ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎಸ್ಐಎಸ್ ಪಕ್ಕಾ ದುಷ್ಟ ಸಂಘಟನೆ: ಒಬಾಮಾ

By Kiran B Hegde
|
Google Oneindia Kannada News

ನವದೆಹಲಿ, ನ. 17: ಅಮೆರಿಕ ಸೇನೆಯ ದಾಳಿ ಮಧ್ಯೆಯೂ ಮೊಂಡುತನ ಮುಂದುವರಿಸಿರುವ ಐಎಸ್ಐಎಸ್ ಮತ್ತೋರ್ವ ಅಮೆರಿಕ ಮೂಲದ ಸ್ವಯಂ ಸೇವಕನ ಶಿರಚ್ಛೇದ ಮಾಡಿದೆ.

ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ, ಸ್ವಯಂ ಸೇವಕನ ಶಿರಚ್ಛೇದ ಮಾಡಿದ ಐಎಸ್ಐಎಸ್ ಒಂದು 'ಪಕ್ಕಾ ದುಷ್ಟ' ಸಂಘಟನೆ ಎಂದು ಖಂಡಿಸಿದ್ದಾರೆ.

isis

ಐಎಸ್ಐಎಸ್ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಸಿರಿಯಾ ಸೈನಿಕರು ಎನ್ನಲಾದ ಸುಮಾರು 18 ಜನರನ್ನು ಸಾಮೂಹಿಕವಾಗಿ ಶಿರಚ್ಛೇದ ಮಾಡಲಾಗಿದೆ. ಅಲ್ಲದೆ, ಇರಾಕ್‌ಗೆ ಮತ್ತಷ್ಟು ಸೈನ್ಯವನ್ನು ಕಳುಹಿಸದಂತೆ ಅಮೆರಿಕಕ್ಕೆ ಎಚ್ಚರಿಕೆ ನೀಡಲಾಗಿದೆ. [ಅಲ್ಲಿ ಐಎಸ್ಐಎಸ್-ಅಲ್ ಖೈದಾ, ಇಲ್ಲಿ ಸಿಮಿ-ಐಎಂ ಸ್ನೇಹ?]

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸ್ವಯಂ ಸೇವಕ ಪೀಟರ್ ಕಾಸಿಗ್‌ನ ತಂದೆ, ನನ್ನ ಮಗ ಇರಾಕ್‌ನಲ್ಲಿ ನಡೆಯುತ್ತಿದ್ದ ರಕ್ತಪಾತದಿಂದ ಆತಂಕಗೊಂಡಿದ್ದ. ಅಲ್ಲಿನ ಸಂತ್ರಸ್ತರಿಗೆ ಸಹಕರಿಸುವ ಉದ್ದೇಶದಿಂದ ಇರಾಕ್‌ಗೆ ತೆರಳಿದ್ದ. ಆದರೆ, ಆತನನ್ನು ಭಯಂಕರವಾಗಿ ಹತ್ಯೆಗೈಯಲಾಗಿದೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ. [ಇರಾಕ್ ಉಗ್ರರ ಜತೆ ಬೆಂಗಳೂರು ಯುವಕ]

26 ವರ್ಷ ವಯಸ್ಸಿನ ಯುವಕ ಪೀಟರ್ ಕಾಸಿಗ್ ಇಸ್ಲಾಂಗೆ ಮತಾಂತರಗೊಂಡು ಅಬ್ದುಲ್ ರಹಮಾನ್ ಎಂದು ಹೆಸರು ಬದಲಿಸಿಕೊಂಡಿದ್ದರೂ ಉಗ್ರರು ಕನಿಕರ ತೋರಿಲ್ಲ.

English summary
US president Barak Obama condemned isis as 'pure evil' which has beheaded an American aid worker. The video also showed the gruesome simultaneous beheading of 18 men described as Syrian military personnel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X