ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಜೊತೆ ಪಕ್ಷದ ಮೈತ್ರಿ: ಜೆಜೆಪಿ ತೊರೆಯಲು ತೇಜ್ ಬಹದ್ದೂರ್ ನಿರ್ಧಾರ

|
Google Oneindia Kannada News

ನವದೆಹಲಿ, ಅಕ್ಟೋಬರ್ 26: ಹರ್ಯಾಣಾ ಉಪಮುಖ್ಯಮಂತ್ರಿ ಜಾಟ್ ಸಮುದಾಯದ ಪ್ರಬಲ ನಾಯಕ ದುಷ್ಯಂತ್ ಚೌತಾಲಾ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಜೆಜೆಪಿಯ ತೇಜ್ ಬಹದ್ದೂರ್ ಪಕ್ಷದಿಂದ ಹೊರಬರಲು ನಿರ್ಧರಿಸಿದ್ದಾರೆ.

ದುಷ್ಯಂತ್ ಅವರು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವುದು ದ್ರೋಹ ಎಂದಿರುವ ಬಿಎಸ್‌ಎಫ್ ಯೋಧ ತೇಜ್ ಬಹದ್ದೂರ್ ಯಾವುದೇ ಕಾರಣಕ್ಕೂ ಜೆಜೆಪಿಯಲ್ಲಿ ಮುಂದುವರೆಯುವುದಿಲ್ಲ ಎಂದು ಹೇಳಿದ್ದಾರೆ.

ಮನೋಹರ್ ಲಾಲ್ ಖಟ್ಟರ್ ವಿರುದ್ಧ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಜೆಜೆಪಿ ಅಭ್ಯರ್ಥಿ ತೇಜ್ ಬಹದ್ದೂರ್ ಯಾದವ್, ಬಿಜೆಪಿಯೊಂದಿಗೆ ಪಕ್ಷ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಪಕ್ಷವನ್ನು ತೊರೆಯುವುದಾಗಿ ಘೋಷಿಸಿದ್ದಾರೆ.

ಮೋದಿ ವಿರುದ್ಧ ಸ್ಪರ್ಧಿಸಿದ್ದರು, ಬಳಿಕ ನಾಮಪತ್ರದಲ್ಲಿ ಗೊಂದಲವಿದ್ದ ಕಾರಣ , ಚುನಾವಣಾ ಆಯೋಗವು ನಾಮಪತ್ರ ತಿರಸ್ಕರಿಸಿತ್ತು. ತೇಜ್ ಬಹದ್ದೂರ್ ಅವರು ಮೊದಲು ಸ್ವತಂತ್ರ ಸ್ಪರ್ಧಿಯಾಗಿದ್ದರು. ಬಳಿಕ ಜೆಜೆಪಿಯಿಂದ ಸ್ಪರ್ಧೆ ಮಾಡಿದ್ದರು.

ತೇಜ್ ಬಹದ್ದೂರ್ ಅವರನ್ನು ವಜಾ ಮಾಡಲಾಗಿತ್ತು

ತೇಜ್ ಬಹದ್ದೂರ್ ಅವರನ್ನು ವಜಾ ಮಾಡಲಾಗಿತ್ತು

ಬಹದ್ದೂರ್ ಯಾದವ್ ಅವರನ್ನು ಜವಾನರಿಗೆ ಕಳಪೆ ಗುಣಮಟ್ಟದ ಆಹಾರ ವಿತರಿಸಲಾಗುತ್ತಿದೆ ಎಂದು ದೂರಿದ್ದ ಹಿನ್ನೆಲೆಯಲ್ಲಿ ಅವರನ್ನು ವಜಾಗೊಳಿಸಲಾಗಿತ್ತು.

ಉಚ್ಚಾಟಿಸಿದ ಪಕ್ಷವನ್ನೇ ಮುಗಿಸಿದ ಪ್ರಳಯಾಂತಕ ಯುವ ರಾಜಕಾರಣಿಉಚ್ಚಾಟಿಸಿದ ಪಕ್ಷವನ್ನೇ ಮುಗಿಸಿದ ಪ್ರಳಯಾಂತಕ ಯುವ ರಾಜಕಾರಣಿ

ಸೆಪ್ಟೆಂಬರ್‌ನಲ್ಲಿ ಜನನಾಯಕ್ ಜನತಾ ಪಕ್ಷ ಸೇರಿದ್ದರು

ಸೆಪ್ಟೆಂಬರ್‌ನಲ್ಲಿ ಜನನಾಯಕ್ ಜನತಾ ಪಕ್ಷ ಸೇರಿದ್ದರು

ದುಷ್ಯಂತ್ ಚೌತಲಾ ಅವರ ಸಮ್ಮುಖದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಸೆಪ್ಟೆಂಬರ್‌ನಲ್ಲಿ ಅವರು ಜನನಾಯಕ್ ಜನತಾ ಪಕ್ಷಕ್ಕೆ (ಜೆಜೆಪಿ) ಸೇರಿದರು.

2017 ರಲ್ಲಿ ವಿಡಿಯೋ ಬಿಡುಗಡೆ ಮಾಡಿದ ನಂತರ ತೇಜ್ ಬಹದ್ದೂರ್ ಯಾದವ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು.

ದುಷ್ಯಂತ್ ಚೌತಾಲಾ ದ್ರೋಹ ಮಾಡಿದ್ದಾರೆ

ದುಷ್ಯಂತ್ ಚೌತಾಲಾ ದ್ರೋಹ ಮಾಡಿದ್ದಾರೆ

ರಾಜ್ಯವು ಬಿಜೆಪಿಗೆ ಬಾಗಿಲು ತೆರೆದಿದೆ, ದುಷ್ಯಂತ್ ಚೌತಲಾ ಹರಿಯಾಣ ಜನರಿಗೆ ದ್ರೋಹ ಮಾಡಿದ್ದಾರೆ.

ಅವರು ಮುಂದೆ ಹೋಗಿ ಜೆಜೆಪಿಯನ್ನು ಜೆಜೆಪಿಯ "ಬಿ-ತಂಡ" ಎಂದು ಕರೆದಿದ್ದಾರೆ ಮತ್ತು ಎರಡು ಪಕ್ಷಗಳು ಒಂದೇ ಮತ್ತು ಜನರು ಅವರನ್ನು ವಿರೋಧಿಸಬೇಕೆಂದರು.

ಜೆಜೆಪಿ ಬಿಜೆಪಿಗೆ ಬೆಂಬಲ ನೀಡಿದೆ

ಜೆಜೆಪಿ ಬಿಜೆಪಿಗೆ ಬೆಂಬಲ ನೀಡಿದೆ

ಮನೋಹರ್ ಲಾಲ್ ಖಟ್ಟರ್ ಅವರ ಹರಿಯಾಣ ಬಿಜೆಪಿ ಬಹುಮತ ದಾಟಲು ವಿಫಲವಾದ ಹಿನ್ನೆಲೆಯಲ್ಲಿ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ 10 ಸ್ಥಾನಗಳನ್ನು ಗೆದ್ದ ಜೆಜೆಪಿ ಶುಕ್ರವಾರ ಬಿಜೆಪಿಗೆ ಬೆಂಬಲ ನೀಡಿತು.

ಈಗ ದುಷ್ಯಂತ್ ಚೌತಾಲಾ ಅವರ ಜೆಜೆಪಿಗೆ ಹರ್ಯಾಣದಲ್ಲಿ ಉಪಮುಖ್ಯಮಂತ್ರಿ ಹುದ್ದೆಯನ್ನು ಬಿಜೆಪಿ ನೀಡಿದೆ ಮತ್ತು ಉಭಯ ಪಕ್ಷಗಳು ಒಕ್ಕೂಟವನ್ನು ಘೋಷಿಸಿವೆ.

English summary
JJP candidate Tej Bahadur Yadav, who had contested the Haryana assembly elections against Manohar Lal Khattar, has announced that he will quit the party because of the party tying up with BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X