ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ರಸ್ತೆಗಿಳಿದ ಜೆಎನ್‌ಯು ವಿದ್ಯಾರ್ಥಿಗಳು : ಕಾರಣವೇನು?

|
Google Oneindia Kannada News

ನವದೆಹಲಿ, ನವೆಂಬರ್ 11: ಕಾಲೇಜು ಶುಲ್ಕ ಹೆಚ್ಚಳ ವಿರೋಧಿಸಿ ದೆಹಲಿಯ ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ರಸ್ತೆಗಿಳಿಸಿದ್ದಾರೆ.

ಜೆಎನ್‌ಯು ಇತ್ತೀಚೆಗಷ್ಟೇ ಶುಲ್ಕವನ್ನು ಏರಿಕೆ ಮಾಡಿತ್ತು. ಅದನ್ನು ವಿರೋಧಿಸಿ ಜೆಎನ್‌ಯು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ಆರಂಭಿಸಿವೆ.

ಜೆಎನ್‌ಯು ಒಂದಲ್ಲಾ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತದೆ.ಇದೀಗ ವಿದ್ಯಾರ್ಥಿಗಳು ಮತ್ತೆ ಪ್ರತಿಭಟನೆಗಿಳಿದಿದ್ದಾರೆ.

JNU Students Protest Over Fee Hike

ಸೋಮವಾರ ಬೆಳಗ್ಗೆಯಿಂದಲೇ ತರಗತಿಗಳನ್ನು ಬಂದ್ ಮಾಡಿ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.

ಕಳೆದ ಒಂದು ವಾರದಿಂದಲೇ ಪ್ರತಿಭಟನೆ ಆರಂಭಿಸಲಾಗಿದೆ. ವಿಶ್ವವಿದ್ಯಾಲಯದಲ್ಲಿ ಓದುತ್ತಿರುವವರಲ್ಲಿ ಶೇ.40ರಷ್ಟು ವಿದ್ಯಾರ್ಥಿಗಳು ಬಡ ಕುಟುಂಬದಿಂದ ಬಂದವರು, ಅಷ್ಟೊಂದು ವೆಚ್ಚವನ್ನು ಭರಿಸುವ ಶಕ್ತಿ ಅವರಿಗಿಲ್ಲ ಎನ್ನುವುದು ವಿದ್ಯಾರ್ಥಿಗಳ ವಾದವಾಗಿದೆ.

ಪೊಲೀಸರು ಪ್ರತಿಭಟನೆಯನ್ನು ತಡೆಯಲು ಪ್ರಯತ್ನ ನಡೆಸಿದಾಗ ಪೊಲೀಸರು ಹಾಗೂ ವಿದ್ಯಾರ್ಥಿಗಳ ನಡುವೆ ಹೊಡೆದಾಟ ನಡೆದಿದೆ. ನೂರಾರು ಮಂದಿ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ತೊಂದರೆಯಾಗಲಿದೆ.

ಸಾಕಷ್ಟು ವಿದ್ಯಾರ್ಥಿಗಳು ಶುಲ್ಕ ಏರಿಕೆ ಕುರಿತ ಬ್ಯಾನರ್‌ಗಳನ್ನು ಕೈಯಲ್ಲಿ ಹಿಡಿದಿದ್ದಾರೆ. ಕಳೆದ ಗುರುವಾರವೇ ಪ್ರತಿಭಟನೆಯನ್ನು ಹಿಂಪಡೆಯುವಂತೆ ಜೆಎನ್‌ಯು ಆಡಳಿತ ಮಂಡಳಿ ತಿಳಿಸಿತ್ತು.

ಕೇವಲ ಶುಲ್ಕ ಹೆಚ್ಚಳ ಮಾತ್ರವಲ್ಲದೆ ಡ್ರೆಡ್ ಕೋಡ್ ವಿರುದ್ಧವೂ ಧ್ವನಿ ಎತ್ತಿದ್ದಾರೆ. ಶುಲ್ಕ ಏರಿಕೆಯಿಂದ ಆ ತಲೆಬಿಸಿಯಿಂದ ಸಾಕಷ್ಟು ವಿದ್ಯಾರ್ಥಿಗಳಿಗೆ ತಮ್ಮ ಓದಿನ ಮೇಲೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಸಾಕಷ್ಟು ವಿದ್ಯಾರ್ಥಿಗಳು ಶುಲ್ಕ ಏರಿಕೆ ಕುರಿತ ಬ್ಯಾನರ್‌ಗಳನ್ನು ಕೈಯಲ್ಲಿ ಹಿಡಿದಿದ್ದಾರೆ. ಕಳೆದ ಗುರುವಾರವೇ ಪ್ರತಿಭಟನೆಯನ್ನು ಹಿಂಪಡೆಯುವಂತೆ ಜೆಎನ್‌ಯು ಆಡಳಿತ ಮಂಡಳಿ ತಿಳಿಸಿತ್ತು. ಕೇವಲ ಶುಲ್ಕ ಹೆಚ್ಚಳ ಮಾತ್ರವಲ್ಲದೆ ಡ್ರೆಡ್ ಕೋಡ್ ವಿರುದ್ಧವೂ ಧ್ವನಿ ಎತ್ತಿದ್ದಾರೆ. ಶುಲ್ಕ ಏರಿಕೆಯಿಂದ ಆ ತಲೆಬಿಸಿಯಿಂದ ಸಾಕಷ್ಟು ವಿದ್ಯಾರ್ಥಿಗಳಿಗೆ ತಮ್ಮ ಓದಿನ ಮೇಲೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

English summary
Jawaharlal Nehru Students' Union organises protest over different issues including fee hike, outside university campus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X