ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಮೆಟ್ರೋದಲ್ಲಿ ಪತ್ರಕರ್ತೆ ಮೇಲೆ ಲೈಂಗಿಕ ಹಲ್ಲೆ

By Prasad
|
Google Oneindia Kannada News

ನವದೆಹಲಿ, ನವೆಂಬರ್ 17 : ದೆಹಲಿಯ ಮೆಟ್ರೋದಲ್ಲಿ ಹಾಡಹಗಲೇ ದುರುಳನೊಬ್ಬ ಯುವತಿಯ ಮೇಲೆ ಲೈಂಗಿಕ ಹಲ್ಲೆ ನಡೆಸಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ನವೆಂಬರ್ 13ರಂದು ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಯುವತಿ ಪತ್ರಕರ್ತೆಯಾಗಿದ್ದು, ಮೆಟ್ರೋದಲ್ಲಿ ಮೆಟ್ಟಿಲಿನಿಂದ ಇಳಿಯುತ್ತಿದ್ದಾಗ ಅಲ್ಲೇ ಕಾಯುತ್ತಿದ್ದ ವ್ಯಕ್ತಿಯೊಬ್ಬ ಆಕೆಯ ಮೇಲೆ ಲೈಂಗಿಕ ಹಲ್ಲೆ ನಡೆಸಲು ಯತ್ನಿಸಿದ್ದಾನೆ. ಧೈರ್ಯದಿಂದ ಯುವತಿ ಆತನನ್ನು ಹಿಡಿಯಲು ಯತ್ನಿಸಿದಾಗ ಆತ ಅಲ್ಲಿಂದ ಪರಾರಿಯಾಗಿದ್ದಾನೆ.

Journalist molested at Metro station in Delhi

ಮಹಿಳೆಯರಿಗೆ ದೆಹಲಿ ಎಷ್ಟೊಂದು ಅಸುರಕ್ಷಿತವಾಗಿದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಆ ಸಮಯದಲ್ಲಿ ಆ ಸ್ಥಳದಲ್ಲಿ ಯಾರೂ ಇರದಿರುವ ದುರ್ಲಾಭವನ್ನು ಪಡೆದು ಆತ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ.

"ಆತ ಅಚಾನಕ್ಕಾಗಿ ನನ್ನನ್ನು ಸ್ಪರ್ಶಿಸಿದ ಎಂದು ಮೊದಲು ಅಂದುಕೊಂಡೆ. ಆದರೆ, ಆತ ನನ್ನನ್ನು ಬಲವಂತವಾಗಿ ಮುಟ್ಟಲು ಬಂದ ಮತ್ತು ಹಿಡಿದುಕೊಂಡ. ಏನಾಗುತ್ತಿದೆಯೆಂದು ತಿಳಿಯಲು ಕೆಲ ಕ್ಷಣ ಬೇಕಾಯಿತು. ಅಲ್ಲಿ ಯಾವುದೇ ಭದ್ರತಾ ಸಿಬ್ಬಂದಿ ಇರಲಿಲ್ಲ. ಇಲ್ಲದಿದ್ದರೆ ಆತನನ್ನು ಖಂಡಿತ ಹಿಡಿಯುತ್ತಿದ್ದೆ" ಎಂದು 25 ವರ್ಷದ ಯುವತಿ ಹೇಳಿದ್ದಾಳೆ.

ಪತ್ರಕರ್ತೆ ಗೌರಿ ಲಂಕೇಶ್ ಮೇಲೆ ಗುಂಡು ಹಾರಿಸಿ ಹತ್ಯೆಪತ್ರಕರ್ತೆ ಗೌರಿ ಲಂಕೇಶ್ ಮೇಲೆ ಗುಂಡು ಹಾರಿಸಿ ಹತ್ಯೆ

ತನ್ನ ಮೇಲೆ ಲೈಂಗಿಕ ಹಲ್ಲೆ ನಡೆಸಿದ ವ್ಯಕ್ತಿಯನ್ನು ಯುವತಿ ಹೊಡೆದಿದ್ದಾರೆ. ಯುವತಿ ಆತನನ್ನು ಹಿಡಿಯಲು ಯತ್ನಿಸಿದಾಗ ಪತ್ರಕರ್ತೆಯ ಮುಖಕ್ಕೆ ಆತ ಬಲವಾಗಿ ಹೊಡೆದಿದ್ದಾನೆ. ನಂತರ ಅಲ್ಲಿಂದ ಪರಾರಿಯಾಗಿದ್ದಾನೆ.

ಪತ್ರಕರ್ತೆ ಮೇಲೆ ಅತ್ಯಾಚಾರ ನಾಲ್ವರು ತಪ್ಪಿತಸ್ಥರುಪತ್ರಕರ್ತೆ ಮೇಲೆ ಅತ್ಯಾಚಾರ ನಾಲ್ವರು ತಪ್ಪಿತಸ್ಥರು

ಅಚ್ಚರಿಯ ಸಂಗತಿಯೆಂದರೆ, ಘಟನೆ ನಡೆದ ಸ್ಥಳದಿಂದ ಕೇವಲ 100 ಮೀಟರ್ ಅಂತರದಲ್ಲಿ ಪೊಲೀಸ್ ಠಾಣೆಯಿದೆ ಮತ್ತು 2 ಕಿ.ಮೀ. ದೂರದಲ್ಲಿ ಪಾರ್ಲಿಮೆಂಟಿದೆ. ಪೊಲೀಸ್ ಸ್ಟೇಷನ್ ಹತ್ತಿರದಲ್ಲಿದ್ದರೂ ಅಲ್ಲಿ ಪೊಲೀಸರಾಗಲಿ, ಮೆಟ್ರೋದ ಭದ್ರತಾ ಸಿಬ್ಬಂದಿಯಾಗಲಿ ಇರಲಿಲ್ಲ.

ಪತ್ರಕರ್ತೆ ಮೇಲೆ ವೀರ್ಯ ಚೆಲ್ಲಿದ ಕಿಡಿಗೇಡಿಗಳುಪತ್ರಕರ್ತೆ ಮೇಲೆ ವೀರ್ಯ ಚೆಲ್ಲಿದ ಕಿಡಿಗೇಡಿಗಳು

ತಾನು ಮೆಟ್ರೋ ಬೀಟ್ ಪತ್ರಕರ್ತೆಯಾಗಿ ಹಲವಾರು ಲೇಖನಗಳನ್ನು ಬರೆದಿದ್ದರೂ, ಈ ಘಟನೆಯ ನಂತರ ಒಬ್ಬೇಒಬ್ಬ ಮೆಟ್ರೋ ಅಧಿಕಾರಿ ಕೂಡ ತನ್ನನ್ನು ಸಂಪರ್ಕಿಸಿಲ್ಲ ಎಂದು ಯುವತಿ ನೋವಿನಿಂದ ನುಡಿಯುತ್ತಾರೆ.

English summary
25-year-old journalist molested at ITO Metro station in Delhi on 13 November; accused has been arrested. The journalist said, he accidentally touched her. But, later he groped me. There were no security people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X