ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಸ್ಫೋಟದ ಹಿಂದೆ ಜೈಷ್ ಉಲ್ ಹಿಂದ್?; ಚಾಟ್ ಬೆನ್ನಟ್ಟಿರುವ ತನಿಖಾ ಸಂಸ್ಥೆ

|
Google Oneindia Kannada News

ನವದೆಹಲಿ, ಜನವರಿ 30: ದೆಹಲಿಯಲ್ಲಿನ ಇಸ್ರೇಲ್ ರಾಯಭಾರ ಕಚೇರಿ ಎದುರು ಶುಕ್ರವಾರ ಐಇಡಿ ಸ್ಫೋಟಗೊಂಡಿದ್ದು, ಇದರ ಹಿಂದೆ ಭಯೋತ್ಪಾದನಾ ಕೃತ್ಯದ ಶಂಕೆ ವ್ಯಕ್ತವಾಗಿತ್ತು. ಇದೀಗ ಜೈಷ್ ಉಲ್ ಹಿಂದ್ ಸಂಘಟನೆ ಸ್ಫೋಟದ ಹಿಂದಿರುವುದಾಗಿ ತಿಳಿದುಬಂದಿದೆ.

ಜೈಷ್ ಉಲ್ ಹಿಂದ್ ಸಂಘಟನೆ ಈ ಸ್ಫೋಟಕ್ಕೆ ಕಾರಣ ಎಂದು ಹೇಳಿಕೊಂಡಿದ್ದು, ಈ ಬಗ್ಗೆ ಮಾಹಿತಿ ರವಾನೆಯಾಗಿರುವ ಟೆಲಿಗ್ರಾಂ ಚಾಟ್ ಪರಿಶೀಲನೆಯಲ್ಲಿ ಕೇಂದ್ರ ತನಿಖಾ ಸಂಸ್ಥೆ ತೊಡಗಿಕೊಂಡಿದೆ. ಇಸ್ರೇಲ್ ರಾಯಭಾರ ಕಚೇರಿ ನಡೆಸಿದ ಈ ದಾಳಿ ಬಗ್ಗೆ ಸಂಘಟನೆ ಹೆಮ್ಮೆ ಪಟ್ಟುಕೊಂಡಿರುವುದಾಗಿಯೂ ತಿಳಿದುಬಂದಿದೆ. ತನಿಖಾ ಸಂಸ್ಥೆ ಈ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಕಲೆ ಹಾಕುವ ಕಾರ್ಯದಲ್ಲಿ ನಿರತವಾಗಿದೆ. ಸ್ಫೋಟಕ್ಕೆ ಕಾರಣವನ್ನೂ ಪತ್ತೆಹಚ್ಚಲಾಗುತ್ತಿದೆ.

'ಇದು ಟ್ರೇಲರ್ ಅಷ್ಟೇ': ದೆಹಲಿ ಸ್ಫೋಟ ನಡೆದ ಸ್ಥಳದಲ್ಲಿ ಸಿಕ್ಕ ಕಾಗದದಲ್ಲಿ ಎಚ್ಚರಿಕೆ'ಇದು ಟ್ರೇಲರ್ ಅಷ್ಟೇ': ದೆಹಲಿ ಸ್ಫೋಟ ನಡೆದ ಸ್ಥಳದಲ್ಲಿ ಸಿಕ್ಕ ಕಾಗದದಲ್ಲಿ ಎಚ್ಚರಿಕೆ

ದೆಹಲಿಯ ಡಾ. ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿನ ಇಸ್ರೇಲ್ ರಾಯಭಾರ ಕಚೇರಿ ಎದುರು ಶುಕ್ರವಾರ ಲಘು ಸಾಮರ್ಥ್ಯದ ಐಇಡಿ ಸ್ಫೋಟ ಸಂಭವಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಭಾರತ ಮತ್ತು ಇಸ್ರೇಲ್ ನಡುವಣ ರಾಜತಾಂತ್ರಿಕ ಸಂಬಂಧ ಸ್ಥಾಪನೆಯ 29ನೇ ವಾರ್ಷಿಕೋತ್ಸವದಂದೇ ಈ ಸ್ಫೋಟ ಸಂಭವಿಸಿದ್ದು, ಇದರ ಹಿಂದೆ ಅಲ್ ಖೈದಾ, ಐಎಸ್ ಐಎಸ್ ಸಂಘಟನೆ ಕೈವಾಡ ಸಾಧ್ಯತೆಯನ್ನು ವ್ಯಕ್ತಪಡಿಸಲಾಗಿತ್ತು.

Recommended Video

IND vs ENG ಗೆಲುವು ಯಾರಿಗೆ ? | Oneindia Kannada
Jaish Ul Hind Claims Terror Attack On Israel Embassy In Delhi


ರಸ್ತೆ ವಿಭಜಕದಲ್ಲಿನ ಹೂವಿನ ಕುಂಡ ಒಂದರಲ್ಲಿ ಬಾಂಬ್ ಇರಿಸಲಾಗಿದ್ದು, ಆ ಸ್ಥಳದಲ್ಲಿ ಎಚ್ಚರಿಕೆ ನೀಡಿದ್ದ ಲಕೋಟೆ ಪತ್ತೆಯಾಗಿತ್ತು.

English summary
Jaish-ul-Hind has claimed responsibility for the blast near the Israeli embassy in Delhi on social media. Central investigating agencies have verifying Telegram chat,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X