ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಟ್ ಏರ್‌ವೇಸ್ ಮಂಡಳಿ ತ್ಯಜಿಸಿದ ಸಂಸ್ಥಾಪಕ ಗೋಯಲ್ ದಂಪತಿ

|
Google Oneindia Kannada News

ನವದೆಹಲಿ, ಮಾರ್ಚ್ 25: ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಮತ್ತು ಅವರ ಪತ್ನಿ ಅನಿತಾ ಅವರು ವಿಮಾನಯಾನ ಸಂಸ್ಥೆಯ ಮಂಡಳಿಯ ಸ್ಥಾನ ತ್ಯಜಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

1993ರಲ್ಲಿ 25 ವರ್ಷದ ಹಿಂದೆ ಗೋಯಲ್ ಅವರು ಪತ್ನಿ ಜತೆಗೂಡಿ ಸಂಸ್ಥೆಯನ್ನು ಸ್ಥಾಪಿಸಿದ್ದರು. ಸಂಸ್ಥೆಯಲ್ಲಿನ ತಮ್ಮ ಶೇ 51ರಷ್ಟು ಷೇರುಗಳನ್ನು ತಗ್ಗಿಸಲು ಗೋಯಲ್ ಒಪ್ಪಿಕೊಂಡಿದ್ದಾರೆ ಎಂದು ತಿಂಗಳ ಆರಂಭದಲ್ಲಿ ವರದಿಯಾಗಿತ್ತು.

ಸಂಬಳವಿಲ್ಲದೆ ಅಮ್ಮನ ಒಡವೆ ಮಾರುವ ಸ್ಥಿತಿಗೆ ಬಂದ ಪೈಲಟ್‌ಗಳು ಸಂಬಳವಿಲ್ಲದೆ ಅಮ್ಮನ ಒಡವೆ ಮಾರುವ ಸ್ಥಿತಿಗೆ ಬಂದ ಪೈಲಟ್‌ಗಳು

ತೀವ್ರ ನಷ್ಟದಲ್ಲಿರುವ ಸಂಸ್ಥೆಗೆ ಇದರಿಂದ ಮತ್ತಷ್ಟು ಆಘಾತ ಎದುರಾಗಿದೆ. ಕೇಂದ್ರ ಸರ್ಕಾರ ನೆರವಿಗೆ ಧಾವಿಸಿದ್ದರೂ ಸಂಸ್ಥೆಯನ್ನು ಉಳಿಸಿಕೊಳ್ಳುವುದು ಕಷ್ಟ ಎನ್ನಲಾಗುತ್ತಿದೆ.

jet airways founder Naresh Goyal stepped down from board of the airline

ಸುಮಾರು 1 ಬಿಲಿಯನ್ ಡಾಲರ್ ಸಾಲದ ಹೊರೆಯಲ್ಲಿರುವ ಜೆಟ್ ಏರ್‌ವೇಸ್, ಕಾರ್ಯಾಚರಣೆ ನಡೆಸಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದೆ. ಬ್ಯಾಂಕುಗಳು, ತೈಲ ಪೂರೈಕೆದಾರರು, ಪೈಲಟ್‌ಗಳು ಮತ್ತು ಇತರೆ ಸಿಬ್ಬಂದಿಗೆ ವೇತನ ಮತ್ತು ಶುಲ್ಕ ಪಾವತಿ ಮಾಡುವುದು ವಿಳಂಬ ಮಾಡಿದೆ. ಈಗಾಗಲೇ ಸುಮಾರು 40 ವಿಮಾನಗಳ ಹಾರಾಟ ಸಂಪೂರ್ಣ ಸ್ಥಗಿತಗೊಂಡಿದೆ.

ಜೆಟ್ ಏರ್‌ವೇಸ್ ಉಳಿಸಲು ತೆರಿಗೆದಾರರ ಹಣವೇಕೆ?: ಕಾಂಗ್ರೆಸ್ ಪ್ರಶ್ನೆ ಜೆಟ್ ಏರ್‌ವೇಸ್ ಉಳಿಸಲು ತೆರಿಗೆದಾರರ ಹಣವೇಕೆ?: ಕಾಂಗ್ರೆಸ್ ಪ್ರಶ್ನೆ

ಇದಕ್ಕೂ ಮೊದಲು ಜೆಟ್ ಏರ್‌ವೇಸ್ 2013ರಲ್ಲಿ ಕೂಡ ಇಂತಹದ್ದೇ ಪರಿಸ್ಥಿತಿ ಎದುರಿಸಿ ಮುಚ್ಚುವ ಸ್ಥಿತಿಗೆ ತಲುಪಿತ್ತು. ಆಗ ಅಬುಧಾಬಿಯ ಇತಿಹಾದ್ ಏರ್‌ವೇಸ್ ವಿಮಾನಯಾನ ಸಂಸ್ಥೆಯಲ್ಲಿ ಶೇ 24ರಷ್ಟು ಷೇರುಗಳನ್ನು ಹೂಡಿಕೆ ಮಾಡುವುದರ ಮೂಲಕ 600 ಮಿಲಿಯನ್ ಡಾಲರ್ ನೆರವು ನೀಡಿತ್ತು. ಜತೆಗೆ ಲಂಡನ್ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಮೂರು ಅಂಕಣಗಳನ್ನು ಒದಗಿಸಿತ್ತು. ಜೆಟ್‌ನ ನಿರಂತರ ಹಾರಾಟ ಯೋಜನೆಗಾಗಿ ಹೆಚ್ಚಿನ ಸಂಖ್ಯೆಯ ಷೇರುಗಳನ್ನು ಪಡೆದುಕೊಂಡಿತ್ತು.

English summary
jet airways founder Naresh Goyal and his wife Anita stepped down from board of the airline on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X