ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಎನ್‌ಯು ಗಲಭೆ: ಮುಸುಕುಧಾರಿ ಯುವತಿ ಗರುತು ಪತ್ತೆ

|
Google Oneindia Kannada News

ನವದೆಹಲಿ, ಜನವರಿ 14: ಜೆಎನ್‌ಯು ವಿಶ್ವವಿದ್ಯಾನಿಲಯಕ್ಕೆ ಮುಸುಕುಧಾರಿ ಗುಂಪು ದಾಳಿ ಮಾಡಿ ಮಾರಕಾಸ್ತ್ರಗಳ ಮೂಲಕ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ವಿಶೇಷ ತಂಡ ತನಿಖೆ ನಡೆಸುತ್ತಿದ್ದು ಕೆಲವರನ್ನು ಗುರುತಿಸಲಾಗಿದೆ.

ಜೆಎನ್‌ಯು ಗೆ ದಾಳಿ ಮಾಡಿ ಹಲ್ಲೆ ನಡೆಸಿದ ಮೂವರು ಮುಸುಕುಧಾರಿಗಳಲ್ಲಿ ಒಬ್ಬರು ಮಹಿಳೆ ಆಗಿದ್ದು, ಆಕೆಯ ಗುರುತು ಪತ್ತೆ ಆಗಿದೆ. ಆಕೆ ದೆಹಲಿ ವಿವಿ ವಿದ್ಯಾರ್ಥಿನಿ ಎಂದು ಪೊಲೀಸರು ತಿಳಿಸಿದ್ದಾರೆ.

ಜೆಎನ್ ಯು ಕುಲಪತಿ ವಜಾಗೊಳಿಸುವಂತೆ ಆಗ್ರಹಿಸಿ ಪ್ರಾಧ್ಯಾಪಕರ ರಾಜೀನಾಮೆಜೆಎನ್ ಯು ಕುಲಪತಿ ವಜಾಗೊಳಿಸುವಂತೆ ಆಗ್ರಹಿಸಿ ಪ್ರಾಧ್ಯಾಪಕರ ರಾಜೀನಾಮೆ

ದೆಹಲಿ ವಿವಿಯ ಆ ವಿದ್ಯಾರ್ಥಿನಿಗೆ ನೊಟೀಸ್ ನೀಡುವುದಾಗಿ ಪೊಲೀಸರು ಹೇಳಿದ್ದಾರೆ. ಆದರೆ ಜೆಎನ್‌ಯು ಹಿಂಸಾಚಾರ ಘಟನೆ ಬಗ್ಗೆ ಯಾರನ್ನೂ ಈವರೆಗೆ ಬಂಧಿಸಲಾಗಿಲ್ಲ.

JNU Violence: Police Identified Girl In Mask

ಹತ್ತಾರು ಮಂದಿ ಮುಸುಕುಧಾರಿಗಳು ಜೆಎನ್‌ಯು ಪ್ರವೇಶಿಸಿ ವಿದ್ಯಾರ್ಥಿಗಳು, ಶಿಕ್ಷಕರ ಮೇಲೆ ಹಲ್ಲೆ ನಡೆಸಿದ್ದರು. ಜೆಎನ್‌ಯು ನ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಮೇಲೂ ತೀವ್ರವಾದ ಹಲ್ಲೆ ಆಗಿತ್ತು.

ಹಲ್ಲೆ ಮಾಡಿದ ಮುಸುಕುಧಾರಿ ಗುಂಪಿನಲ್ಲಿ ಮೂವರ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದರಲ್ಲಿ ಒಬ್ಬ ಮಹಿಳೆ ಸಹ ಇದ್ದು, ಆಕೆಯ ಗುರುತನ್ನು ಈಗ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಜೆಎನ್ ಯು ಹಿಂಸಾಚಾರ: ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಅಸಲಿ ಸತ್ಯಜೆಎನ್ ಯು ಹಿಂಸಾಚಾರ: ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಅಸಲಿ ಸತ್ಯ

ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಹಾಗೂ ಬೆಂಬಲಿಸಿದ ಇನ್ನೂ ಹಲವು ಮಂದಿಯನ್ನು ಪೊಲೀಸರು ಗುರುತಿಸಿದ್ದು, ನೊಟೀಸ್ ನೀಡಲಾಗುತ್ತಿದೆ.

ಜೆಎನ್‌ಯು ಹಿಂಸಾಚಾರಕ್ಕೆ ಸಂಬಂಧಿಸಿದಂತೆಯೇ ಜೆಎನ್‌ಯು ಎಸ್‌ಯು ಅಧ್ಯಕ್ಷೆ ಆಯಿಷಿ ಘೋಷ್ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಅವರ ವಿಚಾರಣೆಯನ್ನೂ ನಡೆಸಲಾಗಿದೆ.

English summary
Delhi Police identified and sent notice to girl who involved in JNU violence. She is from Delhi university.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X