ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರದ ಮಿತ್ರಪಕ್ಷ ಜೆಡಿಯುಗೆ ಉಪ ಸಭಾಧ್ಯಕ್ಷ ಸ್ಥಾನ ನೀಡಲು ಬಿಜೆಪಿ ಚಿಂತನೆ

|
Google Oneindia Kannada News

ನವದೆಹಲಿ, ಜೂನ್ 20: ಲೋಕಸಭೆಯ ಉಪ ಸಭಾಧ್ಯಕ್ಷರ ಹುದ್ದೆಯನ್ನು ಬಿಜೆಪಿ ತನ್ನ ಬಿಹಾರದ ಮಿತ್ರಪಕ್ಷ ಜೆಡಿಯುಗೆ ನೀಡುವ ಸಾಧ್ಯತೆ ಇದೆ.

ಬಿಜೆಪಿ ನೇತೃತ್ವದ ಎನ್‌ಡಿಎ ಸದಸ್ಯರೇ ಅಧಿಕ ಸಂಖ್ಯೆಯಲ್ಲಿರುವ ಲೋಕಸಭೆಯಲ್ಲಿ ವಿರೋಧಪಕ್ಷದಿಂದ ಸಾಂಕೇತಿಕವಾಗಿ ಸ್ಪರ್ಧೆ ನಡೆಯಲಿದೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ. ಲೋಕಸಭೆಯ ಉಪ ಸಭಾಧ್ಯಕ್ಷ ಯಾರಾಗಲಿದ್ದಾರೆ ಎಂಬುದನ್ನು ಎನ್‌ಡಿಎ ನಿರ್ಧರಿಸಲಿದೆ.

ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ರಾಜಸ್ಥಾನದ ಕೋಟಾ ಸಂಸದ ಓಂ ಬಿರ್ಲಾಲೋಕಸಭಾ ಸ್ಪೀಕರ್ ಸ್ಥಾನಕ್ಕೆ ರಾಜಸ್ಥಾನದ ಕೋಟಾ ಸಂಸದ ಓಂ ಬಿರ್ಲಾ

ಸಾಮಾನ್ಯವಾಗಿ ಆಡಳಿತಾರೂಢ ಸರ್ಕಾರದ ಭಾಗವಾಗಿರದ ಪಕ್ಷಕ್ಕೆ ಈ ಹುದ್ದೆಯನ್ನು ನೀಡುವುದು ಸಂಪ್ರದಾಯ. 2014ರಲ್ಲಿ ತಮಿಳುನಾಡಿನ ಎಐಎಡಿಎಂಕೆ ಸಂಸದ ಎಂ. ತಂಬಿದೊರೈ ಅವರಿಗೆ ಬಿಜೆಪಿ ಈ ಹುದ್ದೆ ನೀಡಿತ್ತು. 2019ರ ಚುನಾವಣೆಯಲ್ಲಿ ಎಐಎಡಿಎಂಕೆ, ಬಿಜೆಪಿಯ ಮಿತ್ರಪಕ್ಷವಾಗಿ ಸ್ಪರ್ಧಿಸಿತ್ತು.

jdu may get Lok sabha deputy speaker post

ಬಿಜೆಪಿ ಮೂಲಗಳ ಪ್ರಕಾರ ಬಿಜೆಪಿಯ ಬಿಹಾರದ ಮಿತ್ರಪಕ್ಷ ಜೆಡಿಯು ಅಥವಾ ಒಡಿಶಾದ ಬಿಜು ಜನತಾದಳದ ಸಂಸದರೊಬ್ಬರು ಈ ಹುದ್ದೆಗೆ ಏರುವ ಸಾಧ್ಯತೆ ಇದೆ. ಜೆಡಿಯು ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದರೂ, ಎನ್‌ಡಿಎ ಸರ್ಕಾರದಲ್ಲಿ ಯಾವುದೇ ಸಚಿವ ಸ್ಥಾನ ಪಡೆದುಕೊಂಡಿಲ್ಲ.

ರಾಹುಲ್ ಗಾಂಧಿ ಕಾಲೆಳೆದು ಸದನದಲ್ಲಿ ನಗೆಯುಕ್ಕಿಸಿದ ಸಚಿವ ಅಠವಲೆ ರಾಹುಲ್ ಗಾಂಧಿ ಕಾಲೆಳೆದು ಸದನದಲ್ಲಿ ನಗೆಯುಕ್ಕಿಸಿದ ಸಚಿವ ಅಠವಲೆ

ಈ ನಡುವೆ ಜಗನ್ ಮೋಹನ್ ರೆಡ್ಡಿ ಅವರ ವೈಎಸ್‌ಆರ್ ಕಾಂಗ್ರೆಸ್ ಹೆಸರೂ ಉಪಸಭಾಧ್ಯಕ್ಷರ ಸ್ಥಾನಕ್ಕೆ ಕೇಳಿಬಂದಿದೆ. ಆದರೆ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವವರೆಗೂ ಈ ಹುದ್ದೆಯನ್ನು ತಾವು ಒಪ್ಪಿಕೊಳ್ಳುವುದಿಲ್ಲ. ಇದನ್ನು ಪಡೆದುಕೊಂಡು ನಾವೇನು ಸಾಧನೆ ಮಾಡಲು ಸಾಧ್ಯ? ಎಂದು ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ.

English summary
BJP's Bihar ally JDU may get the Lok Sabha Deputy Speaker post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X