ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಎನ್ ಯು ಹೆಸರು ಬದಲಿಸಿ ಮೋದಿ ಹೆಸರಿಡಲು ಬಿಜೆಪಿ ಸಂಸದ ಸಲಹೆ

By ಅನಿಲ್ ಆಚಾರ್
|
Google Oneindia Kannada News

ನವದೆಹಲಿ, ಆಗಸ್ಟ್ 18: ದೆಹಲಿಯಲ್ಲಿ ಇರುವ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ಹೆಸರನ್ನು ಬದಲಿಸಿ, ಪ್ರಧಾನಿ ನರೇಂದ್ರ ಮೋದಿ ಹೆಸರನ್ನು ಇಡಬೇಕು ಎಂದು ದೆಹಲಿಯ ಬಿಜೆಪಿ ಸಂಸದ ಹನ್ಸ್ ರಾಜ್ ಹನ್ಸ್ ಶನಿವಾರ ಅಭಿಪ್ರಾಯ ಪಟ್ಟಿದ್ದಾರೆ. ಪರಿಚ್ಛೇದ 370 ಅನ್ನು ರದ್ದು ಮಾಡಿ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಅನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ಮಾಡಿದ ಬಗ್ಗೆ ಅವರು ಮಾತನಾಡಿದ್ದಾರೆ.

ಜೆಎನ್ ಯುನಲ್ಲಿ ನಾಲ್ಕೂ ಪ್ರಮುಖ ಹುದ್ದೆಗಳು ಎಡಪಂಥೀಯ ವಿದ್ಯಾರ್ಥಿ ಒಕ್ಕೂಟಕ್ಕೆಜೆಎನ್ ಯುನಲ್ಲಿ ನಾಲ್ಕೂ ಪ್ರಮುಖ ಹುದ್ದೆಗಳು ಎಡಪಂಥೀಯ ವಿದ್ಯಾರ್ಥಿ ಒಕ್ಕೂಟಕ್ಕೆ

ಪಂಜಾಬಿ ಗಾಯಕರೂ ಆಗಿರುವ ಅವರು, ಜೆಎನ್ ಯುಗೆ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿ, "ಜೆಎನ್ ಯು ಎಂದಿರುವ ಹೆಸರನ್ನು ಎಂಎನ್ ಯು ಎಂದು ಬದಲಿಸಬೇಕು" ಎಂದು ಹೇಳಿದ್ದಾರೆ. "ಎಲ್ಲರೂ ನೆಮ್ಮದಿಯಾಗಿ ಇರಲಿ ಎಂದು ಪ್ರಾರ್ಥನೆ ಮಾಡಿ, ಬಾಂಬ್ ಬೀಳದಿರಲಿ. ನಮ್ಮ ಹಿರಿಯರ ತಪ್ಪುಗಳಿಗೆ ನಾವು ಬೆಲೆ ತೆರುತ್ತಿದ್ದೇವೆ. ಜೆಎನ್ ಯು ಅನ್ನು ಎಂಎನ್ ಯು ಎಂದು ಮರು ನಾಮಕರಣ ಮಾಡಬೇಕು ಎಂದು ಸಲಹೆ ಮಾಡುತ್ತೀನಿ. ಮೋದಿ ಹೆಸರಲ್ಲೂ ಏನಾದರೂ ಇರಲಿ" ಎಂದಿದ್ದಾರೆ.

JNU Must Be Renamed After Narendra Modi Name: BJP MP Hans Raj Hans

1969ರಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಹೆಸರಲ್ಲಿ ಜೆಎನ್ ಯು ಸ್ಥಾಪಿಸಲಾಯಿತು. ಆಗಸ್ಟ್ ಐದನೇ ತಾರೀಕು ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರಕಾರವು, ಜಮ್ಮು- ಕಾಶ್ಮೀರದ ವಿಶೇಷ ಸ್ಥಾನ- ಮಾನವನ್ನು ರದ್ದು ಮಾಡಿ, ಜಮ್ಮು- ಕಾಶ್ಮೀರ (ಶಾಸಕಾಂಗ ಸಭೆ ಜತೆಗೆ) ಹಾಗೂ ಲಡಾಖ್ (ಶಾಸಕಾಂಗ ಸಭೆ ಇಲ್ಲದೆ) ಎರಡು ಕೇಂದ್ರಾಡಳಿತ ಪ್ರದೇಶವನ್ನು ಘೋಷಣೆ ಮಾಡಿತು.

English summary
Jawahar Lal Nehru University must be re named, it should be changed as MNU, named after Narendra Modi, said BJP MP Hans Raj Hans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X