ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಮಾ ಮಸೀದಿ ಜಮುನಾ ದೇವಿ ಮಂದಿರವಾಗಿತ್ತು: ಬಿಜೆಪಿ ಮುಖಂಡ

|
Google Oneindia Kannada News

ನವದೆಹಲಿ, ಡಿಸೆಂಬರ್ 07: ದೆಹಲಿಯ ಜಾಮಾ ಮಸೀದಿ, ಮೂಲವಾಗಿ ಜಮುನಾ ದೇವಿ ದೇವಾಲಯವಾಗಿತ್ತು, ಹಾಗೆಯೇ ಈಗಿನ ತಾಜ್ ಮಹಲ್ ತೇಜೋಮಹಾಲಯವಾಗಿತ್ತು ಎಂದು ಬಿಜೆಪಿ ನಾಯಕ ವಿನಯ್ ಕಟಿಯಾರ್ ಹೇಳಿದರು.

ಕುತುಬ್ ಮೀನಾರ್ , ತಾಜಮಹಲ್ ಹಿಂದೂ ದೇವಾಲಯ : ಅನಂತಕುಮಾರ ಹೆಗಡೆಕುತುಬ್ ಮೀನಾರ್ , ತಾಜಮಹಲ್ ಹಿಂದೂ ದೇವಾಲಯ : ಅನಂತಕುಮಾರ ಹೆಗಡೆ

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಟಿಯಾರ್, "ಮೊಘಲರ ಕಾಲದಲ್ಲಿ 6000 ಕ್ಕೂ ಹೆಚ್ಚು ಪ್ರಮುಖ ಹಿಂದುತಾಣಗಳ ಮೇಲೆ ದಾಳಿ ನಡೆದಿತ್ತು. ಆ ಸಮಯದಲ್ಲಿ ಹಲವು ದೇವಾಲಯಗಳು ಮಸೀದಿಗಳಾದವು" ಎಂದರು.

Jama Masjid was Jamuna Devi temple claims BJP leader

ನಮ್ಮ ಧಾರ್ಮಿಕ ತಾಣಗಳನ್ನು ಮುಸ್ಲಿಮರು ಸದಾ ಗುರಿಯಾಗಿಸುತ್ತಿದ್ದಾರೆ. ಆದರೆ ಸದ್ಯಕ್ಕೆ ನಮಗೆ ಬೇಕಾಗಿರುವುದು ರಾಮ ಮಂದಿರ ನಿರ್ಮಾಣ ಮಾತ್ರ ಎಂದು ಅವರು ಹೇಳಿದ್ದಾರೆ.

ತಾಜ್ ಮಹಲ್ ಮೂಲದಲ್ಲಿ ಶಿವ ದೇವಾಲಯವೇ?: ಮತ್ತೆ ಎದ್ದಿತು ಪ್ರಶ್ನೆ ತಾಜ್ ಮಹಲ್ ಮೂಲದಲ್ಲಿ ಶಿವ ದೇವಾಲಯವೇ?: ಮತ್ತೆ ಎದ್ದಿತು ಪ್ರಶ್ನೆ

ಅಯೋಧ್ಯೆ ವಿಷಯದಲ್ಲಿ ಕಾಂಗ್ರೆಸ್ ಮತ್ತು ಕಪಿಲ್ ಸೀಬಲ್ ಸುನ್ನಿ ವಕ್ಫ್ ಬೋರ್ಡ್ ಅನ್ನು ಪ್ರತಿನಿಧಿಸುತ್ತಿರುವ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು. "ಆ ಜಾಗದಲ್ಲಿ ಮಸೀದಿಯನ್ನು ಕಟ್ಟಲು ಕಾಂಗ್ರೆಸ್ ಹವಣಿಸುತ್ತಿದೆ. ಆದರ ಅದಕ್ಕೆ ನಾವು ಅವಕಾಶ ಮಾಡಿಕೊಡುವುದಿಲ್ಲ" ಎಂದು ಅವರು ಹೇಳಿದರು.

English summary
Bharatiya Janata Party (BJP) on Thursday claimed that Delhi's Jama Masjid was originally Jamuna Devi temple. BJP leader Vinay Katiyar said, "There were about 6000 places that were broken down by the Mughal emperors. Delhi's Jama Masjid was originally Jamuna Devi temple, similarly Taj Mahal was Tejo Mahalaya."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X