ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನ ನೆಲದ ಮೇಲೆ ಕಣ್ಣಿಟ್ಟಿವೆ ಇಸ್ರೋ ಸ್ಯಾಟಲೈಟ್‌ಗಳು!

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 10: ಹಲವು ದೇಶಗಳು ತಮ್ಮ ಸ್ಯಾಟಲೈಟ್‌ಗಳನ್ನು ನಭಕ್ಕೆ ಹಾರಿಸಿವೆ. ಸಂಪರ್ಕ ಮನರಂಜನೆ, ಹವಾಮಾನ ಮಾಹಿತಿ, ಜಿಪಿಎಸ್ ಇನ್ನೂ ಹಲವು ಉಪಯೋಗಗಳಿಗಾಗಿ ಸ್ಯಾಟಲೈಟ್‌ಗಳನ್ನು ಬಳಸಲಾಗುತ್ತದೆ.

Recommended Video

ಪಾಪ ಭಾರತ ಬಡ ದೇಶ ಎಂದ ಪಾಕಿಸ್ತಾನ..? | Chandrayaan 2 | Oneindia Kannada

ಈ ಕಾರಣಗಳಿಗಾಗಿ ಮಾತ್ರವೇ ಅಲ್ಲದೆ, ಶತ್ರು ದೇಶಗಳ ಚಲನವಲನಗಳ ಮೇಲೆ ಕಣ್ಣಿಡಲೂ ಸಹ ಸ್ಯಾಟಲೈಟ್‌ಗಳನ್ನು ಬಳಸಲಾಗುತ್ತದೆ. ಆದರೆ ಅದನ್ನು ಬಹಿರಂಗಗೊಳಿಸುವುದಿಲ್ಲವಷ್ಟೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಇಸ್ರೋ ಸಿಬ್ಬಂದಿಗೆ ಮತ್ತೊಂದು ಆಘಾತ ನೀಡಿದ ಕೇಂದ್ರ ಸರ್ಕಾರಇಸ್ರೋ ಸಿಬ್ಬಂದಿಗೆ ಮತ್ತೊಂದು ಆಘಾತ ನೀಡಿದ ಕೇಂದ್ರ ಸರ್ಕಾರ

ಭಾರತದ ಸ್ಯಾಟಲೈಟ್‌ಗಳೂ ನೆರೆಯ ರಾಷ್ಟ್ರಗಳ ಚಲನವಲನಗಳ ಮೇಲೆ ಕಣ್ಣಿಟ್ಟಿದೆ ಎನ್ನಲಾಗುತ್ತಿದೆ. ಕಣ್ಣಿಟ್ಟಿದೆಯೋ ಇಲ್ಲವೋ ಖಚಿತವಾಗಿ ಹೇಳಲಾಗದಿದ್ದರೂ ನಮ್ಮ ಸ್ಯಾಟಲೈಟ್‌ಗಳಿಗೆ ಪಾಕಿಸ್ತಾನದ ಪೂರ್ಣ ಭೂಭಾಗದ ಮೇಲೆ ಕಣ್ಣಿಡುವಷ್ಟು ಶಕ್ತಿ ಇರುವುದು ಸತ್ಯ. ಭಾರತದ ನಭಕ್ಕೆ ಹಾರಿಸಿರುವ ಕಾರ್ಟೊಸ್ಯಾಟ್‌ ಮಾದರಿಯ ಸ್ಯಾಟಲೈಟ್‌ಗಳಿಗೆ ಈ ಶಕ್ತಿ ಇದೆ. ಸ್ಯಾಟಲೈಟ್‌ನ ಈ ಶಕ್ತಿಯನ್ನು ಭಾರತ ಸರ್ಕಾರ ಬಳಸಿಕೊಳ್ಳದೆ ಇರುತ್ತದೆಯೇ?

ಪಾಕ್ ಸೇನೆಯ ಸಣ್ಣ ಕದಲಿಕೆಯನ್ನೂ ಗುರುತಿಸಬಲ್ಲದು

ಪಾಕ್ ಸೇನೆಯ ಸಣ್ಣ ಕದಲಿಕೆಯನ್ನೂ ಗುರುತಿಸಬಲ್ಲದು

ಪೂರ್ಣ ಭೂಬಾಗದ ಮೇಲೆ ಕಣ್ಣಿಡುವುದು ಮಾತ್ರವಲ್ಲ, ಪಾಕಿಸ್ತಾನದ 87% ಮ್ಯಾಪಿಂಗ್ ಸಹ ನಮ್ಮ ಸ್ಯಾಟಲೈಟ್‌ಗಳು ಮಾಡಬಹುದಾಗಿದೆ. ಪಾಕಿಸ್ತಾನದ ಸೇನಾ ಕದಲಿಕೆ ಸೇರಿದಂತೆ ಉಗ್ರರ ಅಡಗು ತಾಣಗಳು, ಉಗ್ರ ಗುಂಪುಗಳ ಚಲನ ವಲನ, ಭಾರಿ ವಾಹನಗಳ ಸಾಗಣೆಯನ್ನೂ ಸಹ ನಮ್ಮ ಸ್ಯಾಟಲೈಟ್‌ಗಳು ಸುಲಭವಾಗಿ ಗುರುತಿಸಿ ಮಾಹಿತಿ ನೀಡುವ ಶಕ್ತಿ ಹೊಂದಿವೆ.

ಪಾಕ್‌ನಲ್ಲಿ ಇಣುಕಿ ನೋಡಬಹುದಾಗಿದೆ ಎಂದಿದ್ದ ಸಚಿವರು

ಪಾಕ್‌ನಲ್ಲಿ ಇಣುಕಿ ನೋಡಬಹುದಾಗಿದೆ ಎಂದಿದ್ದ ಸಚಿವರು

ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಇಲಾಖೆಯ ರಾಜ್ಯ ಸಚಿವ ಆಗಿದ್ದ ಜಿತೇಂದ್ರ ಸಿಂಗ್ ಜನವರಿಯಲ್ಲಿ ಸುದ್ದಿಗೋಷ್ಠಿಯಲ್ಲೊಮ್ಮೆ ಹೇಳಿದ್ದರು, 'ನಾವು ಈಗ ಪಾಕಿಸ್ತಾನದ ಒಳಕ್ಕೆ ಇಣುಕಿ ನೋಡಬಹುದಾಗಿದೆ' ಎಂದು. ಅವರು ಅಂದು ತಮಾಷೆ ಏನೂ ಮಾಡಿರಲಿಲ್ಲ, ಸತ್ಯವನ್ನೇ ಹೇಳಿದ್ದರು.

ಪಂಚೆಯುಟ್ಟು ಬರಿಗಾಲಲ್ಲಿ ಕಾಲೇಜಿಗೆ ಹೋದವರು ಈಗ ಇಸ್ರೋ ಅಧ್ಯಕ್ಷ: ಶಿವನ್ ಯಶೋಗಾಥೆಪಂಚೆಯುಟ್ಟು ಬರಿಗಾಲಲ್ಲಿ ಕಾಲೇಜಿಗೆ ಹೋದವರು ಈಗ ಇಸ್ರೋ ಅಧ್ಯಕ್ಷ: ಶಿವನ್ ಯಶೋಗಾಥೆ

ಭೂಮಿ ಮೇಲಿನ ವಸ್ತುಗಳ ಚಿತ್ರ ತೆಗೆಯಬಲ್ಲವು

ಭೂಮಿ ಮೇಲಿನ ವಸ್ತುಗಳ ಚಿತ್ರ ತೆಗೆಯಬಲ್ಲವು

ಇಸ್ರೋದ ಸ್ಯಾಟಲೈಟ್‌ಗಳು ಆಕಾಶದ ನಿರ್ವಾತದಿಂದ ಭೂಮಿಯ ಮೇಲಿನ ವಸ್ತುಗಳ ಹೈರೆಸಲ್ಯೂಶನ್‌ ಚಿತ್ರಗಳನ್ನು ತೆಗೆದು ರವಾನಿಸುವ ಶಕ್ತಿ ಸಾಮರ್ಥ್ಯಹೊಂದಿವೆ. ಭೂಮಿಗೆ 0.65 ಮೀಟರ್ ಹತ್ತಿರದಲ್ಲಿರುವ ವಸ್ತುವನ್ನೂ ಸಹ ಖರಾರುವಕ್ಕಾಗಿ ಚಿತ್ರ ತೆಗೆಯಬಲ್ಲದು ಇಸ್ರೊದ ಸ್ಯಾಟಲೈಟ್.

ಹದಿನಾಲ್ಕು ದೇಶಗಳ ಮೇಲೆ ಕಣ್ಣಿಡಬಲ್ಲವು

ಹದಿನಾಲ್ಕು ದೇಶಗಳ ಮೇಲೆ ಕಣ್ಣಿಡಬಲ್ಲವು

ಭಾರತದ ಸ್ಯಾಟಲೈಟ್‌ಗಳು ಪಾಕಿಸ್ತಾನ ಮಾತ್ರವಲ್ಲ ನೆರೆ ಹೊರೆಯ ಹದಿನಾಲ್ಕು ರಾಷ್ಟ್ರಗಳ ಮೇಲೆ ಕಣ್ಣಿಡುವ ಸಾಮರ್ಥ್ಯ ಹೊಂದಿವೆ. ಆದರೆ ಎಲ್ಲ ರಾಷ್ಟ್ರಗಳ ಬಗೆಗಿನ ಮಾಹಿತಿಯನ್ನು ಶೀಘ್ರವಾಗಿ ನೆಲಕ್ಕೆ ರವಾನಿಸಲು ಸಾಧ್ಯವಿಲ್ಲ, ಕೆಲವನ್ನು ತಡವಾಗಿ, ಕೆಲವು ರಾಷ್ಟ್ರಗಳ ಕೆಲವು ಭೂ ಭಾಗಗ ಬಗ್ಗೆ ಮಾತ್ರವೇ ಮಾಹಿತಿಯನ್ನು ಇಸ್ರೋದ ಸ್ಯಾಟಲೈಟ್‌ಗಳು ನೀಡುವ ಸಾಮರ್ಥ್ಯ ಹೊಂದಿವೆ.

ಚಂದ್ರಯಾನ-2 ವಿಕ್ರಂ ಲ್ಯಾಂಡರ್ ಸಂಪರ್ಕ ಕಡಿತ: ಪಾಕಿಸ್ತಾನ ಹೇಳಿದ್ದೇನು?ಚಂದ್ರಯಾನ-2 ವಿಕ್ರಂ ಲ್ಯಾಂಡರ್ ಸಂಪರ್ಕ ಕಡಿತ: ಪಾಕಿಸ್ತಾನ ಹೇಳಿದ್ದೇನು?

ನಮ್ಮ ಮೇಲೂ ಇತರೆ ರಾಷ್ಟ್ರಗಳು ಕಣ್ಣಿಟ್ಟಿವೆ

ನಮ್ಮ ಮೇಲೂ ಇತರೆ ರಾಷ್ಟ್ರಗಳು ಕಣ್ಣಿಟ್ಟಿವೆ

ಇಷ್ಟೆ ಅಲ್ಲ ನಮ್ಮ ದೇಶದ ಮೇಲೂ ಕೆಲ ರಾಷ್ಟ್ರಗಳ ಸ್ಯಾಟಲೈಟ್‌ಗಳು ಕಣ್ಣಿಟ್ಟಿವೆ. ನಮ್ಮ ಸೇನಾ ವಲಯ, ದೊಡ್ಡ-ದೊಡ್ಡ ಪ್ರಾಜೆಕ್ಟ್‌ಗಳು ಹೀಗೆ ಹಲವು ವಿಷಯಗಳನ್ನು ಬೇರೆ ರಾಷ್ಟ್ರಗಳು ಸಹ ಗಮನಿಸುತ್ತಿವೆ.

English summary
Some sources say that ISRO satellites keeping eye on Pakistan land. ISRO satellites have ability to monitor 14 countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X