿಗೆ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಬೋಧನೆಗಾಗಿ ಆಹ್ವಾನವುಳ್ಳ ಇ-ಮೇಲ್ ರವಾನಿಸಲಾಗಿತ್ತು. ಇದರ ಬಳಿಕ ಅವರು ಕಳೆದ ಜೂನ್ ತಿಂಗಳಲ್ಲಿ ಎನ್‌ಡಿಟಿವಿಯ ಕಾರ್ಯಕಾರಿ ಸಂಪಾದಕಿ ಹುದ್ದೆಗೆ ರಾಜೀನಾಮೆ ನೀಡಿದ್ದರು.

ನೀವು ಸೈಬರ್ ವಂಚನೆಗೆ ಒಳಗಾಗಿದ್ದೀರಾ? ಹಾಗಾದರೆ 100ಕ್ಕೆ ಡಯಲ್ ಮಾಡಿನೀವು ಸೈಬರ್ ವಂಚನೆಗೆ ಒಳಗಾಗಿದ್ದೀರಾ? ಹಾಗಾದರೆ 100ಕ್ಕೆ ಡಯಲ್ ಮಾಡಿ

ಆದರೆ ಅವರಿಗೆ ಸುಮಾರು ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಬಂದಿದ್ದ ಈ ಸರಣಿ ಇ-ಮೇಲ್‌ಗಳು ಮತ್ತು ನಕಲಿ ದಾಖಲೆಗಳು ದೊಡ್ಡ ಹಗರಣ ಎನ್ನುವುದು ಕಳೆದ ವಾರವಷ್ಟೇ ಅರಿವಿಗೆ ಬಂದಿದ್ದವು. ಹೀಗಾಗಿ ಆರೋಪಿಗಳನ್ನು ಪತ್ತೆ ಮಾಡಲು ವಿಸ್ತೃತ ತನಿಖೆ ನಡೆಸುವಂತೆ ಅವರು ಸೈಬರ್ ಅಪರಾಧ ಘಟಕಕ್ಕೆ ದೂರು ನೀಡಿದ್ದರು.

ಅಲ್ಲದೆ, ಎಫ್‌ಬಿಐ ಅಥವಾ ಇತರೆ ಸಂಬಂಧಿತ ಸಂಸ್ಥೆಗಳಿಗೆ ಈ ಬಗ್ಗೆ ತನಿಖೆ ನಡೆಸಲು ದೂರು ನೀಡುವಂತೆ ಅವರು ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಕೋರಿದ್ದಾರೆ.

English summary
Former Executive Editor of NDTV Nidhi Razdan files a complaint in Delhi cyber crime cell over alleged phishing scam where she got fake offer as Associate Professor at Harvard University.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X