ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಂಪಸ್ ಒಳಗೆ ಸ್ಟೂಡೆಂಟ್ಸ್, ಹೊರಗೆ ಪೊಲೀಸ್: ಇದು ಖಾಕಿ ದಿಗ್ಬಂಧನ

|
Google Oneindia Kannada News

ನವದೆಹಲಿ, ನವೆಂಬರ್.13: ನವದೆಹಲಿ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ ಒಳ್ಳೆಯ ವಿಚಾರಕ್ಕಿಂತ ಕೆಟ್ಟ ವಿಚಾರ ಹಾಗೂ ಪ್ರತಿಭಟನೆಗಳಿಗೇ ಹೆಚ್ಚು ಸುದ್ದಿ ಆಗುತ್ತದೆ. ಇವತ್ತೂ ಕೂಡಾ ಅಂಥದ್ದೇ ಒಂದು ಹೋರಾಟಕ್ಕೆ ರಾಷ್ಟ್ರ ರಾಜಧಾನಿ ದೆಹಲಿ ಸಾಕ್ಷಿಯಾಗಿದೆ.

ಒಂದೆಡೆ ಕೇಂದ್ರ ಸರ್ಕಾರ ಸಂಸತ್ ಚಳಿಗಾಲ ಅಧಿವೇಶನ ಶುರುವಾಗಿದೆ. ಇನ್ನೊಂದೆಡೆ ಜೆಎನ್ ಯು ವಿದ್ಯಾರ್ಥಿಗಳು ನ್ಯಾಯಕ್ಕಾಗಿ ನಡೆಸುತ್ತಿರುವ ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಇಂದು ಸಂಸತ್ ಗೆ ಹೊರಟು ನಿಂತ ವಿದ್ಯಾರ್ಥಿಗಳನ್ನು ಪೊಲೀಸರು ತಡೆದಿದ್ದಾರೆ.

ವಿದ್ಯಾರ್ಥಿಗಳ ಹೋರಾಟಕ್ಕೆ ಕೇಂದ್ರವೇ ತಲೆ ಬಾಗಿದೆ: ಇದು JNU ಕಥೆವಿದ್ಯಾರ್ಥಿಗಳ ಹೋರಾಟಕ್ಕೆ ಕೇಂದ್ರವೇ ತಲೆ ಬಾಗಿದೆ: ಇದು JNU ಕಥೆ

ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವ ವಿದ್ಯಾಲಯ ಕ್ಯಾಂಪಸ್ ಬಳಿ ವಿದ್ಯಾರ್ಥಿಗಳ ತೀವ್ರ ಸ್ವರೂಪ ಪಡೆದುಕೊಂಡಿದೆ. ಕ್ಯಾಂಪಸ್ ಸುತ್ತ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದು, ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ಸ್ಟೂಡೆಂಟ್ ಮಾರ್ಚ್ ಗೆ ಖಾಕಿ ಬ್ರೇಕ್

ಸ್ಟೂಡೆಂಟ್ ಮಾರ್ಚ್ ಗೆ ಖಾಕಿ ಬ್ರೇಕ್

ಚಳಿಗಾಲ ಅಧಿವೇಶನದ ಆರಂಭಗೊಂಡ ಮೊದಲ ದಿನವೇ ಸಂಸತ್ ಸದಸ್ಯರಿಗೆ ಹೋರಾಟದ ಬಿಸಿ ಮುಟ್ಟಿಸಲು ವಿದ್ಯಾರ್ಥಿಗಳು ಮುಂದಾಗಿದ್ದರು. ದುಬಾರಿ ಶುಲ್ಕ ವಿರುದ್ಧ ಘೋಷಣೆ ಕೂಗುತ್ತಾ ಪಾರ್ಲಿಮೆಂಟ್ ನತ್ತ ಪ್ರತಿಭಟನಾ ಮೆರವಣಿಗೆ ನಡೆಸಲಾಗುತ್ತಿತ್ತು. ಈ ವೇಳೆ ಜೆಎನ್ ಯು ವಿದ್ಯಾರ್ಥಿಗಳನ್ನು ಸಂಸತ್ ಪಶ್ಚಿಮ ಗೇಟ್ ನಿಂದ ಒಂದು ಕಿಲೋ ಮೀಟರ್ ದೂರದಲ್ಲೇ ಪೊಲೀಸರು ತಡೆದಿದ್ದಾರೆ.

ಕ್ಯಾಂಪಸ್ ಒಳಗೆ ಸ್ಟೂಡೆಂಟ್ಸ್, ಹೊರಗೆ ಪೊಲೀಸ್!

ಕ್ಯಾಂಪಸ್ ಒಳಗೆ ಸ್ಟೂಡೆಂಟ್ಸ್, ಹೊರಗೆ ಪೊಲೀಸ್!

ಇದಕ್ಕೂ ಮೊದಲು ಸಂಸತ್ ನತ್ತ ಹೊರಟ ವಿದ್ಯಾರ್ಥಿಗಳ ಪ್ರತಿಭಟನಾ ಮೆರವಣಿಗೆಗೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು. ಇನ್ನೊಂದೆಡೆ ಜೆಎನ್ ಯು ಕ್ಯಾಂಪಸ್ ಗೆ ಖಾಕಿ ದಿಗ್ಬಂಧನ ಹಾಕಿತ್ತು. ಕ್ಯಾಂಪಸ್ ಹೊರಗೆ ಬರೋಬ್ಬರಿ 1,200ಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.

ಸಮಸ್ಯೆ ಇತ್ಯರ್ಥಕ್ಕೆ ಮೂವರು ಸದಸ್ಯರ ಸಮಿತಿ

ಸಮಸ್ಯೆ ಇತ್ಯರ್ಥಕ್ಕೆ ಮೂವರು ಸದಸ್ಯರ ಸಮಿತಿ

ಜೆಎನ್ ಯು ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿ ನಡುವೆ ಸಮಸ್ಯೆ ಇತ್ಯರ್ಥಕ್ಕೆ ಕೇಂದ್ರ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಅದಕ್ಕಾಗಿ ನವೆಂಬರ್.18ರಂದು ಅಂದರೆ ಇಂದು ಬೆಳಗ್ಗೆಯಷ್ಟೇ ಮೂವರು ಸದಸ್ಯರ ಸಮಿತಿ ರಚಿಸುವಂತೆ ಕೇಂದ್ರ ಶಿಕ್ಷಣ ಸಚಿವಾಲಯ ಸೂಚನೆ ನೀಡಿದೆ.

ಟ್ವೀಟ್ ನಲ್ಲಿ ಸಿಹಿಸುದ್ದಿ ನೀಡಿದ್ದ ಆಡಳಿತ ಮಂಡಳಿ

ಟ್ವೀಟ್ ನಲ್ಲಿ ಸಿಹಿಸುದ್ದಿ ನೀಡಿದ್ದ ಆಡಳಿತ ಮಂಡಳಿ

ಜೆಎನ್ ಯು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಕಳೆದ ವಾರವಷ್ಟೇ ಕಾಲೇಜು ಆಡಳಿತ ಮಂಡಳಿ ಸಿಹಿಸುದ್ದಿ ಕೊಟ್ಟಿತ್ತು. ಕಾರ್ಯನಿರ್ವಾಹಕ ಸಮಿತಿಯ ಶೈಕ್ಷಣಿಕ ಕಾರ್ಯದರ್ಶಿ ಆರ್.ಸುಬ್ರಮಣ್ಯಂ ಈ ಕುರಿತು ಟ್ವೀಟ್ ಮಾಡಿದ್ದರು. ಈ ಮೊದಲು ಏರಿಕೆ ಮಾಡಿದ್ದ ವಿದ್ಯಾರ್ಥಿಗಳ ಹಾಸ್ಟೆಲ್ ಶುಲ್ಕ ಕಡಿತಗೊಳಿಸಲಾಗಿದೆ. ಜೊತೆಗೆ ಆರ್ಥಿಕವಾಗಿ ಹಿಂದುಳಿದ ಕಾಲೇಜಿನ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತದೆ ಎಂದು ಅವರು ಟ್ವೀಟ್ ಮಾಡಿದ್ದರು.

ಹಾಸ್ಟೆಲ್ ಫೀಸ್ ಕೇಳಿದ್ರೆ ಹೌಹಾರುತ್ತೀರಾ

ಹಾಸ್ಟೆಲ್ ಫೀಸ್ ಕೇಳಿದ್ರೆ ಹೌಹಾರುತ್ತೀರಾ

ಸಿಂಗಲ್ ಶೇರಿಂಗ್ ಹಾಸ್ಟೆಲ್ ರೂಮ್ ನ ಶುಲ್ಕವನ್ನು 20 ರೂಪಾಯಿಯಿಂದ 600 ರೂಪಾಯಿಗೆ ಏರಿಕೆ ಮಾಡಲಾಗಿತ್ತು. ಶೇರಿಂಗ್ ರೂಮ್ ಬಾಡಿಗೆಯ ಶುಲ್ಕವನ್ನು 10 ರೂಪಾಯಿಯಿಂದ 300 ರೂಪಾಯಿಗೆ ಹೆಚ್ಚಿಸಲಾಗಿತ್ತು. ಇಷ್ಟೇ ಅಲ್ಲದೇ ಮೆಸ್ ಶುಲ್ಕವನ್ನು 5,500 ರೂಪಾಯಿಯಿಂದ 12 ಸಾವಿರ ರೂಪಾಯಿಗೆ ಹೆಚ್ಚಿಸಲಾಗಿತ್ತು. ಬಿಪಿಎಲ್ ಕಾರ್ಡ್ ಹೊಂದಿರುವ ವಿದ್ಯಾರ್ಥಿಗಳ ಹಾಸ್ಟೆಲ್ ಶುಲ್ಕ ಇದಕ್ಕಿಂತ ಕೊಂಚ ಕಡಿಮೆಯಾಗಿತ್ತು. ಸಿಂಗಲ್ ರೂಮ್ ಬಾಡಿಗೆ 300 ರೂಪಾಯಿ ಆಗಿದ್ರೆ, ಶೇರಿಂಗ್ ರೂಮ್ ಬಾಡಿಗೆ 150 ರೂಪಾಯಿಗೆ ಏರಿಕೆ ಮಾಡಲಾಗಿತ್ತು.

English summary
JNU Hostel Fees Hike: Student March To Parliament. Police Stopped The Students kilometer Away From Parliament West Gate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X