ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಟಾಲಿಯನ್ ಮಹಿಳೆ ಮೇಲೆ ಅತ್ಯಾಚಾರ: ಆರೋಪಿಗೆ 14 ದಿನ ನ್ಯಾಯಾಂಗ ಬಂಧನ

|
Google Oneindia Kannada News

ನವದೆಹಲಿ, ಫೆಬ್ರವರಿ.18: ಇಟಾಲಿಯನ್ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದು ಅಲ್ಲದೇ ಹಣಕಾಸಿನ ವ್ಯವಹಾರದಲ್ಲೂ ವಂಚಿಸಿರುವ ಆರೋಪ ಎದುರಿಸುತ್ತಿರುವ ಭಾರತೀಯ ಮೂಲದ ಯೋಗ ತರಬೇತುದಾರ ಅಭಿಷೇಕ್ ಸಿಂಗ್ ನನ್ನು ದೆಹಲಿ ನ್ಯಾಯಾಲಯವು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಭಾರತೀಯ ಯೋಗ ತರಬೇತುದಾರನ ವಿರುದ್ಧ ಅತ್ಯಾಚಾರ ಮತ್ತು ವಂಚನೆ ಆರೋಪ ಮಾಡಿರುವ ಇಟಾಲಿಯನ್ ಮಹಿಳೆಗೆ 24/7 ಭದ್ರತೆ ಒದಗಿಸುವಂತೆ ಈ ಹಿಂದೆಯೇ ದೆಹಲಿ ಪೊಲೀಸರಿಗೆ ಪಟಿಯಾಲಾ ಹೌಸ್ ಕೋರ್ಟ್ ಆದೇಶಿಸಿತ್ತು.

ಇಟಾಲಿಯನ್ ಮಹಿಳೆಗೆ 24/7 ಭದ್ರತೆ ನೀಡಲು ಸೂಚಿಸಿದ್ದೇಕೆ ಹೈಕೋರ್ಟ್?ಇಟಾಲಿಯನ್ ಮಹಿಳೆಗೆ 24/7 ಭದ್ರತೆ ನೀಡಲು ಸೂಚಿಸಿದ್ದೇಕೆ ಹೈಕೋರ್ಟ್?

ಇಟಲಿಯ ಮಿಲನ್ ಮೂಲದ ನಿವಾಸಿಯಾಗಿರುವ ಮಹಿಳೆಗೆ ಭಾರತೀಯ ಮೂಲದ ಯೋಗ ತರಬೇತಿದಾರ ಅಭಿಶೇಕ್ ಸಿಂಗ್ ಹಣ ವಂಚಿಸಿದ್ದಲ್ಲದೇ ಮದುವೆ ನೆಪದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಬಗ್ಗೆ ಜನವರಿ.08ರಂದು ಮಹಿಳೆಯ ಪರ ವಕೀಲ ಅಲಕ್ ಅಲೋಕ್ ಶ್ರೀವಸ್ತ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

 Italian Woman Rape Case: Delhi Court Has Remanded To 14-Day Judicial Custody For Yoga Instructor

ಇಟಾಲಿಯನ್ ಮಹಿಳೆಯ ವೀಸಾ ಅವಧಿ ವಿಸ್ತರಣೆ:

ದೆಹಲಿ ಪೊಲೀಸರು ಭದ್ರತೆ ನೀಡುವುದರ ಜೊತೆಗೆ ಅರ್ಜಿ ಇತ್ಯರ್ಥವಾಗುವವರೆಗೂ ಮಹಿಳೆಯ ವೀಸಾ ಅವಧಿ ವಿಸ್ತರಣೆಗೊಳಿಸಬೇಕು. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮಹಿಳೆಗೆ ಉಚಿತವಾಗಿ ಚಿಕಿತ್ಸೆ ನೀಡುವಂತೆ ಹೈಕೋರ್ಟ್ ಸೂಚನೆ ನೀಡಿದೆ.

ಯೋಗ ತರಬೇತುದಾರನ ವಿರುದ್ಧ ಆರೋಪವೇನು?:

2018ರಲ್ಲಿ ಇಟಲಿ ಮೂಲದ ಮಹಿಳೆ ಮತ್ತು ಭಾರತೀಯ ಮೂಲದ ಯೋಗ ತರಬೇತುದಾರ ಅಭಿಷೇಕ್ ಸಿಂಗ್ ಪರಿಚಯವಾಗುತ್ತದೆ. ಭಾರತದಲ್ಲಿ ಯೋಗ ತರಬೇತಿ ಕೇಂದ್ರ ಆರಂಭಿಸಲು ಹಣ ಹೂಡಿದರೆ ಉತ್ತಮ ಆದಾಯ ಗಳಿಸಬಹುದು ಎಂದು ಮಹಿಳೆಗೆ ಆಸೆ ತೋರಿದ್ದಾನೆ. ಅಲ್ಲದೇ 5 ಲಕ್ಷ ರೂಪಾಯಿ ಹಣ ಪಡೆದು ಯೋಗ ಕೇಂದ್ರ ಆರಂಭಿಸಿದ ಅಭಿಷೇಕ್ ಸಿಂಗ್, ಮಹಿಳೆಯ ಜೊತೆಗೆ ಪ್ರೀತಿ ಪ್ರೇಮದ ನಾಟಕ ಆಡಿದ್ದಾನೆ. ನಂತರ ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಕೆ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

English summary
Italian Woman Rape And Cheating Case: Delhi Court Has Remanded To 14-Day Judicial Custody For Yoga Instructor Abhishek Singh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X