ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಷ್ಟದಲ್ಲಿರುವ ಜೆಟ್‌ ಏರ್‌ವೇಸ್‌ಗೆ ನೌಕರರ ಸಂಬಳದ ಮೇಲೆ ವಕ್ರದೃಷ್ಟಿ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 4: ಜೆಟ್‌ ಏರ್‌ವೇಸ್‌ ತನ್ನ ಸಿಬ್ಬಂದಿಗೆ ವೇತನ ಕಡಿತ ಮಾಡುವುದಾಗಿ ತಿಳಿಸಿದೆ. ಇದಕ್ಕೆ ಒಪ್ಪದಿದ್ದರೆ ಮುಂದಿನ 60 ದಿನಗಳಲ್ಲಿ ಹಾರಾಟವನ್ನೇ ಸ್ಥಗತಿಗೊಳಿಸಲಾಗುತ್ತದೆ ಎನ್ನುವ ಎಚ್ಚರಿಕೆ ಸಂದೇಶ ರವಾನಿಸಿದೆ.

ಜೆಟ್‌ ಏರ್‌ವೇಸ್‌ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದೆ, ವೇತನ ಕಡಿತ ಸೇರಿದಂತೆ ವೆಚ್ಚ ನಿಯಂತ್ರಕ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದು ತಿಳಿಸಿದೆ. ಆದರೆ ಪೈಲಟ್‌ಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ, ಮುಂದಿನ 2 ವರ್ಷಗಳಿಗೆ ಶೇ.15ರಷ್ಟು ವೇತನ ಕಡಿತದ ಪ್ರಸ್ತಾಪವನ್ನು ಪೈಲೆಟ್‌ಗಳು ತಿರಸ್ಕರಿಸಿದ್ದಾರೆ.

ಪ್ರಯಾಣಿಕನ ಬ್ಯಾಗ್ ವಾಪಸ್ ಕೊಡದ ಜೆಟ್‌ ಏರ್ ವೇಸ್ ಗೆ ದಂಡಪ್ರಯಾಣಿಕನ ಬ್ಯಾಗ್ ವಾಪಸ್ ಕೊಡದ ಜೆಟ್‌ ಏರ್ ವೇಸ್ ಗೆ ದಂಡ

ಕಂಪನಿಯ ಸೇಲ್ಸ್‌, ವಿತರಣೆ, ವೇತನ, ನಿರ್ವಹಣೆ ಮತ್ತು ಇತರ ವಿಭಾಗಗಳಲ್ಲಿ ಉಳಿತಾಯ ಮಾಡಲು ಯತ್ನಿಸಲಿದೆ, ಜೆಟ್‌ ಏರ್‌ವೇಸ್‌ ಬಂಡವಾಳದ ಹುಡುಕಾಟದಲ್ಲಿದೆ, ಬ್ಯಾಂಕ್‌ಗಳು ಸಾಲ ಕೊಡಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ ಇದು ಒಂದು ಸವಾಲಾಗಿ ಪರಿಣಮಿಸಿದೆ.

Jet airways in serious financial crisis: Cutdowns employees salary

ಜೆಟ್‌ ಏರ್‌ವೇಸ್‌ನಲ್ಲಿ ಹಲವು ಉದ್ಯೋಗಿಗಳುಕಡಿತವಾಗಿದ್ದರೂ, ಪೈಲಟ್‌ಗಳ ಹುದ್ದೆ ಕಡಿತವಾಗಿಲ್ಲ, ಕಂಪನಿಯ ಷೇರು ದರ ಶೇ.7ರಷ್ಟು ಕುಸಿದಿದೆ. ಜೆಟ್‌ ಏರ್‌ವೇಸ್‌ ರಾತ್ರಿ ಹಾರಾಟ ಮಾಡುವಾಗ ಆಕಾಶದಿಂದ ಮಲಮೂತ್ರಗಳನ್ನು ಸುರಿಯುತ್ತದೆ ಎಂದು ದೆಹಲಿಯ ನಾಗರಿಕರೊಬ್ಬರು ದೂರು ನೀಡಿದ್ದಾರೆ.

ತಮ್ಮ ಪ್ರದೇಶದಲ್ಲಿ ಹಲವಾರು ಮನೆಗಳ ಮೇಲೆ ವಿಮಾನದಿಂದ ಶೌಚಾಲಯದ ತ್ಯಾಜ್ಯಗಳಿ ಬಿದ್ದಿವೆ ಎಂದು ದೂರು ನೀಡಿದ್ದಾರೆ. ಈ ಸಂಬಂಧ ರಾಷ್ಟ್ರೀಯ ಹಸಿರು ಪೀಠಕ್ಕೆ ದೂರು ಸಲ್ಲಿಸಲಾಗಿದೆ.

English summary
Jet airways management had declare that whether employees should accept cut down the salary or the company will be stopped the air service operations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X