ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿವೃತ್ತ ಜಲಮಂಡಳಿ ಅಧಿಕಾರಿಗೆ ಕೊರೊನಾ ಸೋಂಕು, ಆತ್ಮಹತ್ಯೆ

|
Google Oneindia Kannada News

ದೆಹಲಿ, ಜೂನ್ 1: ದೆಹಲಿಯ ನಿವೃತ್ತ ಜಲಮಂಡಳಿ ಅಧಿಕಾರಿಗೆ ಕೊರೊನಾ ವೈರಸ್ ತಗುಲಿತ್ತು. ಸೋಂಕಿಗೆ ತುತ್ತಾಗಿದ್ದ 63 ವರ್ಷದ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೀಥಾಪುರದ ಹರಿಜನ್ ಕಾಲೋನಿಯಲ್ಲಿ ವಾಸವಾಗಿದ್ದ ನಿವೃತ್ತ ಅಧಿಕಾರಿ ಪತ್ನಿ ಮತ್ತು ಕುಟುಂಬದೊಂದಿಗೆ ನೆಲೆಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಪ ಪೊಲೀಸ್ ಆಯುಕ್ತ ಅತುಲ್ ಕುಮಾರ್ ಠಾಕೂರ್ ''ತಮ್ಮ ಕೋಣೆಯಲ್ಲಿ ಸಂಜೆ ಸಿಲೀಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾರೆ'' ಎಂದು ತಿಳಿಸಿದ್ದಾರೆ.

ಲಾಕ್‌ಡೌನ್‌ನಿಂದ ಮದುವೆ ಮುಂದಕ್ಕೆ: ಯುವಕ ಆತ್ಮಹತ್ಯೆಲಾಕ್‌ಡೌನ್‌ನಿಂದ ಮದುವೆ ಮುಂದಕ್ಕೆ: ಯುವಕ ಆತ್ಮಹತ್ಯೆ

ಸ್ಥಳದಲ್ಲಿ ಡೆತ್‌ನೋಟ್ ಹಾಗೂ ಬೇರೆ ರೀತಿಯ ಸಾಕ್ಷ್ಯ ಸಿಕ್ಕಿಲ್ಲ. ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಮೇಲ್ನೋಟಕ್ಕೆ ಅವರ ಆರೋಗ್ಯ ಕಾರಣದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

Jal Board official tests coronavirus positive and commit suicide

ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ ಆ ವ್ಯಕ್ತಿ ಕಳೆದ 10-12 ವರ್ಷದಿಂದ ನಿರಂತರವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಡಯಾಲಿಸೀಸ್‌ನಲ್ಲಿದ್ದರು ಎಂದು ತಿಳಿದಿದೆ. ಮೇ 19 ರಂದು ಆತನಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಮೇ 20 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ, ಅವರಿಗೆ ಕೊವಿಡ್ ಸೋಂಕು ತಗುಲಿರುವುದು ದೃಢಪಟ್ಟಿತ್ತು.

ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವವರು ಹೆಚ್ಚಾಗಿ ಕೊವಿಡ್ ಸೋಂಕಿಗೆ ತುತ್ತಾಗಿರುವುದು ಕಂಡು ಬಂದಿದೆ. ಮಧ್ಯಾಹ್ನ 3 ಗಂಟೆಗೆ ಊಟ ನೀಡಲು ಕೋಣೆಗೆ ನರ್ಸ್ ಹೋದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

English summary
63 Year old Retired delhi Jal Board officer tests coronavirus positive and he commit suicide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X