ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯೋಗ ಭದ್ರತೆಗಾಗಿ ಹೋರಾಟಕ್ಕೆ ಒಗ್ಗೂಡಿದ ಟೆಕ್ಕಿಗಳು

By Kiran B Hegde
|
Google Oneindia Kannada News

ನವದೆಹಲಿ, ಫೆ. 2: ಇದುವರೆಗೆ ದಿನಗೂಲಿ ಕೆಲಸಗಾರರು ಹಾಗೂ ತಾತ್ಕಾಲಿಕ ಕೆಲಸಗಾರರು ಸಾಮೂಹಿಕ ವಜಾ ವಿರುದ್ಧ ಪ್ರತಿಭಟನೆ ಮಾಡಿದ್ದನ್ನು ನೋಡಿದ್ದೇವೆ. ಈ ಸಾಲಿಗೆ ಈಗ ದೇಶದ ಅತ್ಯಂತ ಪ್ರತಿಷ್ಠಿತ ಉದ್ಯೋಗಿಗಳು ಎನ್ನಿಸಿಕೊಂಡಿದ್ದ ಟೆಕ್ಕಿಗಳೂ ಸೇರಿಕೊಂಡಿದ್ದಾರೆ.

ಟಿಸಿಎಸ್ ನಂತರ ಐಬಿಎಂ ಕಂಪನಿ ತನ್ನ ನೌಕರರ ಸಾಮೂಹಿಕ ವಜಾಕ್ಕೆ ಸಿದ್ಧತೆ ನಡೆಸಿರುವ ಹಿನ್ನೆಲೆಯಲ್ಲಿ ಹಲವು ಕಂಪನಿಗಳ ಉದ್ಯೋಗಿಗಳು ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಸೇರಿ ಸಭೆ ನಡೆಸಿದ್ದಾರೆ. ಅಲ್ಲದೆ, ಜಂತರ್‌ ಮಂತರ್‌ನಲ್ಲಿ ಒಗ್ಗೂಡಿ "ಐಟಿ ಉದ್ಯಮದಲ್ಲಿ ಉದ್ಯೋಗ ಭದ್ರತೆ ಕೊಡಿ" ಎಂದು ಘೋಷಣೆಯನ್ನೂ ಕೂಗಿದ್ದಾರೆ. [ಐಬಿಎಂ ಉದ್ಯೋಗಿಗಳಿಗೆ ಕಹಿ ಸುದ್ದಿ]

ಟಿಸಿಎಸ್, ವಿಪ್ರೊ, ಐಬಿಎಂ, ಎಚ್‌ಸಿಎಲ್, ಟೆಕ್ ಮಹೀಂದ್ರಾ, ಟೆಲಾಯಿಟ್, ಸ್ಯಾಮ್‌ಸಂಗ್, ಅಕ್ಸೆಂಚರ್ ಸೇರಿದಂತೆ ಇತರ ಕಂಪನಿಗಳ ಉದ್ಯೋಗಿಗಳು ಚೆನ್ನೈ, ಹೈದರಾಬಾದ್, ಪುಣೆ, ಮುಂಬಯಿ, ಬೆಂಗಳೂರು ಇತರ ಸ್ಥಳಗಳಿಂದ ನವದೆಹಲಿ ಬಂದು ಐಟಿ ಪ್ರೊಫೆಶನಲ್ ವೆಲ್‌ಫೇರ್ ಅಸೋಸಿಯೇಶನ್ (ಐಟಿಪಿಡಬ್ಲ್ಯೂಎ) ಭೇಟಿ ಮಾಡಿ ಚರ್ಚಿಸಿದ್ದಾರೆ. [ಸಾಮೂಹಿಕ ವಜಾ : ಕಂಪನಿ ನೌಕರರು ಅರಿಯಬೇಕಾದ್ದು]

software

ಟೆಕ್ಕಿಗಳ ಉದ್ಯೋಗ ರಕ್ಷಣೆಗೆ ಲಭ್ಯವಿರುವ ಕಾನೂನು ಭದ್ರತೆಗಳ ಕುರಿತು ಭಾರತದ ಮಾಜಿ ಸಾಲಿಸಿಟರ್ ಜನರಲ್ ಇಂದಿರಾ ಜೈಸಿಂಗ್ ವಿವರಣೆ ನೀಡಿದ್ದಾರೆ. ಏಕೆಂದರೆ ಸಾಫ್ಟ್‌ವೇರ್ ಕಂಪನಿಗಳು ಉದ್ಯೋಗಿಗಳ ವಜಾಕ್ಕೆ ನೀಡುತ್ತಿರುವ ಕಾರಣ "ಉದ್ಯೋಗಿಗಳ ಪುನರ್‌ ನಿರ್ಮಾಣ" ಎಂಬುದು. [ಉದ್ಯೋಗಿ ವಜಾಕ್ಕೆ ಕೋರ್ಟ್ ತಡೆ]

ಆಂದ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಐಟಿ ಉದ್ಯಮಗಳಿಗೆ ಅಂಗಡಿ, ಮಹಿಳೆ ಕಾಯ್ದೆ ಅನ್ವಯಿಸುತ್ತದೆ. ಆದರೆ, ಕರ್ನಾಟಕದಲ್ಲಿ ಉದ್ಯಮ ಕಾಯ್ದೆಯಡಿ ಬರುತ್ತದೆ. ಸಾಫ್ಟ್‌ವೇರ್ ಉದ್ಯೋಗಿಗಳಿಗೆ ಕೂಡ "ನೌಕರ" ಕಾಯ್ದೆ ಅನ್ವಯಿಸುತ್ತದೆ. [ಟಿಸಿಎಸ್ ವಿರುದ್ಧ ಉದ್ಯೋಗಿಗಳ ದಂಗೆ]

ವಜಾಗೊಳಿಸುವ ಉದ್ಯೋಗಿಗೆ ಪೂರ್ವದಲ್ಲಿಯೇ ನೋಟಿಸ್ ನೀಡಬೇಕು. ಇಲ್ಲಿಯವರೆಗೆ ಸಲ್ಲಿಸಿದ ಸೇವೆಗೆ ವರ್ಷಕ್ಕೆ 15 ದಿನಗಳಂತೆ ಪರಿಹಾರ ಧನ ನೀಡಬೇಕಾಗುತ್ತದೆ. ಆದರೆ, ಈ ಯಾವ ನಿಯಮವನ್ನೂ ಐಟಿ ಕಂಪನಿಗಳು ಪಾಲಿಸುತ್ತಿಲ್ಲ ಎನ್ನಲಾಗಿದೆ.

English summary
IT Professionals came together under one platform in New Delhi to initiate a joint struggle. They met IT Professional Welfare Association (ITPWA) and discussed 'Job Security in IT Industry'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X