ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆರಿಗೆ ವಂಚನೆ ಆರೋಪದಲ್ಲಿ ದೈನಿಕ್ ಭಾಸ್ಕರ್ ಮಾಧ್ಯಮ ಸಂಸ್ಥೆ ಮೇಲೆ ಐಟಿ ದಾಳಿ

|
Google Oneindia Kannada News

ನವದೆಹಲಿ, ಜುಲೈ 22: ತೆರಿಗೆ ವಂಚನೆ ಆರೋಪದಲ್ಲಿ ದೇಶದ ಪ್ರಮುಖ ಮಾಧ್ಯಮ ಸಂಸ್ಥೆ ದೈನಿಕ್ ಭಾಸ್ಕರ್‌ ಗ್ರೂಪ್‌ಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ಗುರುವಾರ ದಾಳಿ ನಡೆಸಿರುವುದಾಗಿ ಅಧೀಕೃತ ಮೂಲಗಳು ತಿಳಿಸಿವೆ.

ಮಾಧ್ಯಮ ಸಂಸ್ಥೆಯ ಕಚೇರಿಗಳಿರುವ ಭೋಪಾಲ್, ಜೈಪುರ, ಅಹಮದಾಬಾದ್ ಹಾಗೂ ಇತರೆ ನಗರಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್ ಹಾಗೂ ದೆಹಲಿಯಲ್ಲಿ ಒಟ್ಟಾರೆ 35 ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ.

IT Raid On Dainik Bhaskar Media Group Over Allegation Of Tax Evasion

ದೈನಿಕ್ ಭಾಸ್ಕರ್ ಮಾಧ್ಯಮ ಸಂಸ್ಥೆಯಿಂದ ತೆರಿಗೆ ಪಾವತಿ ವಂಚನೆಯಾಗಿದೆ ಎಂಬ ಮಾಹಿತಿ ಆಧರಿಸಿ ಶೋಧ ಕಾರ್ಯ ನಡೆಸಲಾಗಿದೆ. ಮಾಧ್ಯಮ ಕ್ಷೇತ್ರದೊಂದಿಗೆ ರಿಯಲ್ ಎಸ್ಟೇಟ್, ಇಂಧನ ಹಾಗೂ ಶಿಕ್ಷಣ ವಲಯದಲ್ಲಿಯೂ ದೈನಿಕ್ ಭಾಸ್ಕರ್ ಹೂಡಿಕೆ ಮಾಡಿದೆ.

ಆದರೆ ತೆರಿಗೆ ಮಂಡಳಿ CBDT ಈ ದಾಳಿ ಸಂಬಂಧ ಯಾವುದೇ ಅಧೀಕೃತ ಹೇಳಿಕೆ ಪ್ರಕಟಿಸಿಲ್ಲ.

ತಮಿಳುನಾಡು; ಎಐಎಡಿಎಂಕೆ ಶಾಸಕರ ಚಾಲಕನೂ ಕೋಟ್ಯಧಿಪತಿ!ತಮಿಳುನಾಡು; ಎಐಎಡಿಎಂಕೆ ಶಾಸಕರ ಚಾಲಕನೂ ಕೋಟ್ಯಧಿಪತಿ!

ಗುರುವಾರವೇ ಮತ್ತೊಂದು ಮಾಧ್ಯಮ ಸಂಸ್ಥೆ ಭಾರತ್ ಸಮಾಚಾರ್ ಸುದ್ದಿ ವಾಹಿನಿ ಕಚೇರಿ ಮೇಲೂ ದಾಳಿ ನಡೆಸಲಾಗಿದೆ. ಆರೇಳು ಸದಸ್ಯರ ತಂಡ ದಾಳಿ ನಡೆಸಿದ್ದು, ಇದನ್ನು ವಾಹಿನಿ ವಿರೋಧಿಸಿದೆ. "ಸ್ವತಂತ್ರ್ಯ ಪತ್ರಿಕೋದ್ಯಮದ ಮೇಲೆ ನಡೆದ ದಾಳಿಯಿದು" ಎಂದು ಟೀಕಿಸಿದೆ.

English summary
Income Tax department raids multiple premises of media group Dainik Bhaskar on thursday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X