ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸಂವಿಧಾನ ಉಳಿಸಿ' ಕಾಂಗ್ರೆಸ್ ನ ಹೊಸ ನಾಟಕ ಎಂದ ಅಮಿತ್ ಶಾ!

|
Google Oneindia Kannada News

ನವದೆಹಲಿ, ಏಪ್ರಿಲ್ 23: ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವದ ಆತ್ಮವನ್ನೇ ನಾಶಗೊಳಿಸಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಕಾಂಗ್ರೆಸ್ಸಿಗೆ ಪ್ರಜಾಪ್ರಭುತ್ವದ ಆಡಳಿತ ಬೇಕಿಲ್ಲ, ಅವರಿಗೆ ಕುಟುಂಬದ ಆಡಳಿತ ಬೇಕು ಅದಕ್ಕೆಂದೇ ಅವರು ಪ್ರಜಾಪ್ರಭುತ್ವಕ್ಕೆ ಎಂದಿಗೂ ಬೆಲೆ ಕೊಡುವುದಿಲ್ಲ ಎಂದು ಅವರು ಗುಡುಗಿದ್ದಾರೆ.

ಹೆಣ್ಣುಮಕ್ಕಳನ್ನು ಬಿಜೆಪಿಗರಿಂದ ರಕ್ಷಿಸಿ: ಮೋದಿ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ ಹೆಣ್ಣುಮಕ್ಕಳನ್ನು ಬಿಜೆಪಿಗರಿಂದ ರಕ್ಷಿಸಿ: ಮೋದಿ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಕರೆನೀಡಲಾದ 'ಸಂವಿಧಾನ ರಕ್ಷಿಸಿ' ಆಂದೋಲನಕ್ಕೆ ದೆಹಲಿಯ ಟಲ್ಕಾಟೊರಾ ಕ್ರೀಡಾಂಗಣದಲ್ಲಿ ಇಂದು ಚಾಲನೆ ದೊರೆತಿತ್ತು.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಬಿಜೆಪಿ ಆಡಳಿತದಲ್ಲಿ ಸಂವಿಧಾನ ಮತ್ತು ದಲಿತರ ಮೇಲೆ ನಡೆಯುತ್ತಿರುವ ದಾಳಿಯನ್ನು ವಿರೋಧಿಸಿ ಕಾಂಗ್ರೆಸ್ 'ಸಂವಿಧಾನ ಉಳಿಸಿ' ಆಂದೋಲನ ನಡೆಸುತ್ತಿದೆ.

Array

ಸಂವಿಧಾನ ರಕ್ಷಿಸಿ!

"ಈ ದೇಶ ಪ್ರತಿಯೊಬ್ಬರದು. ಈ ದೇಶದ ಸಂವಿಧಾನ, ಇನ್ನಿತರ ಸಂಸ್ಥೆಗಳು ಮತ್ತು ಪ್ರತಿಯೊಬ್ಬ ನಾಗರಿಕರನ್ನೂ ರಕ್ಷಿಸುವುದು ಕಾಂಗ್ರೆಸ್ ಪಕ್ಷದ ಕರ್ತವ್ಯ" ಎಂದು ಟ್ವೀಟ್ ಮಾಡುವ ಮೂಲಕ ರಾಹುಲ್ ಗಾಂಧಿ 'ಸಂವಿಧಾನದ ರಕ್ಷಣೆ ಕಾಂಗ್ರೆಸ್ ಕರ್ತವ್ಯ' ಎಂದಿದ್ದರು. ರಾಹುಲ್ ಗಾಂಧಿ ಟ್ವೀಟ್ ಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಹುಲ್ ಗಾಂಧಿ ಅವರನ್ನೂ, ಕಾಂಗ್ರೆಸ್ ಅನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.

'ಸಂವಿಧಾನ ಉಳಿಸಿ' ಅಭಿಯಾನಕ್ಕೆ ಇಂದು ರಾಹುಲ್ ಚಾಲನೆ'ಸಂವಿಧಾನ ಉಳಿಸಿ' ಅಭಿಯಾನಕ್ಕೆ ಇಂದು ರಾಹುಲ್ ಚಾಲನೆ

ಸಂವಿಧಾನದ ಆಶಯ ಅಳಿಸಿದ್ದು ಕಾಂಗ್ರೆಸ್!

ನಮ್ಮ ದೇಶದಲ್ಲಿ ಸಂವಿಧಾನದ ಆಶಯಗಳನ್ನು ನಾಶಪಡಿಸಿದ ಪಕ್ಷವೇನಾದರೂ ಇದ್ದರೆ ಅದು ಕಾಂಗ್ರೆಸ್ ಪಕ್ಷ. ಅವರಿಗೆ ಪ್ರಜಾಪ್ರಭುತ್ವದ ಆಡಳಿತ ಬೇಕಿಲ್ಲ. ಕುಟುಂಬ ರಾಜಕಾರಣದತ್ತ ಮಾತ್ರವೇ ಅವರ ಗಮನ. ಆದ್ದರಿಂದ ಈ ಸಂವಿಧಾನ ರಕ್ಷಿಸಿ ಎಂಬ ಆಂದೋಲನ ಆ ಪಕ್ಷದ ಅಧ್ಯಕ್ಷರ ನಗೆ ಪ್ರಹಸನ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

ನ್ಯಾ.ಲೋಯಾ ಪ್ರಕರಣ: ಅಮಿತ್ ಶಾ ಬಗ್ಗೆ ದೇಶಕ್ಕೇ ಗೊತ್ತು ಎಂದ ರಾಹುಲ್ನ್ಯಾ.ಲೋಯಾ ಪ್ರಕರಣ: ಅಮಿತ್ ಶಾ ಬಗ್ಗೆ ದೇಶಕ್ಕೇ ಗೊತ್ತು ಎಂದ ರಾಹುಲ್

ಅಂಬೇಡ್ಕರ್ ಅವರಿಗೆ ನಿರಂತರ ಅಪಮಾನ

ಭಾರತೀಯ ಸಂವಿಧಾನವನ್ನು ಕಾಂಗ್ರೆಸ್ ಮಾಡಿದ್ದು ಎನ್ನುವ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನ ಮಾಡುವ ತಮ್ಮ ಕುಟುಂಬದ ನಡೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ! ಅಂಬೇಡ್ಕರ್ ಅವರು ಬದುಕಿದ್ದಾಗ ನೆಹರು ಮತ್ತು ಗಾಂಧಿ ಕುಟುಂಬ ಅವರಿಗೆ ಅಪಮಾನ ಮಾಡಿತ್ತು, ಈಗ ಅವರು ಇಲ್ಲವಾದ ಮೇಲೂ ಅದನ್ನೇ ಮುಂದುವರಿಸಿದೆ. ನಿಜಕ್ಕೂ ನಾಚಿಕೆಗೇಡು ಎಂದು ಅವರು ಕಿಡಿಕಾರಿದ್ದಾರೆ.

ಸಂವಿಧಾನವನ್ನು ಕಾಂಗ್ರೆಸ್ಸಿನಿಂದ ರಕ್ಷಿಸಬೇಕಿದೆ

ಸಂವಿಧಾನದ ನಮ್ಮೆಲ್ಲ ಅಂಗಸಂಸ್ಥೆಗಳನ್ನೂ ಕಾಮಗ್ರೆಸ್ ಪಕ್ಷದಿಂದ ರಕ್ಷಿಸಬೇಕಿದೆ. ಕಾಂಗ್ರೆಸ್ ಪಕ್ಷವೇ ಈ ಎಲ್ಲಕ್ಕೂ ದೊಡ್ಡ ಅಪಾಯ. ಆದರೆ ರಾಜಕೀಯ ಲಾಭಕ್ಕಾಗಿ ಅದೇ ಈಗ ಚುನಾವಣಾ ಆಯೋಗ, ಸುಪ್ರೀಂ ಕೋರ್ಟ್, ಸೇನೆಗಳ ಮೇಲೆ ದಾಳಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

English summary
Bharatiya Janata Party (BJP) chief Amit Shah said on Monday that the Congress has destroyed the spirit of the Constitution, as they did not want the rule of democracy but want the rule of the dynasty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X