• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಮ್ಮು ಮತ್ತು ಕಾಶ್ಮೀರ ಸೂಕ್ಷ್ಮ ವಿಚಾರ, ಸರ್ಕಾರಕ್ಕೆ ಕಾಲಾವಕಾಶ ಬೇಕು: ಸುಪ್ರೀಂ

|

ನವದೆಹಲಿ, ಆಗಸ್ಟ್ 13: ಜಮ್ಮು ಕಾಶ್ಮೀರದ ಬಗ್ಗೆ ಕೆಲವು ನಿರ್ಧಾರ ತೆಗೆದುಕೊಳ್ಳಲು ಕೇಂದ್ರ ಸರ್ಕಾರವು ಕಾಲಾವಕಾಶ ತೆಗೆದುಕೊಳ್ಳಲೇಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.

ಜಮ್ಮು ಮತ್ತು ಕಾಶ್ಮೀರ ವಿಚಾರ ಬಹಳ ಸೂಕ್ಷ್ಮವಾಗಿದ್ದು, ಅದರ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಾದರೂ ಕೂಡ ಕೇಂದ್ರ ಸಾಕಷ್ಟು ಯೋಚನೆ ಮಾಡಬೇಕಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಸನ್ನದ್ದ ಸ್ಥಿತಿಯಲ್ಲಿ ಆರ್ಮಿ, ಏರ್ಫೋರ್ಸ್: ಜಮ್ಮು, ಕಾಶ್ಮೀರದಲ್ಲಿ ಏನಾಗುತ್ತಿದೆ? ಸನ್ನದ್ದ ಸ್ಥಿತಿಯಲ್ಲಿ ಆರ್ಮಿ, ಏರ್ಫೋರ್ಸ್: ಜಮ್ಮು, ಕಾಶ್ಮೀರದಲ್ಲಿ ಏನಾಗುತ್ತಿದೆ?

ಜಮ್ಮು ಕಾಶ್ಮೀರದಲ್ಲಿಕಳೆದ ಒಂದು ವಾರದಿಂದ ರಾಜಕಾರಣಿಗಳನ್ನು ಗೃಹ ಬಂಧನದಿಂದ ಬೇಗ ಮುಕ್ತವಾಗಿಸುವಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಇದೊಂದು ಸೂಕ್ಷ್ಮವಾದ ವಿಚಾರ ಹಾಗೆ ಆತುರಾತುರದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗದು ಎಂದು ಹೇಳಿದೆ.

ಯಾವುದೇ ನಿರ್ಧಾರವನ್ನು ರಾತ್ರೋರಾತ್ರಿ ತೆಗೆದುಕೊಳ್ಳಲು ಸಾಧ್ಯವಿಲ್ಲ, ಯಾರಿಗೂ ಅಲ್ಲಿ ಏನಾಗುತ್ತಿದೆ ಎಂದು ಗೊತ್ತಿಲ್ಲ ಎಂದು ಹೇಳಿ ಪ್ರಕರಣದ ವಿಚಾರಚಣೆಯನ್ನು ಎರಡು ವಾರಗಳ ಕಾಲ ಮುಂದೂಡಿತು.

ಆಗಸ್ಟ್ 4 ರಂದು ಜಮ್ಮು ಮತ್ತು ಕಾಶ್ಮೀರದಿಂದ ವಿಶೇಷಾಧಿಕಾರ ಕಸಿದುಕೊಳ್ಳುವ ಮುನ್ನವೇ ಜಮ್ಮು ಕಾಶ್ಮೀರಕ್ಕೆ ಭಿಗಿ ಭದ್ರತೆ ಕಲ್ಪಿಸಲಾಗಿತ್ತು.

ಇಂಟರ್ನೆಟ್ ಹಾಗೂ ಮೊಬೈಲ್ ಸೇವೆ ಸ್ಥಗಿತಗೊಳಿಸಲಾಗಿದೆ. ಸರ್ಕಾರಕ್ಕೆ ಸಮಯ ಕೊಡಬೇಕು, ಪರಿಸ್ಥಿತಿ ಶಾಂತಗೊಳ್ಳಬೇಕು. ಇದೇ ರೀತಿಯ ಪರಿಸ್ಥಿತಿ ಮುಂದುವರೆದರೆ ಅರ್ಜಿದಾರರು ಕೋರ್ಟ್‌ಗೆ ಬರಬಹುದು ಎಂದೂ ಹೇಳಿದೆ.

ಜಮ್ಮು ಕಾಶ್ಮೀರದಲ್ಲಿ ಸೋಮವಾರ ಈದ್ ಶಾಂತವಾಗಿ ನಡೆದಿದೆ. ಸಾಕಷ್ಟು ಮಸೀದಿಗಳು ಬಂದ್ ಆಗಿತ್ತು.

English summary
Jammu And Kashmir Issue Supreme Said Government Should Get Time,We expect normalcy. But nothing can be done overnight. Nobody knows what's happening. One has to rely on the government It is a sensitive issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X