ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಂತ್ರಜ್ಞಾನವನ್ನು ನಿರಾಕರಿಸುವಂತಿಲ್ಲ: ಆಧಾರ್ ತೀರ್ಪಿನ ಕುರಿತು ಜೇಟ್ಲಿ ಪ್ರತಿಕ್ರಿಯೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 26: ಆಧಾರ್‌ಗೆ ಸಾಂವಿಧಾನಿಕ ಮಾನ್ಯತೆ ನೀಡಿರುವ ಸುಪ್ರಿಂಕೋರ್ಟ್‌ ತೀರ್ಪು ಐತಿಹಾಸಿಕ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಬಣ್ಣಿಸಿದರು.

ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಂತ್ರಜ್ಞಾನವನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ, ಕೇಂದ್ರ ಸರ್ಕಾರವು ತೀರ್ಪನ್ನು ತುಂಬಿದ ಮನಸ್ಸಿನಿಂದ ಸ್ವಾಗತಿಸುತ್ತದೆ ಎಂದು ಅವರು ಹೇಳಿದರು.

ಇಂದು ಸುಪ್ರೀಂ ಕೋರ್ಟ್ ನೀಡಿದ 3 ಐತಿಹಾಸಿಕ ತೀರ್ಪುಗಳ ಸುತ್ತ...ಇಂದು ಸುಪ್ರೀಂ ಕೋರ್ಟ್ ನೀಡಿದ 3 ಐತಿಹಾಸಿಕ ತೀರ್ಪುಗಳ ಸುತ್ತ...

ತಂತ್ರಜ್ಞಾನವನ್ನು ಒಪ್ಪಿಕೊಳ್ಳಲು ನಿರಾಕರಿಸುವಂತಿಲ್ಲ ಎಂಬುದನ್ನು ಆಧಾರ್ ಅನ್ನು ಟೀಕಿಸಿದ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು, ಆಧಾರ್ ಅನ್ನು ವಿರೋಧಿಸಿದ್ದವರ ಹಿಂದಿನ ಮರ್ಮವನ್ನು ಜನ ಅರಿತಿದ್ದಾರೆ ಎಂದು ಆಧಾರ್ ಅನ್ನು ಟೀಕಿಸಿದವರಿಗೆ ಟಾಂಗ್ ನೀಡಿದರು.

 It is a historic order we welcome it: Arun Jaitley

ಯಾವುದಕ್ಕೆ ಆಧಾರ್ ಕಡ್ಡಾಯ? ಯಾವುದಕ್ಕೆ ಕಡ್ಡಾಯವಲ್ಲ? ಚಿತ್ರ ಮಾಹಿತಿಯಾವುದಕ್ಕೆ ಆಧಾರ್ ಕಡ್ಡಾಯ? ಯಾವುದಕ್ಕೆ ಕಡ್ಡಾಯವಲ್ಲ? ಚಿತ್ರ ಮಾಹಿತಿ

ಆಧಾರ್‌ ಅನ್ನು ಜಾರಿಗೆ ತಂದ ಕಾಂಗ್ರೆಸ್‌ ತಮ್ಮನ್ನು ತಾವು ದೂಷಿಸಿಕೊಳ್ಳಬೇಕು, ಆಧಾರ್‌ ಅನ್ನು ಹೇಗೆ ಬಳಸಬೇಕು ಎಂಬುದು ಅವರಿಗೆ ಗೊತ್ತಿರಲಿಲ್ಲ. ಆದರೆ ನಮ್ಮ ಸರ್ಕಾರ ಆಧಾರ್‌ ಅನ್ನು ಪರಿಣಾಮಕಾರಿಯಾಗಿ ಬಳಸುತ್ತಿದ್ದೇವೆ ಎಂದು ಹೇಳಿದರು.

English summary
Aadhaar verdict is a historic order we welcome it says Finanace minister Arun Jaitley. He also said Everyone who has been criticizing Aadhaar should understand that they cannot defy technology.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X