ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದ ನಡೆಗೆ ಸ್ನೇಹಿತರಿಂದಲೇ ವಿರೋಧ, ವಿರೋಧಿಗಳಿಂದ ಅಚ್ಚರಿಯ ಬೆಂಬಲ!

|
Google Oneindia Kannada News

ನವದೆಹಲಿ, ಆಗಸ್ಟ್ 05: ತ್ರಿವಳಿ ತಲಾಖ್, ರಾಮಮಂದಿರ ನಿರ್ಮಾಣದ ವಿಷಯಗಳಲ್ಲಿ ಬಿಜೆಪಿಗೆ ಎಂದಿಗೂ ಬೆಂಬಲ ನೀಡುವುದಿಲ್ಲ ಎಂದಿರುವ ಮಿತ್ರ ಪಕ್ಷ ಜೆಡಿಯು ಇದೀಗ ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲೂ ಮಿತ್ರ ಪಕ್ಷದ ನಿಲುವನ್ನು ವಿರೋಧಿಸಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ಎನ್ ಡಿಎ ಸರ್ಕಾರದ ನಡೆಯನ್ನು ಎನ್ ಡಿಎ ಮಿತ್ರ ಪಕ್ಷಗಳೇ ಕೆಲವು ವಿರೋಧಿಸಿದ್ದರೆ, ಎನ್ ಡಿಎಯ ವಿರೋಧಿ ಪಕ್ಷಗಳಲ್ಲಿ ಕೆಲವು ಈ ನಡೆಯನ್ನು ಸ್ವಾಗತಿಸಿವೆ.

ಅಮಿತ್ ಶಾ ಮಂಡಿಸಿದ ವಿಧೇಯಕಕ್ಕೆ ಮಾಯಾವತಿಯ ಬಿಎಸ್ಪಿ ಬೆಂಬಲ ಅಮಿತ್ ಶಾ ಮಂಡಿಸಿದ ವಿಧೇಯಕಕ್ಕೆ ಮಾಯಾವತಿಯ ಬಿಎಸ್ಪಿ ಬೆಂಬಲ

ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಸಹ ಈ ನಡೆಯನ್ನು ಸ್ವಾಗತಿಸಿರುವುದು ಗಮನಾರ್ಹ. ಜೊತಗೆ ಜೆಡಿಯು ತಾನು ಈ ನಡೆಯನ್ನು ಎಂದಿಗೂ ಬೆಂಬಲಿಸುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದು, ಇದು ಮಿತ್ರಪಕ್ಷಗಳ ನಡುವೆ ಬಿರುಕು ಮೂಡಿರಬಹುದಾದ ಸಾಧ್ಯತೆಯನ್ನು ಹೆಚ್ಚಿಸಿದೆ. ಇತ್ತೀಚೆಗೆ ತ್ರಿವಳಿ ತಲಾಖ್ ಮಂಡನೆಯ ಸಂದರ್ಭದಲ್ಲೂ ಈ ಮಸೂದೆಗೆ ತಮ್ಮ ಬೆಂಬಲವಿಲ್ಲ ಎಂದು ಜೆಡಿಯು ಸಂಸದರು ಮತ ಚಲಾಯಿಸದೆ ಸಂಸತ್ತಿನಿಂದ ಹೊರನಡೆದಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ನಮ್ಮ ಬೆಂಬಲವಿದೆ: ಶಿವಸೇನೆ

ನಮ್ಮ ಬೆಂಬಲವಿದೆ: ಶಿವಸೇನೆ

ಎನ್ ಡಿಎ ಮಿತ್ರಪಕ್ಷವಾದ ಶಿವಸೇನೆ ಸರ್ಕಾರದ ನಡೆಯನ್ನು ಸ್ವಾಗತಿಸಿದ್ದು, ಇದಕ್ಕೆ ತನ್ನ ಬೆಂಬಲವಿದೆ ಎಂದಿದೆ. ಭಯೋತ್ಪಾದನೆಯನ್ನು ಹತ್ತಿಕ್ಕಲು ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತ್ದೆ ಎಂದಾದರೆ ಅದಕ್ಕೆ ನನ್ನ ಬೆಂಬಲವಿದ್ದೇ ಇದೆ ಎಂದು ಅದು ಹೇಳಿದೆ. ಕಾಶ್ಮೀರ ಸಮಸ್ಯೆಯನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳುತ್ತೇವೆ ಎಂಬುದು ಸಾಧ್ಯವಿಲ್ಲದ ವಿಷಯ. ಅದನ್ನು ಕೇವಲ ಸೇನಾ ಕಾರ್ಯಾಚರಣೆಯಿಂದ ಮಾತ್ರವೇ ಪರಿಹರಿಸಬಹದು ಎಂದು ಅದು ಹೇಳಿದೆ.

Kashmir Issue LIVE:ಕೇಂದ್ರದ ನಿರ್ಧಾರಕ್ಕೆ ಕೇಜ್ರಿವಾಲ್ ಬೆಂಬಲKashmir Issue LIVE:ಕೇಂದ್ರದ ನಿರ್ಧಾರಕ್ಕೆ ಕೇಜ್ರಿವಾಲ್ ಬೆಂಬಲ

ಜೆಡಿಯು ವಿರೋಧ

ಜೆಡಿಯು ವಿರೋಧ

ಆದರೆ ಕೇಂದ್ರ ಸರ್ಕಾರದ ನಡೆಯನ್ನು ಎನ್ ಡಿಎ ಮೈತ್ರಿಕೂಟದ ಸದಸ್ಯ ಪಕ್ಷವಾದ ಜೆಡಿಯು ವಿರೋಧಿಸಿದ್ದು, "ನಾವು ಎಂದಿಗೂ ಜೆಪಿ ನಾರಾಯಣ್, ರಾಮ ಮನೋಹರ್ ಲೋಹಿಯಾ ಮತ್ತು ಜಾರ್ಜ್ ಫರ್ನಾಡೀಸ್ ಅವರ ಆದರ್ಶವನ್ನು ಪಾಲಿಸುತ್ತೇವೆ. ನಾವು ಈ ಮಸೂದೆಯನ್ನು ಬೆಂಬಲಿಸುವುದಿಲ್ಲ. ನಮ್ಮ ಯೋಚನೆ ಇದಕ್ಕಿಂತ ಭಿನ್ನವಾಗಿದೆ" ಎಂದು ಜೆಡಿಯು ವಕ್ತಾರ ಕೆಸಿ ತ್ಯಾಗಿ ಹೇಳಿದರು.

ಅರವಿಂದ್ ಕೇಜ್ರಿವಾಲ್ ಬೆಂಬಲ

ಅರವಿಂದ್ ಕೇಜ್ರಿವಾಲ್ ಬೆಂಬಲ

ಅಚ್ಚರಿಯನ ನಡೆಯಲ್ಲಿ ದೆಹಲಿ ಮುಖ್ಯಮಂತ್ರಿ, ಎಎಪಿ ಮುಖಂಡ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರದ ನಡೆಯನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. "ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ನಾವು ಬೆಂಬಲಿಸುತ್ತೇವೆ. ಇದು ಕಣಿವೆ ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡಲಿದೆ ಎಂದು ನಾವು ನಂಬಿದ್ದೇವೆ" ಎಂದು ಕೇಜ್ರಿವಾಲ್ ಹೇಳಿದ್ದಾರೆ.

370 ನೇ ವಿಧಿ ರದ್ದು: ತಕ್ಕ ಉತ್ತರ ನೀಡಲು ಸಿದ್ಧ ಎಂದ ಪಾಕಿಸ್ತಾನ370 ನೇ ವಿಧಿ ರದ್ದು: ತಕ್ಕ ಉತ್ತರ ನೀಡಲು ಸಿದ್ಧ ಎಂದ ಪಾಕಿಸ್ತಾನ

ಮಾಯಾವತಿ ಅಚ್ಚರಿಯ ಬೆಂಬಲ

ಮಾಯಾವತಿ ಅಚ್ಚರಿಯ ಬೆಂಬಲ

'ನಮ್ಮ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ. ಈ ವಿಧೇಯಕಕ್ಕೆ ಸಮ್ಮತಿ ಸಿಗಬೇಕಿದೆ. ಸಂವಿಧಾನದ ಪರಿಚ್ಛೇದ 370(3) ರದ್ದು ಹಾಗೂ ಇನ್ನಿತರ ಮಸೂದೆಗಳನ್ನು ರದ್ದುಪಡಿಸುವುದರ ಮೂಲಕ ಕಣಿವೆ ರಾಜ್ಯದಲ್ಲಿ ಶಾಂತಿ, ಅಭಿವೃದ್ಧಿ ಸಾಧ್ಯ ಎಂದಾದರೆ, ನಾವು ವಿರೋಧಿಸುವುದಿಲ್ಲ" ಎಂದು ಬಿಎಸ್ಪಿ ಸಂಸದ ಸತೀಶ್ ಚಂದ್ರ ಮಿಶ್ರಾ ಹೇಳಿದರು.

ಬಿಜೆಡಿ ಬೆಂಬಲ

ಬಿಜೆಡಿ ಬೆಂಬಲ

ಜಮ್ಮು ಮತ್ತು ಕಾಶ್ಮೀರ ಈಗ ನಿಜವಾಗಿಯೂ ಭಾರತದ ಅಂಗವಾಗಿದೆ. ನನ್ನ ಪಕ್ಷ ಈ ನಿರ್ಣಯಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದೆ. ನಮ್ಮದು ಪ್ರಾದೇಶಿಕ ಪಕ್ಷವಾದರೂ ದೇಶ ಮೊದಲು ಎಂಬ ತತ್ವಕ್ಕೆ ನಾವು ಬೆಲೆ ಕೊಡುತ್ತೇವೆ ಎಂದು ಬಿಜೆಡಿ(ಬಿಜು ಜನತಾ ದಳ) ಹೇಳಿದೆ.

English summary
Jammu And Kasmir: List of Parties Who Supported And Who Opposed The Bill?, Jammu and Kashmir bill,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X