ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಣ್ಣು ಕಿತ್ತುಕೊಂಡಿತಾ ಖಾಕಿ: ವಿದ್ಯಾರ್ಥಿ ವಿಡಿಯೋದಲ್ಲಿ ಹೇಳಿದ್ದೇನು?

|
Google Oneindia Kannada News

ದೆಹಲಿ, ಡಿಸೆಂಬರ್.20: ಮಾಡಿದ್ದುಣ್ಣೋ ಮಹರಾಯ ಎಂಬ ಗಾದೆ ಮಾತು ಕೇಳಿರುತ್ತಿರಾ ಅಲ್ಲವೇ. ಇಲ್ಲೊಬ್ಬ ವಿದ್ಯಾರ್ಥಿ ಏನೂ ತಪ್ಪು ಮಾಡದೇ ಕಣ್ಣು ಕಳೆದುಕೊಂಡ ಘಟನೆ ದೆಹಲಿಯಲ್ಲಿ ನಡೆದಿದೆ. ಎರಡು ದಿನಗಳ ಹಿಂದೆ ನಡೆದ ಘಟನೆ ಇಂದು ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಡಿಸೆಂಬರ್.15ರ ಬಾನುವಾರ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಶಾಂತಿಯುತವಾಗಿ ಆರಂಭಗೊಂಡ ಪ್ರತಿಭಟನೆ ಮಧ್ಯಾಹ್ನದ ವೇಳೆ ಹಿಂಸಾತ್ಮಕ ರೂಪ ಪಡೆದುಕೊಂಡಿತು.

ಪೌರತ್ವ ಕಾಯ್ದೆಯ ಪ್ರಶ್ನೆಗೆ 'ಉತ್ತರ' ಸಿಗದೆೇ ಹೊತ್ತಿಉರಿದ 'ಪ್ರದೇಶ'! ಪೌರತ್ವ ಕಾಯ್ದೆಯ ಪ್ರಶ್ನೆಗೆ 'ಉತ್ತರ' ಸಿಗದೆೇ ಹೊತ್ತಿಉರಿದ 'ಪ್ರದೇಶ'!

ಮಧ್ಯಾಹ್ನ ಬಳಿಕ ವಿಶ್ವವಿದ್ಯಾಲಯದ ಆವರಣ ರಣಾಂಗಣವೇ ಆಗಿ ಹೋಯಿತು. ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಕೂಗುತ್ತಿದ್ದರೆ, ಇನ್ನೊಂದೆಡೆ ಪೊಲೀಸರು ವಿವಿಯ ಗ್ರಂಥಾಲಯಕ್ಕೆ ನುಗ್ಗಲು ಯತ್ನಿಸಿದರು ಎಂದು ಹೇಳಲಾಗುತ್ತಿದೆ.

ಲೈಬ್ರೆರಿಯಲ್ಲೇ ಪೊಲೀಸರಿಂದ ನಡೆಯಿತಾ ಹಲ್ಲೆ?

ಲೈಬ್ರೆರಿಯಲ್ಲೇ ಪೊಲೀಸರಿಂದ ನಡೆಯಿತಾ ಹಲ್ಲೆ?

ದೆಹಲಿ ಜಾಮಿಯಾ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಪೊಲೀಸರು ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಪುಷ್ಟಿ ನೀಡುವಂತೆ ಗ್ರಂಥಾಲಯದಲ್ಲಿ ಓದಲು ಕುಳಿತ ತನ್ನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಎಲ್ಎಲ್ಎಂ ಓದುತ್ತಿರುವ ವಿದ್ಯಾರ್ಥಿ ಮಿನ್ಹಾಜುದ್ದೀನ್ ಆರೋಪಿಸಿದ್ದಾರೆ. ಬಿಹಾರ ಸಮಸ್ತಿಪುರ್ ಮೂಲದ ವಿದ್ಯಾರ್ಥಿ ಇಂದು ತನ್ನ ಒಂದು ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಿದ್ದಾನೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾನೆ.

20-25 ಪೊಲೀಸರಿಂದ ವಿದ್ಯಾರ್ಥಿಗಳ ಮೇಲೆ ಹಲ್ಲೆ?

20-25 ಪೊಲೀಸರಿಂದ ವಿದ್ಯಾರ್ಥಿಗಳ ಮೇಲೆ ಹಲ್ಲೆ?

"ಕಳೆದ ಡಿಸೆಂಬರ್.15ರಂದು ಜಾಮಿಯಾ ವಿಶ್ವವಿದ್ಯಾಲಯದ ಕೇಂದ್ರ ಗ್ರಂಥಾಲಯದ M.Phil ವಿಭಾಗದಲ್ಲಿ ನಾನು ಓದುತ್ತಾ ಕುಳಿತಿದ್ದನು. ಈ ವೇಳೆ ಲೈಬ್ರೆರಿಗೆ 20 ರಿಂದ 25 ಮಂದಿ ಪೊಲೀಸರು ನುಗ್ಗಿದರು. ಅಲ್ಲಿ ಕುಳಿತಿದ್ದ ಎಲ್ಲ ವಿದ್ಯಾರ್ಥಿಗಳ ಮೇಲೆ ಲಾಠಿಪ್ರಹಾರ ನಡೆಸಿದರು ಎಂದು ವಿದ್ಯಾರ್ಥಿ ಆರೋಪಿಸಿದ್ದಾನೆ.

ದೆಹಲಿಯ ಜಾಮಿಯಾ ವಿಶ್ವವಿದ್ಯಾಲಯಕ್ಕೆ ಆ ತಂಡ ಹೋಗಿದ್ದೇಕೆ?ದೆಹಲಿಯ ಜಾಮಿಯಾ ವಿಶ್ವವಿದ್ಯಾಲಯಕ್ಕೆ ಆ ತಂಡ ಹೋಗಿದ್ದೇಕೆ?

ಶೌಚಾಲಯದಲ್ಲಿ ಬಚ್ಚಿಟ್ಟುಕೊಂಡ ಎಲ್ಎಲ್ಎಂ ವಿದ್ಯಾರ್ಥಿ?

ಶೌಚಾಲಯದಲ್ಲಿ ಬಚ್ಚಿಟ್ಟುಕೊಂಡ ಎಲ್ಎಲ್ಎಂ ವಿದ್ಯಾರ್ಥಿ?

ಪೊಲೀಸರು ನಡೆಸಿದ ಹಲ್ಲೆಯಿಂದಾಗಿ ನನ್ನ ಕೈ ಬೆರಳು ಹಾಗೂ ಕಣ್ಣಿಗೆ ತೀವ್ರವಾದ ಗಾಯವಾಗಿದ್ದು, ಪ್ರಜ್ಞೆತಪ್ಪಿದಂತೆ ಆಯಿತು ಎಂದು ಮಿನ್ಹಾಜುದ್ದೀನ್ ಹೇಳಿದರು. ಪೊಲೀಸರಿಂದ ತಪ್ಪಿಸಿಕೊಳ್ಳಲು ನಾನು ಶೌಚಾಲಯದತ್ತ ಓದಿಹೋದೆನು. ನಂತರ ನನ್ನ ಕಣ್ಣಿನ ಭಾಗದಲ್ಲಿ ರಕ್ತ ಸುರಿಯಲು ಆರಂಭವಾಯಿತು ಆಗ ನಾನು ಶೌಚಾಲಯದಿಂದ ಹೊರ ಬಂದೆನು ಎಂದು ವಿದ್ಯಾರ್ಥಿ ವಿಡಿಯೋವೊಂದರಲ್ಲಿ ಹೇಳಿದ್ದಾನೆ.

ವಿದ್ಯಾರ್ಥಿಯನ್ನು ಬೆಚ್ಚಿ ಬೀಳಿಸಿದ ವೈದ್ಯರ ಮಾತು

ವಿದ್ಯಾರ್ಥಿಯನ್ನು ಬೆಚ್ಚಿ ಬೀಳಿಸಿದ ವೈದ್ಯರ ಮಾತು

ರಕ್ತ ಸುರಿಸಿಕೊಂಡು ಕುಳಿತಿದ್ದ ನನ್ನನ್ನು ಸ್ನೇಹಿತರೆಲ್ಲ ಅಲ್-ಶೈಫಲ್ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿ ವೈದ್ಯರು ಏಮ್ಸ್ ಆಸ್ಪತ್ರೆಗೆ ಕರೆದೊಯ್ಯುವಂತೆ ಶಿಫಾರಸ್ಸು ಮಾಡಿದರು. ಏಮ್ಸ್ ನಲ್ಲಿ ವೈದ್ಯರು ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಿಸುವಂತೆ ಸೂಚಿಸಿದರು. ರಾಜೇಂದ್ರ ಪ್ರಸಾದ್ ಐ ಸೆಂಟರ್ ನಲ್ಲಿ ಆಪರೇಷನ್ ಮಾಡಲಾಯಿತು. ನಂತರ ಅಲ್ಲಿನ ವೈದ್ಯರು ನನ್ನ ಕಣ್ಣಿನ ದೃಷ್ಟಿ ಮರಳಿ ಬರುವುದಿಲ್ಲ ಎಂದು ಹೇಳಿದರು ಎಂದು ವಿದ್ಯಾರ್ಥಿ ವಿಡಿಯೋ ಮೂಲಕ ತನ್ನ ನೋವನ್ನು ತೋಡಿಕೊಂಡಿದ್ದಾನೆ.

English summary
Students Protest Against Citizenship Amendment Act In Delhi. Jamia University Student Loss His One Eye In Police Lathicharge?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X