ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಮತ್ತೊಮ್ಮೆ ಜೆಎನ್ ಯು ಸದ್ದು: ಇದು ಒಳ್ಳೆಯದಕ್ಕಲ್ಲ!

|
Google Oneindia Kannada News

ದೆಹಲಿ, ನವೆಂಬರ್.09: ದೆಹಲಿಯಲ್ಲಿ ಜವಾಹರ್ ಲಾಲ್ ನಹೆರೂ ವಿಶ್ವವಿದ್ಯಾಲಯ ಹೋರಾಟ, ಪ್ರತಿಭಟನೆಗಳಿಂದಲೇ ಹೆಚ್ಚು ಸುದ್ದಿ ಮಾಡುತ್ತಿದೆ. ಕಳೆದ ಒಂದೂವರೆ ತಿಂಗಳಿನಿಂದಲೂ ವಿವಿ ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ಮಾಡುತ್ತಲೇ ಇದ್ದಾರೆ.

ಡಿಸೆಂಬರ್.09ರ ಸೋಮವಾರ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಮನವಿ ಸಲ್ಲಿಸಲು ಹೊರಟ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಪ್ರಹಾರ ನಡೆಸಿದ್ದು, ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

JNU ಶುಲ್ಕ ಹೆಚ್ಚಳ: ಪ್ರತಿಭಟನೆ ಏಕೆ? ಕೇಂದ್ರ ವಿವಿಗಳ ಶುಲ್ಕ ಎಷ್ಟು?JNU ಶುಲ್ಕ ಹೆಚ್ಚಳ: ಪ್ರತಿಭಟನೆ ಏಕೆ? ಕೇಂದ್ರ ವಿವಿಗಳ ಶುಲ್ಕ ಎಷ್ಟು?

ಹಾಸ್ಟೆಲ್ ಶುಲ್ಕ ಏರಿಕೆ ಪ್ರಶ್ನಿಸಿ ರಾಷ್ಟ್ರಪತಿ ಭವನ ಚಲೋ ನಡೆಸಲು ಜೆಎನ್ ಯು ವಿದ್ಯಾರ್ಥಿಗಳು ಮುಂದಾಗಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಮೊದಲು ಪೊಲೀಸರು ಜೆಎನ್ ಯು ವಿವಿಯ ಎಲ್ಲ ಬಾಗಿಲುಗಳನ್ನು ಬಂದ್ ಮಾಡಲಾಯಿತು. ಮೊದಲು ವಿದ್ಯಾರ್ಥಿಗಳನ್ನು ಹೊರ ಬಿಡದಂತೆ ಖಾಕಿ ದಿಗ್ಬಂಧನ ಹಾಕಲಾಯಿತು.

ಜೆಎನ್ ಯು ವಿದ್ಯಾರ್ಥಿಗಳಿಗೆ ದಿಗ್ಬಂಧನ

ಜೆಎನ್ ಯು ವಿದ್ಯಾರ್ಥಿಗಳಿಗೆ ದಿಗ್ಬಂಧನ

ರಾಷ್ಟ್ರಪತಿ ಭವನ ಚಲೋ ನಡೆಸುತ್ತಾರೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಜನಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ನಾಲ್ಕು ದಿಕ್ಕುಗಳನ್ನು ಬಂದ್ ಮಾಡಲಾಯಿತು. ವಿದ್ಯಾರ್ಥಿಗಳನ್ನು ಹೊರ ಬಿಡದಂತೆ ಪೊಲೀಸರು ಕಣ್ಗಾವಲು ಇಟ್ಟಿದ್ದರು. ವಿಶ್ವವಿದ್ಯಾಲಯದ ನಾಲ್ಕು ಕಡೆಗಳಲ್ಲೂ ಪೊಲೀಸರು ಬ್ಯಾರಿಕೇಡ್ ಹಾಕಿದ್ದರು.

ಜೆಎನ್‌ಯು ವಿದ್ಯಾರ್ಥಿಗಳ ಮನೆಗೆ ಪೊಲೀಸರ ಭೇಟಿಜೆಎನ್‌ಯು ವಿದ್ಯಾರ್ಥಿಗಳ ಮನೆಗೆ ಪೊಲೀಸರ ಭೇಟಿ

ಎಕ್ಸಾಂ ಬರೆಯೋದಿಲ್ಲ ಏನ್ ಮಾಡುತ್ತೀರಾ?

ಎಕ್ಸಾಂ ಬರೆಯೋದಿಲ್ಲ ಏನ್ ಮಾಡುತ್ತೀರಾ?

ಜೆಎನ್ ಯು ಹಾಸ್ಟೆಲ್ ಶುಲ್ಕ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ತೀರ್ಮಾನಿಸಿದ್ದರು. ರಾಷ್ಟ್ರಪತಿ ಭವನ ಚಲೋ ನಡೆಸಲು ತೀರ್ಮಾನಿಸಿದ್ದರು. ಇದಕ್ಕೆ ಅನುಮತಿ ನೀಡದಿದ್ದರೆ ಡಿಸೆಂಬರ್.12ರಿಂದ ನಡೆಯುವ ವಿವಿ ಪರೀಕ್ಷೆಗಳನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದರು.

ಕೊನೆಗೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಖಾಕಿ ಅನುಮತಿ

ಕೊನೆಗೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಖಾಕಿ ಅನುಮತಿ

ದೆಹಲಿಯಲ್ಲಿ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆ ಒತ್ತಾಯದ ಮೇರೆಗೆ ಕೊನೆಗೂ ಪ್ರತಿಭಟನೆ ನಡೆಸಲು ಪೊಲೀಸರು ಅನುಮತಿ ನೀಡಿದರು. ಮಧ್ಯಾಹ್ನ 12.30ರ ವೇಳೆ ಹೊರಟ ವಿದ್ಯಾರ್ಥಿಗಳ ಪ್ರತಿಭಟನಾ ರ್ಯಾಲಿಗೆ ದೆಹಲಿಯ ಸರೋಜಿನಿ ನಗರ ಬಸ್ ಡಿಪೋವರೆಗೂ ಮಾತ್ರ ಸಂಚರಿಸಲು ಪೊಲೀಸರು ಅನುಮತಿ ನೀಡಿದ್ದರು. ಅಲ್ಲಿಂದ ಮತ್ತೆ ವಾಪಸ್ ಆಗುವಂತೆ ಮೊದಲೇ ಎಚ್ಚರಿಕೆ ನೀಡಲಾಗಿತ್ತು. ಜೊತೆಗೆ ಬಸ್ ಡಿಪೋ ಬಳಿ ಪೊಲೀಸರು ಬ್ಯಾರಿಕೇಡ್ ಹಾಕಿ, ಬಿಗಿ ಭದ್ರತೆ ಕೈಗೊಂಡಿದ್ದರು.

ತೆರಿಗೆದಾರರ ಹಣವನ್ನು JNU ಬಳಸುತ್ತಿರುವುದು ಹೇಗೆ?ತೆರಿಗೆದಾರರ ಹಣವನ್ನು JNU ಬಳಸುತ್ತಿರುವುದು ಹೇಗೆ?

ವಿದ್ಯಾರ್ಥಿಗಳ ಮೇಲೆ ಪೊಲೀಸರ ಲಾಠಿ ಪ್ರಹಾರ

ರಾಷ್ಟ್ರಪತಿ ಭವನದ ಬದಲು ಸರೋಜಿನಿ ನಗರ ಬಸ್ ಡಿಪೋವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲು ವಿದ್ಯಾರ್ಥಿಗಳಿ ಅನುಮತಿ ನೀಡಲಾಗಿತ್ತು. ಆದರೆ, ವಿದ್ಯಾರ್ಥಿಗಳು ನಿಯಮ ಉಲ್ಲಂಘಿಸಿ ಅಲ್ಲಿಂದ ರಾಷ್ಟ್ರಪತಿ ಭವನದತ್ತ ಸಾಗಲು ಪ್ರಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಚಟನಾನಿರತ ವಿದ್ಯಾರ್ಥಿಗಳ ನಡುವೆ ವಾಗ್ದಾದ ನಡೆಯಿತು. ಪರಿಸ್ಥಿತಿ ಕೈ ಮೀರಿ ಹೋಗುತ್ತಿದ್ದಂತೆ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಪ್ರಹಾರ ನಡೆಸಿದರು.

ದೆಹಲಿಯಲ್ಲಿ ಮೆಟ್ರೋ ನಿಲ್ದಾಣಗಳೇ ಬಂದ್!

ದೆಹಲಿಯಲ್ಲಿ ಮೆಟ್ರೋ ನಿಲ್ದಾಣಗಳೇ ಬಂದ್!

ಇನ್ನು, ಜೆಎನ್ ಯು ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಮೆಟ್ರೋ ನಿಲ್ದಾಣಗಳನ್ನೇ ಬಂದ್ ಮಾಡಲಾಗಿತ್ತು. ಮೆಟ್ರೋ ಸ್ಟೇಷನ್ ಗೆ ಪ್ರತಿಭಟನಾನಿರತ ವಿದ್ಯಾರ್ಥಿಗಳು ನುಗ್ಗುವ ಸಾಧ್ಯತೆಗಳಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಮೂರು ಮೆಟ್ರೋ ನಿಲ್ದಾಣಗಳ ಬಾಗಿಲನ್ನು ಹಾಕಲಾಗಿತ್ತು. ಉದ್ಯೋಗ ಭವನ, ಲೋಕಕಲ್ಯಾಣ ಮಾರ್ಗ್ ಹಾಗೂ ಸೆಂಟ್ರಲ್ ಸೆಕ್ರೆಟ್ರಿಯೆಟ್ ಮೆಟ್ರೋ ನಿಲ್ದಾಣಗಳ ಬಾಗಿಲುಗಳನ್ನು ಬಂದ್ ಮಾಡಲಾಗಿತ್ತು. ಈ ನಿಲ್ದಾಣಗಳಲ್ಲಿ ಮೆಟ್ರೋ ನಿಲ್ಲಿಸದಂತೆ ಎಚ್ಚರಿಕೆ ನೀಡಲಾಗಿತ್ತು.

ವಿದ್ಯಾರ್ಥಿಗಳ ಹೋರಾಟದ ಬಗ್ಗೆ ಸರ್ಕಾರಗಳಿಗೆ ಏಕೆ ಭಯ?ವಿದ್ಯಾರ್ಥಿಗಳ ಹೋರಾಟದ ಬಗ್ಗೆ ಸರ್ಕಾರಗಳಿಗೆ ಏಕೆ ಭಯ?

ಹಾಸ್ಟೆಲ್ ಶುಲ್ಕ ಇಷ್ಟೊಂದು ಏರಿಕೆ ಮಾಡುವುದೇ?

ಹಾಸ್ಟೆಲ್ ಶುಲ್ಕ ಇಷ್ಟೊಂದು ಏರಿಕೆ ಮಾಡುವುದೇ?

ಸಿಂಗಲ್ ಶೇರಿಂಗ್ ಹಾಸ್ಟೆಲ್ ರೂಮ್ ನ ಶುಲ್ಕವನ್ನು 20 ರೂಪಾಯಿಯಿಂದ 600 ರೂಪಾಯಿಗೆ ಏರಿಕೆ ಮಾಡಲಾಗಿತ್ತು. ಶೇರಿಂಗ್ ರೂಮ್ ಬಾಡಿಗೆಯ ಶುಲ್ಕವನ್ನು 10 ರೂಪಾಯಿಯಿಂದ 300 ರೂಪಾಯಿಗೆ ಹೆಚ್ಚಿಸಲಾಗಿತ್ತು. ಇಷ್ಟೇ ಅಲ್ಲದೇ ಮೆಸ್ ಶುಲ್ಕವನ್ನು 5,500 ರೂಪಾಯಿಯಿಂದ 12 ಸಾವಿರ ರೂಪಾಯಿಗೆ ಹೆಚ್ಚಿಸಲಾಗಿತ್ತು. ಬಿಪಿಎಲ್ ಕಾರ್ಡ್ ಹೊಂದಿರುವ ವಿದ್ಯಾರ್ಥಿಗಳ ಹಾಸ್ಟೆಲ್ ಶುಲ್ಕ ಇದಕ್ಕಿಂತ ಕೊಂಚ ಕಡಿಮೆಯಾಗಿತ್ತು. ಸಿಂಗಲ್ ರೂಮ್ ಬಾಡಿಗೆ 300 ರೂಪಾಯಿ ಆಗಿದ್ರೆ, ಶೇರಿಂಗ್ ರೂಮ್ ಬಾಡಿಗೆ 150 ರೂಪಾಯಿಗೆ ಏರಿಕೆ ಮಾಡಲಾಗಿತ್ತು.

English summary
Delhi Protesting JNU Students Have Been Detained After A Clash With Police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X