ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರು ತಿಂಗಳಿನಿಂದ ಸಂಬಳವಿಲ್ಲ: ಸಂಕಷ್ಟದಲ್ಲಿ ಜೆಟ್ ಏರ್‌ವೇಸ್

|
Google Oneindia Kannada News

ಮುಂಬೈ, ಮಾರ್ಚ್ 19: ದೇಶದ ಪ್ರಮುಖ ವಿಮಾನಯಾನ ಸಂಸ್ಥೆಗಳಾದ ಜೆಟ್ ಏರ್‌ವೆಸ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.

ವೈಮಾನಿಕ ಹಾರಾಟದ ವೆಚ್ಚವನ್ನು ಭರಿಸಲಾಗದೆ ಏರ್‌ಲೈನ್ಸ್ ತತ್ತರಿಸಿದ್ದು, ಸಿಬ್ಬಂದಿಗೆ ಮೂರು ತಿಂಗಳಿನಿಂದ ವೇತನ ನೀಡಿಲ್ಲ ಎಂದು ಆರೋಪಿಸಲಾಗಿದೆ. ಈಗಾಗಲೇ ಸಂಸ್ಥೆ ಸುಮಾರು 41 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದೆ.

ಜೆಟ್ ಏರ್ವೇಸ್ ನಲ್ಲಿ ಗೂಬೆ! ಮುಂಬೈ ವಿಮಾನ ನಿಲ್ದಾಣದಲ್ಲಿ ವಿಚಿತ್ರ ಘಟನೆ ಜೆಟ್ ಏರ್ವೇಸ್ ನಲ್ಲಿ ಗೂಬೆ! ಮುಂಬೈ ವಿಮಾನ ನಿಲ್ದಾಣದಲ್ಲಿ ವಿಚಿತ್ರ ಘಟನೆ

ಒಂದು ಬಿಲಿಯನ್ ಡಾಲರ್‌ಗೂ ಅಧಿಕ ಮೊತ್ತದ ಸಾಲದಲ್ಲಿ ಕಂಪೆನಿ ಸಿಲುಕಿದ್ದು, ಬ್ಯಾಂಕುಗಳು, ಪೂರೈಕೆದಾರರು, ಪೈಲಟ್‌ಗಳು ಮತ್ತು ಇತರೆ ಸಿಬ್ಬಂದಿಗೆ ಹಣ ಪಾವತಿಸಲು ಸಾಧ್ಯವಾಗದೆ ಪರದಾಡುತ್ತಿದೆ. ಈ ನಡುವೆ ಸಂಸ್ಥೆಯನ್ನು ಉಳಿಸಲು ಮಧ್ಯಪ್ರವೇಶಿಸಿರುವ ಕೇಂದ್ರ ಸರ್ಕಾರ, ಸಂಸ್ಥೆಗೆ ಆರ್ಥಿಕ ಸಹಾಯ ಮಾಡಲು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಸಲಹೆ ನೀಡಿದೆ.

Jet airways salary due 41 flights forced to ground

ಜೆಟ್ ಏರ್ ವೇಸ್ ಗೆ ದಿನಕ್ಕೆ 14 ಕೋಟಿ ನಷ್ಟ, ಮೂರನೇ ಬಾರಿಗೆ 1000 ಕೋಟಿಗೂ ಹೆಚ್ಚು ನಷ್ಟ ಜೆಟ್ ಏರ್ ವೇಸ್ ಗೆ ದಿನಕ್ಕೆ 14 ಕೋಟಿ ನಷ್ಟ, ಮೂರನೇ ಬಾರಿಗೆ 1000 ಕೋಟಿಗೂ ಹೆಚ್ಚು ನಷ್ಟ

ವೇತನ ನೀಡದೆ ಇರುವುದು ಸಿಬ್ಬಂದಿಯ ಮಾನಸಿಕ ಸ್ಥಿತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಇದರಿಂದ ವಿಮಾನಗಳ ಕಾರ್ಯಾಚರಣೆಗೆ ಅಪಾಯ ಎದುರಾಗಿದೆ ಎಂದು ನೌಕರರ ಒಕ್ಕೂಟ ಹೇಳಿದೆ.

ಜೆಟ್ ಏರ್ ವೇಸ್ ಖರೀದಿಗೆ ಟಾಟಾ ಸನ್ಸ್ ನಲ್ಲಿ ಲೆಕ್ಕಾಚಾರ ಶುರು ಜೆಟ್ ಏರ್ ವೇಸ್ ಖರೀದಿಗೆ ಟಾಟಾ ಸನ್ಸ್ ನಲ್ಲಿ ಲೆಕ್ಕಾಚಾರ ಶುರು

ಇದುವರೆಗೂ ಮೂರು ತಿಂಗಳ ಸಂಬಳ ಬಾಕಿ ಉಳಿದುಕೊಂಡಿದೆ ಎಂದು ಕಂಪೆನಿಯ ನಿರ್ವಹಣಾ ಎಂಜಿನಿಯರ್‌ಗಳ ಸಂಸ್ಥೆ ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ ಬರೆದಿರುವ ಪತ್ರದಲ್ಲಿ ಆರೋಪಿಸಿದೆ.

English summary
Jet Airways in a financial crisis dues payments of 3 months to its staff. Government calls emergency meet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X