ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರನಿಗೆ ಝಾಕಿರ್ ನಾಯ್ಕ್ ಸಂಸ್ಥೆಯಿಂದ ರೂ. 80ಲಕ್ಷ ಸ್ಕಾಲರ್ ಶಿಪ್!

ನಿಷೇಧಿತ ಇಸ್ಲಾಮಿಕ್ ರಿಸರ್ಚ್ ಸಂಘಟನೆಯಿಂದ ಶಂಕಿತ ಉಗ್ರನಿಗೆ ವಿದ್ಯಾರ್ಥಿ ವೇತನ ಮಂಜೂರಾಗಿದೆ ಎಂಬ ಮಾಹಿತಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ.

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ನವೆಂಬರ್, 22: ಇಸ್ಲಾಂ ಧರ್ಮಗುರು ಝಾಕಿರ್ ನಾಯ್ಕ್ ಅವರ ನಿಷೇಧಿತ ಇಸ್ಲಾಮಿಕ್ ರಿಸರ್ಚ್ ಸಂಘಟನೆಯು ಐಸ್ ಉಗ್ರನೆಂದು ತನಿಖೆ ಎದುರಿಸುತ್ತಿರುವ ಅಬು ಅನಾಸ್ ಗೆ 80ಲಕ್ಷ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡಿತ್ತು ಎಂಬುದನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಪತ್ತೆ ಮಾಡಿದೆ.

ಅಕ್ಟೋಬರ್ 2015ರಲ್ಲಿ ಭಾರತದಲ್ಲಿ ಐಸ್ ಉಗ್ರ ಚಟುವಟಿಕೆಗಳನ್ನು ನಡೆಸುವುದಕ್ಕಾಗಿ ಐಸ್ ಉಗ್ರ ಸಂಘಟನೆಯಿಂದ ವಿದ್ಯಾರ್ಥಿ ವೇತನವನ್ನು ಪಡೆದಿರುವ ಆರೋಪ ಅಬು ಅನಾಸ್ ಮೇಲಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ ಈ ಕುರಿತು ಅಬು ಅನಾಸ್ ನನ್ನು ವಿಚಾರಣೆ ನಡೆಸುತ್ತಿದೆ.[ಝಾಕಿರ್ ನಾಯಕ್ ಬೆಂಬಲಿಸಿ ಮಂಗಳೂರಿನಲ್ಲಿ ಪ್ರತಿಭಟನೆ]

ISIS recruit got Rs 80 lakh scholarship from Zakir Naik's NGO

ಸಿರಿಯಾದಲ್ಲಿ ಪ್ರಬಲವಾಗಿರುವ ಐಸ್ ಉಗ್ರ ಸಂಘಟನೆ ಸೇರಲು ಪ್ರಯತ್ನಿಸುತ್ತಿದ್ದ ಎಂಬ ಆರೋಪದ ಮೇಲೆ ಅನಾಸ್ ನನ್ನು 2016ರ ಜನವರಿಯಲ್ಲಿ ಪೊಲೀಸರು ಬಂಧಿಸಿದ್ದರು.

ರಾಷ್ಟ್ರೀಯ ತನಿಖಾ ಸಂಸ್ಥೆ ಸಿಬ್ಬಂದಿ ಝಾಕಿರ್ ನಾಯ್ಕ್ ನಡೆಸುತ್ತಿರುವ ಸ್ವಯಂ ಸೇವಾ ಸಂಸ್ಥೆಗೆ ಸಂಬಂಧಿಸಿದಂತೆ 20 ವಿವಿಧ ಸ್ಥಳಗಳಲ್ಲಿ ತನಿಖೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಹಲವು ಮಹತ್ವದ ದಾಖಲೆಗಳುನ್ನು ವಶಪಡಿಸಿಕೊಂಡಿದ್ದಾರೆ.

ಹಾರ್ಮನಿ ಮಾಧ್ಯಮ ಸಂಸ್ಥೆ, ಲಾಂಗ್ ಲಾಸ್ಟ್ ಕನ್ಷ್ಟ್ರಕ್ಷನ್, ರೈಟ್ ಪ್ರಾಪರ್ಟಿ ಸಲ್ಯೂಷನ್, ಮೆಜೆಸ್ಟಿಕ್ ಪರ್ಫ್ಯೂಮ್ಸ್ ನಂತಹ ಹಲವು ಖಾಸಗಿ ಸಂಸ್ಥೆಗಳೊಂದಿಗೆ ಝಾಕಿರ್ ನಾಯ್ಕ್ ಇಸ್ಲಾಮಿಕ್ ರಿಸರ್ಚ್ ಸಂಘಟನೆ ವ್ಯವಹಾರ ನಡೆಸಿರುವ ಬಗ್ಗೆ ದಾಖಲೆಗಳಲ್ಲಿ ಮಾಹಿತಿ ಇದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.

ಸಂಸ್ಥೆಗೆ ಹಣ ಎಲ್ಲಿಂದ ಬರುತ್ತಿತ್ತು ಮತ್ತು ಹೇಗೆ ಖರ್ಚಾಗುತ್ತಿತ್ತು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

English summary
The probe being conducted by the National Investigation Agency has revealed that Abu Anas a suspect in the ISIS case had received a scholarship from the banned Islamic Research Foundation run by Dr Zakir Naik.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X