• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜೆಟ್‌ ಏರ್‌ವೇಸ್ ನಿಜಕ್ಕೂ ಫ್ರೀ ಟಿಕೆಟ್ ಕೊಡುತ್ತಾ? ವೈರಲ್ ಆದ ಸಂದೇಶ

|

ನವದೆಹಲಿ, ಮೇ 24: ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಜೆಟ್ ಏರ್‌ವೇಸ್, ಎರಡು ಟಿಕೆಟ್‌ಗಳನ್ನು ಉಚಿತವಾಗಿ ಪಡೆಯುವ ಅವಕಾಶ ನೀಡುತ್ತಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವಿಮಾನ ಪ್ರಯಾಣಿಕರು ಟಿಕೆಟ್ ಕ್ಯಾನ್ಸಲ್ ಮಾಡಿದರೆ ಶುಲ್ಕವಿಲ್ಲ!

ತನ್ನ 25ನೇ ವರ್ಷಾಚರಣೆ ಪ್ರಯುಕ್ತ ಜೆಟ್ ಏರ್‌ವೇಸ್ ಸಂಸ್ಥೆಯು ಪ್ರತಿ ಕುಟುಂಬಕ್ಕೂ ಎರಡು ಉಚಿತ ಟಿಕೆಟ್‌ಗಳನ್ನು ನೀಡುತ್ತಿದೆ. ಸೀಮಿತ ಸಂಖ್ಯೆಯ ಟಿಕೆಟ್‌ಗಳು ಬಾಕಿ ಉಳಿದಿವೆ. ಈ ಸಂದೇಶವನ್ನು ನಿಮ್ಮ ವಾಟ್ಸ್‌ಆಪ್‌ನಲ್ಲಿ 20 ಸ್ನೇಹಿತರು ಮತ್ತು ಗುಂಪುಗಳಿಗೆ ಕಳುಹಿಸಿ. 'ಕ್ಲೈಮ್ ಟಿಕೆಟ್ಸ್' ಮೇಲೆ ಕ್ಲಿಕ್ ಮಾಡಿ, ನಿಮ್ಮ ವಿಳಾಸ ವಿವರ ನಮೂದಿಸಿ. 24ರಿಂದ 48 ಗಂಟೆಯಲ್ಲಿ ನಿಮ್ಮ ಇಮೇಲ್‌ಗೆ ಟಿಕೆಟ್ ಬರಲಿದೆ ಎಂಬ ಸಂದೇಶ ವೈರಲ್ ಆಗಿದೆ.

ಇದನ್ನು ನಂಬಿದ ಅನೇಕರು ಜೆಟ್ ಏರ್‌ವೇಸ್‌ನಲ್ಲಿ ಉಚಿತ ಟಿಕೆಟ್ ಪಡೆಯಲು ಮುಗಿಬಿದ್ದಿದ್ದಾರೆ. ಆದರೆ, ಈ ಸುದ್ದಿ ಶುದ್ಧ ಸುಳ್ಳು. ಈ ವದಂತಿಗೆ ಕಿವಿಗೊಡಬೇಡಿ ಎಂದು ಜೆಟ್ ಏರ್‌ವೇಸ್ ಮನವಿ ಮಾಡಿದೆ.

#FakeAlert ಎಂಬ ಹ್ಯಾಷ್‌ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ಜೆಟ್ ಏರ್‌ವೇಸ್, ನಮ್ಮ 25ನೇ ವರ್ಷಾಚರಣೆಗೆ ಪ್ರಯುಕ್ತ ಟಿಕೆಟ್ ವಿತರಣೆ ಸಂಬಂಧ ಸುಳ್ಳು ಸುದ್ದಿ ಹರಡಲಾಗುತ್ತಿದೆ. ಈ ರೀತಿ ಸಂಸ್ಥೆ ಅಧಿಕೃತ ಸ್ಪರ್ಧೆ ಅಥವಾ ಕೊಡುಗೆ ನೀಡುತ್ತಿಲ್ಲ. ಎಚ್ಚರಿಕೆ ವಹಿಸುವಂತೆ ಸಲಹೆ ನೀಡುತ್ತಿದ್ದೇವೆ. ಯಾವುದೇ ಬಗೆಯ ಸ್ಪರ್ಧೆ ಅಥವಾ ಕೊಡುಗೆಗಳಿದ್ದಲ್ಲಿ ನಮ್ಮ ಅಧಿಕೃತ ಸಾಮಾಜಿಕ ತಾಣದ ಖಾತೆಗಳಲ್ಲಿ ಪ್ರಕಟಿಸುತ್ತೇವೆ ಎಂದು ಸ್ಪಷ್ಟನೆ ನೀಡಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Jet Airways Airline has clarified that the message regarding the Airline is offering two free tickets to clebrate its 25th anniversary is fake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more