ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಎನ್ ಯು ಹಿಂಸಾಚಾರ: ದೀಪಿಕಾ ಪಡುಕೋಣೆ ಬೆನ್ನಿಗೆ ನಿಂತ ರಘುರಾಮ್ ರಾಜನ್

|
Google Oneindia Kannada News

ನವದೆಹಲಿ, ಜನವರಿ.10: ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರದ ವಿರುದ್ಧ ಹೋರಾಟಕ್ಕಿಳಿದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರಿಗೆ ಒಂದು ಕಡೆಯಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇನ್ನೊಂದು ಕಡೆಯಿಂದ ಬೆಂಬಲದ ಕೂಗು ಕೇಳಿ ಬರುತ್ತಿದೆ.

ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲೇ ಹಿಂಸಾಚಾರ ನಡೆಸುವಂತಾ ಸ್ಥಿತಿ ನಿರ್ಮಾಣವಾಗಿದೆ. ಇದರ ವಿರುದ್ಧ ಧ್ವನಿ ಎತ್ತಿರುವ ಬಾಲಿವುಡ್ ನಟಿಗೆ ಭಾರತೀಯ ರಿಸರ್ವ್ ಬ್ಯಾಂಕ್ ನ ಮಾಜಿ ಗವರ್ನರ್ ರಘುರಾಮ್ ರಾಜನ್ ಬೆಂಬಲ ಸೂಚಿಸಿದ್ದಾರೆ.

JNU ಪ್ರತಿಭಟನೆಗೆ ಬೆಂಬಲ: ಕಾರಣ ಬಿಚ್ಚಿಟ್ಟ ದೀಪಿಕಾ ಪಡುಕೋಣೆJNU ಪ್ರತಿಭಟನೆಗೆ ಬೆಂಬಲ: ಕಾರಣ ಬಿಚ್ಚಿಟ್ಟ ದೀಪಿಕಾ ಪಡುಕೋಣೆ

ಲಿಂಕೆದಿನ್ ಎಂಬ ಖಾಸಗಿ ಬ್ಲಾಗ್ ವೊಂದಕ್ಕೆ ರಘುರಾಮ್ ರಾಜನ್ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಹಾಡುಹಡಗಲಿನಲ್ಲೇ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಕ್ಕೆ ಮುಸುಕುಧಾರಿಗಳು ನುಗ್ಗಿ ಹಿಂಸಾಚಾರ ನಡೆಸುತ್ತಾರೆ. ವಿವಿಯ ವಸ್ತುಗಳನ್ನು ಒಡೆದು ಹಾಕಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುತ್ತಾರೆ ಎಂದರೆ ಇದಕ್ಕಿಂತ ಆತಂಕಕಾರಿ ಬೆಳವಣಿಗೆ ಮತ್ತೊಂದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ದೀಪಿಕಾ ಪಡುಕೋಣೆ ಹೆಸರು ಉಲ್ಲೇಖಿಸದೇ ಬೆಂಬಲ

ದೀಪಿಕಾ ಪಡುಕೋಣೆ ಹೆಸರು ಉಲ್ಲೇಖಿಸದೇ ಬೆಂಬಲ

ವಿಶ್ವವಿದ್ಯಾಲಯಕ್ಕೆ ನುಗ್ಗಿ ಹಲ್ಲೆ ನಡೆಸಿದವರ ಕೈಗೆ ಸಿಕ್ಕು ಸಾಕಷ್ಟು ಮಂದಿ ಗಾಯಗೊಂಡಿದ್ದರು. ಇಂಥ ಗಾಯಾಳುಗಳ ಆರೋಗ್ಯ ವಿಚಾರಿಸಲು ತೆರಳುವುದೇ ತಪ್ಪು ಎನ್ನುವಂತೆ ಬಿಂಬಿಸಲಾಗುತ್ತಿದೆ. ಅವರು ನಟಿಸಿರುವ ಚಪ್ಪಾಕ್ ಸಿನಿಮಾ ಇದೀಗ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಮಾನವೀಯ ದೃಷ್ಟಿಯಿಂದ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಅವರಿಗೆ ಕಷ್ಟ ಬಂದಿದ್ದು, ಎಲ್ಲರೂ ಇದೀಗ ಅವರ ಬೆಂಬಲಕ್ಕೆ ನಿಲ್ಲಬೇಕಾಗಿದೆ ಎಂದು ರಘುನಾಥ್ ರಾಜನ್ ತಿಳಿಸಿದ್ದಾರೆ.

ಜೆಎನ್ ಯು ಹಿಂಸಾಚಾರ: ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಅಸಲಿ ಸತ್ಯಜೆಎನ್ ಯು ಹಿಂಸಾಚಾರ: ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಅಸಲಿ ಸತ್ಯ

ರಾಜಕಾರಣಕ್ಕಾಗಿ ನಡೆಯುತ್ತಿರುವ ಹೋರಾಟವಲ್ಲ

ರಾಜಕಾರಣಕ್ಕಾಗಿ ನಡೆಯುತ್ತಿರುವ ಹೋರಾಟವಲ್ಲ

ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಅವಲೋಕಿಸಿದಾಗ ಹಿಂದೂ ಮುಸ್ಲಿಂ ಸೇರಿದಂತೆ ಎಲ್ಲ ಧರ್ಮಗಳ ಜನರು ಒಗ್ಗಟ್ಟಾಗಿದ್ದಾರೆ. ವೈವಿಧ್ಯಮಯ ನಂಬಿಕೆಗಳು ಇದೀಗ ಒಟ್ಟಾಗಿ ಸಾಗುತ್ತಿವೆ. ಕೇಂದ್ರ ಸರ್ಕಾರ ಹಾಗೂ ರಾಜಕಾರಣಿಗಳ ವಿರುದ್ಧ ನಡೆಯುತ್ತಿರುವ ಹೋರಾಟವೇ ಇದಕ್ಕೆ ಸಾಕ್ಷಿಯಾಗಿದೆ. ಜೆಎನ್ ಯು ಹೋರಾಟದಲ್ಲಿ ಪಾಲ್ಗೊಂಡಿದ್ದನ್ನು ಕಂಡಾಗ ಭಾರತದಲ್ಲಿ ಸಂವಿಧಾನವು ಮತ್ತಷ್ಟು ಪ್ರಕಾಶಿಸುತ್ತಿದೆ ಎಂದೆನಿಸುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ದೀಪಿಕಾ ವಿರುದ್ಧ ರಾಘವೇಂದ್ರ ಔರಾದ್ಕರ್ ಟ್ವೀಟ್‌ ಪ್ರಕರಣಕ್ಕೆ ಟ್ವಿಸ್ಟ್ದೀಪಿಕಾ ವಿರುದ್ಧ ರಾಘವೇಂದ್ರ ಔರಾದ್ಕರ್ ಟ್ವೀಟ್‌ ಪ್ರಕರಣಕ್ಕೆ ಟ್ವಿಸ್ಟ್

ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಜನ್

ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಜನ್

ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತಿದವರ ವಿರುದ್ಧವೂ ಸೇಡು ತೀರಿಸಿಕೊಳ್ಳುವ ಕೆಲಸವಾಗುತ್ತಿದೆ ಎಂದು ರಘುನಾಥ್ ರಾಜನ್ ಆರೋಪಿಸಿದ್ದಾರೆ. ಚುನಾವಣಾಧಿಕಾರಿ ಅಶೋಕ್ ಲವಾಸಾ ಹೆಸರನ್ನು ಉಲ್ಲೇಖಿಸದೇ ಕರ್ತವ್ಯನಿಷ್ಠೆ ತೋರಿದ ಅಧಿಕಾರಿಗೆ ಭೇಷ್ ಎಂದಿದ್ದಾರೆ. ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜಾರಿಯಾದ ನೀತಿ ಸಂಹಿತೆ ಸಂಬಂಧ ಚುನಾವಣಾಧಿಕಾರಿ ಅಶೋಕ್ ಲವಾಸಾ ಅಪಸ್ವರ ಎತ್ತಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೆ ಕ್ಲೀನ್ ಚಿಟ್ ನೀಡುವಲ್ಲಿ ನಿರಾಕರಿಸಿದ್ದರು. ಇದಕ್ಕೆ ಕೇಂದ್ರ ಸರ್ಕಾರ ಈಗ ಸೇಡು ತೀರಿಸಿಕೊಳ್ಳುವಂತೆ ವರ್ತಿಸುತ್ತಿದೆ ಎಂದು ದೂರಿದ್ದಾರೆ.

ಅಂದು ಮಾಡಿದ ತಪ್ಪಿಗೆ ಇಂದು ಶಿಕ್ಷೆ ಕೊಡುವುದೇ?

ಅಂದು ಮಾಡಿದ ತಪ್ಪಿಗೆ ಇಂದು ಶಿಕ್ಷೆ ಕೊಡುವುದೇ?

ಕೇಂದ್ರದಲ್ಲಿ ಎರಡನೇ ಬಾರಿಗೆ ಸರ್ಕಾರ ರಚನೆ ಆಗುತ್ತಿದ್ದಂತೆ ಚುನಾವಣಾಧಿಕಾರಿ ಅಶೋಕ್ ಲವಾಸಾ ವಿರುದ್ಧ ಸೇಡು ತೀರಿಸಿಕೊಳ್ಳುವಂತೆ ವರ್ತಿಸಿದೆ. ಲವಾಸಾ ಅವರ ಸಂಬಂಧಿಕರು ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಿ ತನಿಖೆ ನಡೆಸಲಾಗುತ್ತಿದೆ. ಲವಾಸಾ ಅವರಿಗೆ ಸೇರಿದ ಐವರು ಸಂಬಂಧಿಕರ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ರಾಜನ್ ಆರೋಪಿಸಿದ್ದಾರೆ.

ಜೆಎನ್‌ಯು ಭೇಟಿ ನಂತರ ಸ್ಕಿಲ್ ಇಂಡಿಯಾ ವಿಡಿಯೋದಿಂದ ದೀಪಿಕಾ ಔಟ್ಜೆಎನ್‌ಯು ಭೇಟಿ ನಂತರ ಸ್ಕಿಲ್ ಇಂಡಿಯಾ ವಿಡಿಯೋದಿಂದ ದೀಪಿಕಾ ಔಟ್

English summary
JNU Violence: Raghunath Rajan Support For Actor Deepika Padukone Stand. And Also Batting For Election Commissioner Ashok Lavasa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X