ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಎನ್‌ಯು ಗಲಭೆ; ಅರವಿಂದ್ ಕೇಜ್ರಿವಾಲ್ ಹೇಳುವುದೇನು?

|
Google Oneindia Kannada News

ನವದೆಹಲಿ, ಜನವರಿ 06 : ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಹಲ್ಲೆ ಪ್ರಕರಣದ ಬಗ್ಗೆ ಚರ್ಚೆಗಳು ಆರಂಭವಾಗಿದೆ. ವಿವಿ ಆವರಣಕ್ಕೆ ಬಿಗಿ ಪೊಲೀಸ್ ಬಂದೋಸ್ತ್ ಒದಗಿಸಲಾಗಿದ್ದು, ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗಿದೆ.

' ಜೆಎನ್ನಲ್ಲಿ ಹಿಂಸಾಚಾರ ನಡೆದಿದೆ ಎಂಬುದನ್ನು ತಿಳಿದು ಅಘಾತವಾಯಿತು. ಪೊಲೀಸರು ಗಲಭೆಯನ್ನು ತಡೆದು ಶಾಂತಿಯನ್ನು ಪುನರ್ ಸ್ಥಾಪಿಸಬೇಕು" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಜೆಎನ್‌ಯು ಆವರಣದಲ್ಲಿ ಗಲಭೆ; ವರದಿ ಕೇಳಿದ ಅಮಿತ್ ಶಾಜೆಎನ್‌ಯು ಆವರಣದಲ್ಲಿ ಗಲಭೆ; ವರದಿ ಕೇಳಿದ ಅಮಿತ್ ಶಾ

"ಕ್ಯಾಂಪಸ್‌ನೊಳಗೆ ವಿದ್ಯಾರ್ಥಿಗಳು ಸುರಕ್ಷಿತ ಅಲ್ಲ ಎಂದಾದರೆ ದೇಶ ಹೇಗೆ ಅಭಿವೃದ್ಧಿಯಾಗುತ್ತದೆ?" ಎಂದು ಅವರು ಟ್ವೀಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ. ಗಲಭೆ ನಡೆದ ಕೆಲವೇ ಹೊತ್ತಿನಲ್ಲಿ ದೆಹಲಿ ಸರ್ಕಾರ ವಿವಿ ಆವರಣಕ್ಕೆ 7 ಅಂಬ್ಯುಲೆನ್ಸ್‌ಗಳನ್ನು ಕಳಿಸಿತ್ತು.

ವಾರಾಂತ್ಯದಲ್ಲಿ ಭುಗಿಲೆದ್ದ JNU, ಕ್ಯಾಂಪಸಿನಲ್ಲಿ ನಡೆದಿದ್ದೇನು?ವಾರಾಂತ್ಯದಲ್ಲಿ ಭುಗಿಲೆದ್ದ JNU, ಕ್ಯಾಂಪಸಿನಲ್ಲಿ ನಡೆದಿದ್ದೇನು?

JNU Violence Arvind Kejriwal Reaction

ಭಾನುವಾರ ರಾತ್ರಿ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಕೈಯಲ್ಲಿ ದೊಣ್ಣೆ, ರಾಡ್ ಹಿಡಿದು ವಿವಿ ಆವರಣಕ್ಕೆ ನುಗ್ಗಿದ್ದ ಗುಂಪು ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು. ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿಗಳು ಏಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜೆಎನ್‌ಯುನತ್ತ ಎಲ್ಲರ ಚಿತ್ತಜೆಎನ್‌ಯುನತ್ತ ಎಲ್ಲರ ಚಿತ್ತ

ಅಖಿಲ ಭಾರತ ವಿದ್ಯಾರ್ಥಿ (ಎಬಿವಿಪಿ) ಕಾರ್ಯಕರ್ತರು ಈ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ದಾಳಿಯನ್ನು ತೀವ್ರವಾಗಿ ಖಂಡಿಸಲಾಗಿದೆ. ಹಲ್ಲೆ ಬಗ್ಗೆ ಆರೋಪ ಪ್ರತ್ಯಾರೋಪ ನಡೆಯುತ್ತಿದೆ.

ಅರವಿಂದ್ ಕೇಜ್ರಿವಾಲ್ ಟ್ವೀಟ್

ಲೆಫ್ಟಿನೆಂಟ್ ಗೌರ್ನರ್ ಜೊತೆ ಮಾತನಾಡಿದ್ದೇನೆ. ಪರಿಸ್ಥಿತಿಯನ್ನು ಸುಧಾರಿಸಲು ಪೊಲೀಸರಿಗೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದ್ದೇನೆ. ಪರಿಸ್ಥಿತಿಯನ್ನು ಗಮನಿಸುತ್ತಿದ್ದು, ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

English summary
Delhi Chief Minister Arvind Kejriwal said that he is shocked after violence broke out at New Delhi Jawaharlal Nehru University (JNU) on Sunday, January 5, 2020 night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X