ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಇಇ ಸುಧಾರಿತ ಪರೀಕ್ಷೆ ಫಲಿತಾಂಶ ಪ್ರಕಟ: ಹುಡುಕುವುದು ಹೇಗೆ?

|
Google Oneindia Kannada News

ನವದೆಹಲಿ, ಅಕ್ಟೋಬರ್,05: ಲಕ್ಷಾಂತರ ವಿದ್ಯಾರ್ಥಿಗಳ ಕುತೂಹಲದ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ನವದೆಹಲಿಯ ಐಐಟಿಯು 2020ರ ಜೆಇಇ ಸುಧಾರಿತ ಫಲಿತಾಂಶವನ್ನು ಪ್ರಕಟಿಸಿದೆ. ಜೆಇಇ ಸುಧಾರಿತ ಪರೀಕ್ಷೆಗಳನ್ನು ಬರೆದ ವಿದ್ಯಾರ್ಥಿಗಳು ಫಲಿತಾಂಶವನ್ನು ಹುಡುಕುವುದು ಹೇಗೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

ನವದೆಹಲಿ ಐಐಟಿಗೆ ಸಂಬಂಧಿಸಿದ ಅಧಿಕೃತ jeeadv.ac.in ತಾಣದಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಐಐಟಿ ಪ್ರವೇಶ ಪರೀಕ್ಷೆ ಮತ್ತು ಜೆಇಇ ಸುಧಾರಿತ ಪರೀಕ್ಷೆಯನ್ನು ಬರೆದ ವಿದ್ಯಾರ್ಥಿಗಳು ಈ ವೆಬ್ ಸೈಟ್ ನಲ್ಲಿ ತಮ್ಮ ನೋಂದಣಿ ಸಂಖ್ಯೆ ಮತ್ತು ಪಾಸ್ ವರ್ಡ್ ಅನ್ನು ನಮೂದಿಸಿ ತಮ್ಮ ಫಲಿತಾಂಶವನ್ನು ಪಡೆದುಕೊಳ್ಳಬಹುದು.

ಜೆಇಇ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ: 24 ವಿದ್ಯಾರ್ಥಿಗಳಿಗೆ ಶೇ 100 ಅಂಕಜೆಇಇ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ: 24 ವಿದ್ಯಾರ್ಥಿಗಳಿಗೆ ಶೇ 100 ಅಂಕ

ಅಧಿಕೃತ ವೆಬ್ ಸೈಟ್ ನಲ್ಲಿ ವಿದ್ಯಾರ್ಥಿಗಳು ತಮ್ಮ ಸ್ಕೋರ್ ಕಾರ್ಡ್ ಮತ್ತು ರ್ಯಾಂಕ್ ಕಾರ್ಡ್ ಗಳನ್ನು ಆನ್ ಲೈನ್ ಮೂಲಕವೇ ಪಡೆದುಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿ ಕೊಡಲಾಗಿದೆ. 2020ರ ಸಾಲಿನಲ್ಲಿ 1.6 ಲಕ್ಷ ವಿದ್ಯಾರ್ಥಿಗಳು ಜೆಇಇ ಸುಧಾರಿತ ಪರೀಕ್ಷೆಗೆ ಹಾಜರಾಗಿದ್ದರು ಎಂದು ತಿಳಿದು ಬಂದಿದೆ.

JEE Advanced Result 2020 Declared: Heres How to Check And Toppers List

ಭಾರತಕ್ಕೆ ಅಗ್ರಸ್ಥಾನ ಪಡೆದ ಚಿರಾಗ್ ಫಾಲೋರ್:

ಬಾಂಬ್ ಐಐಟಿ ವಲಯದ ವಿದ್ಯಾರ್ಥಿ ಚಿರಾಗ್ ಫಾಲೋರ್ ಇಡೀ ದೇಶದಲ್ಲೇ ಅತಿಹೆಚ್ಚು ಅಂಕ ಪಡೆದುಕೊಳ್ಳುವ ಮೂಲಕ ಕಾಮನ್ ರ್ಯಾಂಕ್ ಲಿಸ್ಟ್ ನಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. 396 ಅಂಕಗಳ ಪೈಕಿ 352 ಅಂಕಗಳನ್ನು ಪಡೆದುಕೊಂಡಿದ್ದಾರೆ. ಇನ್ನು, ವಿದ್ಯಾರ್ಥಿನಿಯರ ವಿಭಾಗದಲ್ಲಿ ಕನಿಷ್ಕಾ ಮಿತ್ತಲ್ 396ರ ಪೈಕಿ 315 ಅಂಕಗಳನ್ನು ಪಡೆಯುವುದರ ಮೂಲಕ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.

ಒಂದು ಬಾರಿ ಫಲಿತಾಂಶ ಪ್ರಕಟವಾದ ಬಳಿಕ ಅರ್ಹ ಅಭ್ಯರ್ಥಿಗಳು JoSAA ಕೌನ್ಸಿಲಿಂಗ್ ಗೆ ಮಾನ್ಯತೆ ಪಡೆದುಕೊಳ್ಳುತ್ತಾರೆ. ಅಕ್ಟೋಬರ್.06ರಿಂದ ಈ ಕೌನ್ಸಿಲಿಂಗ್ ಆರಂಭಗೊಳ್ಳಲಿದೆ.

ವಲಯವಾರು ಅಗ್ರಸ್ಥಾನ ಪಡೆದ ವಿದ್ಯಾರ್ಥಿಗಳ ಪಟ್ಟಿ:
ವಿದ್ಯಾರ್ಥಿ ಹೆಸರು - ಐಐಟಿ ವಲಯ
ಚಿರಾಗ್ ಫಾಲೋರ್ - ಬಾಂಬೆ
ಲಂದಾ ಜೀತೇಂದ್ರ - ಮದ್ರಾಸ್
ಗಂಗೂಲಾ ಭುವನ್ ರೆಡ್ಡಿ - ಮದ್ರಾಸ್
ಅವಿ ಉದಯ್ - ಬಾಂಬೆ
ಪ್ರಂಜಲ್ ಸಿಂಗ್ - ದೆಹಲಿ
ಕಂದುಲ್ಕುರಿ ಸುನೀಲ್ ಕುಮಾರ್ ವಿಶ್ವೇಶ್ - ಮದ್ರಾಸ್
ಉತ್ಕರ್ಷ್ - ಗುವಾಹಟಿ
ಯಶ್ ಚುದ್ಮನ್ ಪಾಟೀಲ್ - ಬಾಂಬೆ
ನಿತೀಶ್ ಕುಮಾರ್ ಬಿರುವಾ - ಖರಗ್ಪುರ್

English summary
JEE Advanced Result 2020 Declared: Here's How to Check And Toppers List.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X